ಬಿಸಿ ಮತ್ತು ತಣ್ಣಗಿನ ನೀರನ್ನು ಕಾಲಿನ ಉಪಚಾರಕ್ಕಾಗಿ ಬದಲಾಯಿಸುವುದು ರಕ್ತ ಪ್ರಸಾರವನ್ನು ಉತ್ತೇಜಿಸುತ್ತದೆ. ಸುಧಾರಿತ ರಕ್ತ ಪರಿಚಲನೆ ಹಿಮ್ಮಡಿ ನೋವಿನಿಂದ ನಿಮಗೆ ಉಪಶಮನವನ್ನು ನೀಡುತ್ತದೆ.
ಐಸ್: ಹಿಮ್ಮಡಿ ನೋವಿನ ನಿವಾರಣೆಗೆ ಐಸ್ ಅನ್ನು ಬಳಸಿಕೊಳ್ಳಬಹುದಾಗಿದೆ. ನೋವನ್ನು ಇದು ಜೋಮು ಹಿಡಿಸುವುದರಿಂದ ಹಿಮ್ಮಡಿಯ ನೋವಿಗೆ ಪರಿಹಾರವನ್ನು ಶೀಘ್ರವೇ ಒದಗಿಸುತ್ತದೆ.
ಎಪ್ಸಮ್ ಉಪ್ಪು : ಹಿಮ್ಮಡಿಯ ನೋವಿನಿಂದ ನಿಮಗೆ ತ್ವರಿತ ಉಪಶಮನವನ್ನು ಈ ಉಪ್ಪು ನೀಡುತ್ತದೆ. ಇದು ಸಲ್ಫೇಟ್ ಅಂಶಗಳನ್ನು ಒಳಗೊಂಡಿರುವುದರಿಂದ ಇದು ಯಾವುದೇ ನೋವು ಅತವಾ ಉರಿಯೂತವನ್ನು ನಿಭಾಯಿಸುತ್ತದೆ. ತ್ವರಿತ ಉಪಶಮನಕ್ಕಾಗಿ, ಎಪ್ಸಮ್ ಉಪ್ಪು ನೀರಿನಲ್ಲಿ ಪಾದಗಳನ್ನು ಮುಳುಗಿಸಿಡಿ.
ಲವಂಗದೆಣ್ಣೆ: ಉಪಶಮನ ಮಾಡುವ ಅಂಶಗಳನ್ನು ಒಳಗೊಂಡಿರುವುದರಿಂದ ಲವಂಗದೆಣ್ಣೆ ಹಿಮ್ಮಡಿ ನೋವಿಗೆ ಅತ್ಯುತ್ತಮ ಎಂದೆನಿಸಿದೆ. ನಿಮ್ಮ ಪಾದಗಳನ್ನು ಲವಂಗದೆಣ್ಣೆಯಿಂದ ಮಸಾಜ್ ಮಾಡಿ ಇದು ರಕ್ತ ಪರಿಚಲನೆಯನ್ನು ಸುಧಾರಿಸಿ ನೋವಿನಿಂದ ತ್ವರಿತ ಪರಿಹಾರವನ್ನು ಒದಗಿಸುತ್ತದೆ.
ಮೆಣಸಿನ ಹುಡಿ ಮತ್ತು ಬಿಸಿ ನೀರು: ಹಿಮ್ಮಡಿ ನೋವನ್ನು ಉಪಶಮನಗೊಳಿಸುವ ಮೆಣಸಿನ ಹುಡಿ ಮತ್ತು ಬಿಸಿ ನೀರಿನ ಪರಿಹಾರವನ್ನು ನಿಮಗೆ ಮನೆಯಲ್ಲೇ ಮಾಡಿಕೊಳ್ಳಬಹುದಾಗಿದೆ. ಸ್ನಾಯುಗಳ ಗಾಯಗಳಿಗಾಗಿ ಹಿಂದಿನಿಂದಲೂ ಜನರು ಇದೇ ಪರಿಹಾರವನ್ನು ಬಳಸುತ್ತಾ ಬಂದಿದ್ದಾರೆ. ಮೆಣಸಿನ ಹುಡಿಯನ್ನು ಬಿಸಿ ನೀರಿನಲ್ಲಿ ಬೆರೆಸಿಕೊಂಡು ಅದರಲ್ಲಿ ನಿಮ್ಮ ಪಾದಗಳನ್ನು ನೆನೆಸಿ ಇದರಿಂದ ನೋವು ಪರಿಹಾರವಾಗುತ್ತದೆ.