ಕೆಲಸದ ಒತ್ತಡ ಇನ್ನು ಹಲವಾರು ಸಮಸ್ಯೆಗಳಿಗೆ ತಲೆನೋವು ಸಮಸ್ಯೆ ಅನ್ನೋದು ಸಾಮಾನ್ಯವಾಗಿ ಕಾಡುವ ಸಮಸ್ಯೆಯಾಗಿದೆ. ಈ ತಲೆನೋವು ಸಮಸ್ಯೆ ಪ್ರತಿಯೊಬ್ಬರಿಗೂ ಕಾಡುವ ಸಾಮಾನ್ಯವಾದ ಸಮಸ್ಯೆಯಾಗಿದೆ. ಸರಿಯಾದ ಸಮಯಕ್ಕೆ ಊಟ ಮಾಡದೇ ಇರುವುದರಿಂದ, ಅಥವಾ ದೂರದ ಪ್ರಯಾಣ ಮಾಡುವುದರಿಂದ ಹಾಗು ಮಾನಸಿಕ ಒತ್ತಡದಿಂದ ಹಾಗು ಹಲವಾರು ಟೆನ್ಶನ್ ಗಳಿಂದ ಕೂಡ ತಲೆ ನೋವು ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆಗೆ ಪರಿಹಾರ ನಿಮ್ಮ ಮನೆಯಲ್ಲಿಯೇ ಇದೆ ನೋಡಿ.
ಈ ಸಮಸ್ಯೆಗಳಿಗೆ ಪ್ರತಿದಿನ ಮಾತ್ರೆಗಳನ್ನು ತೆಗೆದುಕೊಳ್ಳುವ ಬದಲು ಮನೆಯಲ್ಲಿಯೇ ಅಂದರೆ ಅಡುಗೆ ಮನೆಯಲ್ಲಿಯೇ ಇರುವಂತಹ ಪದಾರ್ಥಗಳನ್ನು ಬಳಸುವುದರ ಮೂಲಕ ದೇಹಕ್ಕೆ ಯಾವುದೇ ತೊಂದರೆಯಾಗದಂತೆ ನೈಸರ್ಗಿಕ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು.
ತಲೆ ನೋವನ್ನು ಸುಲಭವಾಗಿ ಪರಿಹರಿಸುವ ಮನೆಮದ್ದುಗಳಿವು: ಶುಂಠಿಯು ತಲೆಯ ನರಗಳಲ್ಲಿ ಸರಾಗವಾಗಿ ರಕ್ತವನ್ನು ಹರಿಯುವಂತೆ ಮಾಡುತ್ತದೆ. ಅಷ್ಟೇ ಅಲ್ಲದೆ ಒಣ ಶುಂಠಿ ಪುಡಿ ಅಥವಾ ಹಸಿ ಶುಂಠಿಯ ಚೂರನ್ನು ನೀರಿನಲ್ಲಿ ಕುದಿಸಿ ಅದರ ಹಬೆಯನ್ನು ಹಿಡಿಯುವುದರಿಂದಲೂ ಕಡಿಮೆಯಾಗುತ್ತದೆ.
ಒಂದೆರಡು ಚೂರು ಶುಂಠಿಯನ್ನು ಸಕ್ಕರೆಯೊಂದಿಗೆ ಬೆರಸಿ ಅಗಿಯುವುದರಿಂದ ತಲೆನೋವು ಕಡಿಮೆಯಾಗುವುದು, ಸಮಪ್ರಮಾಣದಲ್ಲಿ ಶುಂಠಿಯ ರಸ ಹಾಗು ನಿಂಬೆಯ ರಸವನ್ನು ಬೆರಸಿ ದಿನಕ್ಕೆ ಒಂದು ಅಥವಾ ಎರಡು ಬಾರಿ ಸೇವಿಸುವುದು ತಲೆ ನೋವನ್ನು ನಿವಾರಿಸುತ್ತದೆ.
ಹೀಗೆ ಮನೆಯಲ್ಲಿಯೇ ಸಿಗುವ ಪದಾರ್ಥಗಳಿಂದ ತಲೆನೋವಿನ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.