ಹೌದು ಸಾಮಾನ್ಯವಾಗಿ ಮನೆಗಳಲ್ಲಿ ಮಲಗಿದಾಗ ಅಥವಾ ಬೇರೆ ಕಡೆ ಇದ್ದ ಸಮಯದಲ್ಲಿ ನಮ್ಮ ಕಿವಿಯೊಳಗೆ ಕೆಲವೊಂದು ಕ್ರಿಮಿ ಕೀಟಗಳು ಹೋಗಿ ತುಂಬಾನೇ ತೊಂದ್ರೆ ಮತ್ತು ನೋವುಂಟು ಮಾಡುತ್ತವೆ, ಹಾಗಾಗಿ ಇಂತ ಕ್ರಿಮಿ ಕೀಟಗಳು ಹೋದಾಗ ಹಾಗುವ ನೋವು ಬಾದೆ ತಡೆಯಲು ನೀವು ಆ ಕೀಟವನ್ನು ಹೊರತೆಗೆಯಬೇಕು, ಹೇಗೆ ಹೊರ ತೆಗೆಯಬೇಕು ಅನ್ನೋದು ಇಲ್ಲಿದೆ ನೋಡಿ.

ರಾತ್ರಿ ವೇಳೆ ಮಲಗಿರುವಂತ ಸಂದರ್ಭದಲ್ಲಿ ಕಿವಿಯಲ್ಲಿ ಕ್ರಿಮಿ ಕೀಟಗಳು ಸೇರಿಕೊಂಡರೆ ನಿದ್ರೆ ಮಾಡಲು ಆಗುವುದಿಲ್ಲ ಆಷ್ಟೊಂದು ಹಿಂಸೆ ನೀಡುತ್ತದೆ, ಅಂತಹ ಸಂದರ್ಭದಲ್ಲಿ ಆತುರ ಪಡದೆ ನಿಧಾನವಾಗಿ ಪರಿಹಾರ ಕಂಡುಕೊಳ್ಳಿ. ಕಿವಿಯಲ್ಲಿ ಕಡ್ಡಿ ಹಾಕದೆ ಪಿನ್ ಚುಚ್ಚದೆ ಹೇಗೆ ಬೇಕೋ ಹಾಗೆ ವಿವಿಧ ಉಪಕರಣಗಳನ್ನು ಬಳಸದೆ, ಉತ್ತಮವಾದ ಸೂಕ್ತ ವಿಧಾನವನ್ನು ಅನುಸರಿಸಿ ಮೊದಲನೆಯ ವಿಧಾನ: ಕಿವಿಯನ್ನು ನೆಲಕ್ಕೆ ತಾಕುವಂತೆ ಮಾಡಿ ಕ್ರಿಮಿ ಕೀಟಗಳು ಕೆಳಗೆ ಬೀಳುವಂತೆ ಮಾಡಿ.

ಎರಡನೇ ವಿಧಾನ: ಮನೆಯಲ್ಲಿನ ಉಪ್ಪನ್ನು ನೀರಿನಲ್ಲಿ ಕಲಸಿ ೨-೩ ಹನಿ ಕಿವಿಯಲ್ಲಿ ಹಾಕಿಕೊಂಡು ೧ ನಿಮಿಷದ ನಂತರ ಕಿವಿಯನ್ನು ಕೆಳಗೆ ಮಾಡಿ, ಇದರಿಂದ ಸೇರಿಕೊಂಡಿರುವ ಕ್ರಿಮಿ ಕೀಟಗಳು ಹೊರ ಬರುತ್ತವೆ.

ಮೂರನೇ ವಿಧಾನ: ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಬೆಚ್ಚಗೆ ಮಾಡಿ ಕಿವಿಯಲ್ಲಿ ಹಾಕಿ ಸ್ವಲ್ಪ ಹೊತ್ತು ಬಿಟ್ಟು ಕಿವಿಯನ್ನು ಉಲ್ಟಾ ಮಾಡಿ. ಹೀಗೆ ಮಾಡಿ ಇದರಿಂದ ಪರಿಹಾರ ಕಂಡುಕೊಳ್ಳಬಹುದು. ಈ ಮೂರೂ ವಿಧಾನದಲ್ಲಿ ನಿಮಗೆ ಯಾವುದು ಸುಲಭವೋ ಅದನ್ನು ಅನುಸರಿಸಿ, ಇದಕ್ಕೆಲ್ಲ ಪರಿಹಾರ ಸಿಗದೇ ಇದ್ರೆ ನಿಮ್ಮ ಹತ್ತಿರದ ವೈದ್ಯರನ್ನು ಸಂಪರ್ಕಿಸಿ.

Leave a Reply

Your email address will not be published. Required fields are marked *