ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ದೇವಸ್ಥಾನದಲ್ಲಿ ವೆಜ್ ಅನ್ನು ಪ್ರಸಾದವಾಗಿ ಬಹುತೇಕ ದೇವಸ್ಥಾನಗಳಲ್ಲಿ ಕೊಡುವುದು ವಾಡಿಕೆ. ಆದರೆ ಈ ದೇವಾಯಲದಲ್ಲಿ ಭಕ್ತರಿಗೆ ಬಿರಿಯಾನಿಯೇ ಪ್ರಸಾದವಂತೆ ಅಚ್ಚರಿ ಅನಿಸಿದರೂ ಸತ್ಯ. ಈ ದೇವಾಯದಲ್ಲಿ ಬಿರಿಯಾನಿಯನ್ನೇ ಭಕ್ತ ಸಮೂಹಕ್ಕೆ ಪ್ರಸಾದವಾಗಿ ಕೊಡುವ ಏಕೈಕ ದೇವಾಲಯವಿದು.
ಪ್ರತಿ ದೇವಾಲಯಗಳಲ್ಲಿ ವಿಶಿಷ್ಟವಾದ ಪ್ರಸಾದವನ್ನು ಕೊಡಲಾಗುತ್ತದೆ ಆದರೆ ಈ ದೇವಾಲಯದಲ್ಲಿ ಬೇರೆ ತರಹದ್ದೇ ವಿಶಿಷ್ಟತೆ ಕಾಣಬಹುದು. ಅಷ್ಟಕ್ಕೂ ಈ ದೇವಾಲಯ ಎಲ್ಲಿದೆ ಹಾಗೂ ಇದರ ವಿಶೇಷತೆ ಏನು ಇಲ್ಲಿ ಬಿರಿಯಾನಿಯನ್ನೇ ಯಾಕೆ ಪ್ರಸಾದವಾಗಿ ಕೊಡಲಾಗುತ್ತದೆ ನೋಡಿ.
ಈ ದೇವಾಲಯ ಇರೋದು ತಮಿಳುನಾಡಿನ ಮಧುರೈನಲ್ಲಿರುವ ವಡಕ್ಕಂಪಟ್ಟಿ ಎಂಬ ಹಳ್ಳಿಯಲ್ಲಿ ಇಲ್ಲಿ ಸುಮಾರು 1937ರಿಂದ ಬಿರಿಯಾನಿಯನ್ನು ಪ್ರಸಾದವಾಗಿ ನೀಡಲಾಗುತ್ತಿದೆ. ಈ ಹಳ್ಳಿಯ ಗ್ರಾಮ ದೇವತೆ ಮುನಿಯಾಂದಿ ಎಂಬುದಾಗಿ ಈ ದೇವತೆಯ ಹೆಸರಿನಲ್ಲಿ ಗುರುಸಾಮಿ ನಾಯ್ಡು ಎಂಬವರು ಹೋಟೆಲ್ ಒಂದನ್ನು ಆರಂಭಿಸಿದ್ದರು. ಇದಾದ ಬಳಿಕ ಇದೆ ಹೆಸರಿನಲ್ಲಿ ಹಲವು ಹೋಟೆಲ್ ನಿರ್ಮಾಣವಾಗಿವೆ.
ಈ ಎಲ್ಲ ಹೋಟೆಲ್ ಗಳು ಉತ್ತಮವಾದ ಹಾಗೂ ರುಚಿಯಾದ ಮಾಂಸಾಹಾರಿ ಆಹಾರವನ್ನು ಗ್ರಾಹಕರಿಗೆ ನೀಡಿ ಫೇಮಸ್ ಆಗಿವೆ ಹಾಗಾಗಿ ಇಲ್ಲಿ ಬರುವಂತ ಭಕ್ತರಿಗೆ ಹೋಟೆಲ್ ಮಾಲೀಕರು ಬಿರಿಯಾನಿಯನ್ನು ಪ್ರಸಾದವಾಗಿ ಕೊಡುತ್ತಾರೆ.ಇಡೀ ದಕ್ಷಿಣ ಭಾರತದಲ್ಲಿ ಈಗ ಸುಮಾರು 1500 ಕ್ಕೂ ಹೆಚ್ಚು ಮುನಿಯಾಂದಿ ಹೋಟೆಲ್ ಗಳಿವೆ.
ಆದ್ದರಿಂದ ಈ ಎಲ್ಲ ಹೋಟೆಲ್ ಮಾಲೀಕರು ಮುನಿಯಾಂದಿ ದೇವಿಯ ಹೆಸರಲ್ಲಿ ಹಬ್ಬವನ್ನು ಆಯೋಜಿಸಿ ಒಂದುಗೂಡುತ್ತಾರೆ. ಈ ವೇಳೆ ಮಟನ್ ಬಿರಿಯಾನಿಯನ್ನೇ ಪ್ರಸಾದವಾಗಿ ವಿತರಿಸಲಾಗುತ್ತದೆ.