ತೂಕ ಇಳಿಸುವ ಡಯಟ್‌ ಪ್ಲಾನ್‌ನಲ್ಲಿರುವವರು ಅನೇಕ ಕಟ್ಟ ಕಟ್ಟುಪಾಡುಗಳ ಜೀವನ ನಡೆಸುತ್ತಾರೆ. ತೂಕ ಇಳಿಯುವ ವರೆಗೆ ನಾನು ಎಣ್ಣೆ ಪದಾರ್ಥ ತಿನ್ನಲ್ಲ, ಕೊಬ್ಬಿನಾಂಶ ಹೆಚ್ಚಿರುವ ಆಹಾರಗಳನ್ನು ಮುಟ್ಟುವುದಿಲ್ಲ ಇತ್ಯಾದಿ ಇತ್ಯಾದಿ..

ಅದರಂತೆಯೇ ಈ ತಿನ್ನಬಾರದೆಂಬ ಆಹಾರಗಳ ಪಟ್ಟಿಯಲ್ಲಿ ಬಹುತೇಕರ ಫೇವರೆಟ್‌ ಐಸ್‌ಕ್ರೀಂನ್ನೂ ಸೇರಿಸುವುದಿದೆ.

ಡಯಟ್‌ ಪ್ಲಾನಿಂಗ್‌ ವೇಳೆ ಈ ನಿರ್ಧಾರ ಅನವಶ್ಯಕ. ಸತ್ಯ ಹೇಳಬೇಕೆಂದರೆ, ನಿಯಮಿತವಾಗಿ ಐಸ್‌ಕ್ರೀಂ ತಿನ್ನುವುದು ತೂಕ ಇಳಿಸಲು ಸಹಕಾರಿಯಂತೆ.

ನ್ಯಾಚುರಲ್‌ ಐಸ್‌ಕ್ರೀಂಗಳು ಈ ನಿಟ್ಟಿನಲ್ಲಿ ಹೆಚ್ಚು ಉಪಕಾರಿ ಎನ್ನಲಾಗಿದ್ದು, ಆಹಾರ ಪದಾರ್ಥಗಳಲ್ಲಿ ಸಂಯಮ ಇರಿಸಿಕೊಂಡು ಐಸ್‌ ಕ್ರೀಂ ತಿಂದಲ್ಲಿ, ತೂಕ ಇಳಿಕೆಯಲ್ಲಿ ಸಹಕಾರಿಯೇ ಆಗುತ್ತದೆ ಎಂದು ತಿಳಿದು ಬಂದಿದೆ.

ಹೇಗೆ ಸಾಧ್ಯ: ಐಸ್‌ ಕ್ರೀಂನಲ್ಲಿರುವ ಅಂಶ, ನಿಮ್ಮಲ್ಲಿರುವ ಕೊಬ್ಬಿನಾಂಶವನ್ನು ಕರಗಿಸಲು ಸಹಕರಿಸುತ್ತದೆ. ಅಧಿಕ ಕ್ಯಾಲೋರಿಗಳನ್ನು ಕರಗಿಸುವಲ್ಲಿ ಐಸ್‌ಕ್ರೀಂ ಉತ್ತಮ ಸಾಥ್‌ ನೀಡುತ್ತದೆ. ಇಷ್ಟೇ ಅಲ್ಲ, ನಿಮ್ಮ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಲೂ ಇವು ಸಹಕಾರಿ ಎನ್ನಲಾಗಿದೆ. ಆದರೆ ಶಿಸ್ತು ಬದ್ಧ ಆಹಾರ ಹಾಗೂ ಜೀವನ ಪದ್ಧತಿ ರೂಪಿಸಿಕೊಳ್ಳುವುದು ಮಾತ್ರ ನಿಮ್ಮದೇ ಜವಾಬ್ದಾರಿ! ಲೊ-ಫ್ಯಾಟ್‌, ಹೈ ಫೈಬರ್‌ ಡಯಟ್‌ ಪ್ಲಾನ್‌ಗಳಲ್ಲಿ ಐಸ್‌ಕ್ರೀಂ ಬೆಸ್ಟ್‌ ಸಾಥ್‌ ನೀಡುತ್ತದೆ.

Leave a Reply

Your email address will not be published. Required fields are marked *