ಪಪ್ಪಾಯ ನೈಸರ್ಗಿಕವಾಗಿ ಸಿಗುವಂತ ಹಣ್ಣಾಗಿದ್ದು, ಇದರಲ್ಲಿ ದೇಹಕ್ಕೆ ಹಾಗು ಸೌಂದರ್ಯಕ್ಕೆ ತುಂಬಾನೇ ಉಪಯೋಗಗಳಿವೆ. ಪಪ್ಪಾಯ ದೇಹಕ್ಕೆ ಉತ್ತಮ ಆರೋಗ್ಯವನ್ನು ವೃದ್ಧಿಸುತ್ತದೆ ಹಾಗು ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ.
ಮುಖದ ಮೇಲಿನಕಪ್ಪುಕಲೆಗಳನ್ನು ನಿವಾರಿಸಿ ಕೊಳ್ಳಲು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುವ ಬದಲು ಪಪ್ಪಾಯವನ್ನು ಮನೆಯಲ್ಲೇ ಬಳಸಿ ಮುಖದ ಮೇಲಿನ ಕಪ್ಪು ಕಲೆಯನ್ನು ನಿವಾರಿಸಿಕೊಳ್ಳುವ ಜೊತೆಗೆ ಮುಖದ ಸೌಂದರ್ಯವನ್ನು ಹೆಚ್ಚಿಸಿ ಕೊಳ್ಳಬ ಹುದು.
ಹಣ್ಣಾದ ಪಪ್ಪಾಯವನ್ನು ಅದರಸಿಪ್ಪೆ ತಗೆದು ಹಣ್ಣನ್ನು ಕಟ್ ಮಾಡಿ ಪೇಸ್ಟ್ ರೀತಿ ಮಾಡಿಕೊಂಡು ಮುಖದ ಮೇಲೆ ಎಲ್ಲಿ ಕಪ್ಪು ಕಲೆ ಇದೆಯೋ ಆಜಾಗಕ್ಕೆ ಪಪ್ಪಾಯಾ ಪೇಸ್ಟ್ ಹಚ್ಚಿಕೊಂಡು ಅರ್ಧ ಗಂಟೆ ನಂತರ ಬಿಟ್ಟು ಶುದ್ಧವಾದ ನೀರಿನಿಂದ ತೊಳೆಯ ಬೇಕು ಹೀಗೆ ವಾರದಲ್ಲಿ 2-3 ಬರಿ ಮಾಡುವುದರಿಂದ ಮುಖದ ಮೇಲಿನ ಟ್ಯಾನ್ ಕಡಿಮೆಯಾಗುತ್ತದೆ.
ಸಿಪ್ಪೆ ತಗೆದ ಪಪ್ಪಾಯವನ್ನು ಒಂದು ಚಮಚ ಪೇಸ್ಟ್ ಮಾಡಿಕೊಂಡು ಅದಕ್ಕೆ ಒಂದು ಚಮಚ ಜೇನು ತುಪ್ಪವನ್ನು ಹಾಗು ಅರ್ಧ ಚಮಚ ನಿಂಬೆ ರಸ ಬೆರಸಿ ಮಿಶ್ರಣ ಮಾಡಿ ಟ್ಯಾನ್ ಅದ ಜಾಗಕ್ಕೆ ಮಸಾಜ್ ರೀತಿ ಮಾಡಿ ಅರ್ಧ ಗಂಟೆಯ ನಂತರ ಶುದ್ಧವಾದ ನೀರಿನಿಂದ ತೊಳೆಯಿರಿ.
ಬಿಸಿಲಿನ ಶಾಖಕ್ಕೆ ಮುಖದ ಮೇಲೆ ಸ್ಕಿನ್ ಟಾನ್ಸಮಸ್ಯೆಕಾಣಿಸಿಕೊಳ್ಳುತ್ತದೆ, ಹಾಗು ಮುಖದ ತ್ವಚೆಹಾಳಾಗುತ್ತದೆ ಈ ಸಮಸ್ಯೆ ನಿವಾರಣೆಗೆ ಪಪ್ಪಾಯ ಸಹಕರಿಸುತ್ತದೆ. ಪಪ್ಪಾಯದಲ್ಲಿ ವಿಟಮಿನ್ ಈ ಅಂಶವಿದ್ದು ದೇಹಕ್ಕೆ ಹಲವು ಉಪಯೋಗಗಳನ್ನು ಒದಗಿಸುತ್ತದೆ.