ಸಂಸಾರದಲ್ಲಿ ಹಲವು ಕಷ್ಟಗಳನ್ನು ನಿವಾರಣೆಗೆ ದೇವರು ಮೊರಯಾಗುವುದು ನಾವು ಸಹಜ. ಜೀವನದಲ್ಲಿ ಎಷ್ಟು ಬಾರೀಸೋಲುಗಳನ್ನು ನಾವು ನೋಡಿರುತ್ತೆವೆ. ಅದರ ಪರಿಹಾರಕ್ಕೆ ಹಲವು ಪೂಜೆ ಮಾಡಿರುತ್ತೆವೆ. ಒಂದು ಬಾರೀ ಈ ದೇವರ ಪೋಟೋಗಳ ಪೂಜೆ ಮಾಡಿ.
ಮನೆಯಲ್ಲಿ ಗಣೇಶ,ಲಕ್ಷ್ಮೀ ಹಾಗೂಸರಸ್ವತಿಯರ ಫೋಟೋಇರಬೇಕು.ಮುಖ್ಯವಾಗಿ ಕೆಲಸಗಳಿಗೆ ವಿಘ್ನಗಳು ಎದುರಾಗದಂತೆ ಗಣೇಶನ ಕೃಪೆ ಆವಶ್ಯಕ. ಹಾಗೆಯೇ ನಿರ್ವಿಘ್ನದಾಯಕವಾಗಿ ನಿರಂತರವಾದ ಅರ್ಥವ್ಯವಸ್ಥೆ ಒಂದು ಸಂಪನ್ನತೆಗೆ ಸಾಗಬೇಕಾ?
ಇದಕ್ಕೆ ಲಕ್ಷ್ಮೀ ಕಟಾಕ್ಷಬೇಕು. ಅದಕ್ಕಾಗಿ ಶ್ರೀಲಕ್ಷ್ಮೀ ಮನೆಯಲ್ಲಿ ಸ್ಥಿರಗೊಂಡಿರಬೇಕು. ಪ್ರಾಣಕ್ಕೂ ಕೂಡ ಅಪಾಯಕಟ್ಟಿಟ್ಟ ಬುತ್ತಿ. ಹೀಗಾಗಿ ಜ್ಞಾನವನ್ನು ಹೊಂದಬೇಕಾದರೆ ಸರಸ್ವತಿಯ ಕೃಪೆ ನಿಮಗೆ ತುಂಬಾ ಆವಶ್ಯಕವಾಗಿದೆ. ನೀವು ಗಣೇಶನ ಆರಾಧನೆಯಿಂದಾಗಿ ಶಿವಪಾರ್ವತಿಯರು ಪ್ರಸನ್ನಗೊಳ್ಳುತ್ತಾರೆ. ಶ್ರೀಲಕ್ಷ್ಮೀಯ ಪ್ರಸನ್ನತೆ ಇದ್ದಲ್ಲಿ ವಿಷ್ಣುವಿನ ಆಶೀರ್ವಾದ ಕಟ್ಟಿಟ್ಟ ಬುತ್ತಿ. ಸರಸ್ವತಿಯೇ ಪ್ರಜಾಪಿತನಾದ ಬ್ರಹ್ಮನ ಪತ್ನಿಯಾಗಿರುವುದ ರಿಂದ ಶ್ರೀವಾಣಿಯ ಕೃಪೆಯಿಂದಾಗಿ ಬ್ರಹ್ಮನ ಅನುಗ್ರಹ ಕೂಡ ಪ್ರಾಪ್ತಿಯಾಗುತ್ತದೆ.
ಅಂತೂ ಗಣೇಶ ಲಕ್ಷ್ಮೀ ಸರಸ್ವತಿಯರಿಂದಾಗಿ ನಿರ್ವಿಘ್ನತೆ ಸಂಪತ್ತು ಹಾಗೂ ಜ್ಞಾನದ ಕೊಡಗಳು ತುಂಬಿರುತ್ತವೆ ಬದುಕು ಹಸನಾಗಿರುತ್ತದೆ. ಸೃಷ್ಟಿ ಸ್ಥಿತಿ ಹಾಗೂ ಲಯಗಳಿಗೆ ಅಧಿಪತಿಗಳಾದ ಬ್ರಹ್ಮ ವಿಷ್ಣು ಮಹೇಶ್ವರರ ಕೃಪಾ ಶೀರ್ವಾದಗಳು ಕೂಡ ನಿಸ್ಸಂಶಯ ಆಸ್ತಿ. ಇದರಿಂದಾಗಿ ಮೂವತ್ಮೂರು ಕೋಟಿ ದೇವತೆಗಳ ರಕ್ಷಣಾತ್ಮಕ ನಿಲುವು ಅಷ್ಟ ದಿಗ್ಗಜಗಳು ಅಷ್ಟಾಂಗಗಳು, ಅಷ್ಟಸಿದ್ಧಿಗಳು ಅಷ್ಟಶೋಭೆಗಳು, ಅಷ್ಟಭೋಗಗಳು ಅಷ್ಟಮಂಗಲಾವೃತ ಸುಸ್ಥಿತಿಗಳು, ಅಷ್ಟದಿಕ್ಕುಗಳಿಂದ ಉತ್ತಮಫಲಗಳು, ಅಷ್ಟ ಐಶ್ವರ್ಯಗಳು, ಪ್ರಸನ್ನತೆ ತೇದಿಯೊಂದಿಗೆ ಒದಗಿಬರುತ್ತದೆ.