ಇತ್ತೀಚಿಗೆ ಸೇವಿಸುತ್ತಿರುವ ಆಹಾರಗಳು ಅತಿಯಾದ ಕೊಬ್ಬಿನಂಶ ಹೊಂದಿದ್ದು ದೇಹದಲ್ಲಿ ಅತಿಯಾದ ಪ್ಯಾಟ್ ಬೆಳೆದು ಹೃದಯಕ್ಕೆ ಸರಿಯಾಗಿ ರಕ್ತ ಸಂಚರಿಸಿದಂತೆ ಬ್ಲಡ್ ಪ್ರೆಸ್ಸರ್ ಜಾಸ್ತಿಯಾಗುತ್ತದೆ. ಹಾಗು ಹೃದಯದ ಮೇಲೆ ಒತ್ತಡ ಉಂಟಾಗಿ ಹೃದಯ ಸಂಭಂದಿ ಖಾಯಿಲೆಗಳು ಬರುವ ಸಾಧ್ಯತೆ ಹೆಚ್ಚಾಗುತ್ತದೆ. ಆದ್ದರಿಂದ ನಿಮ್ಮ ಆಹಾರದ ಪದ್ದತಿಯಲ್ಲಿ ಈ ಕ್ರಮಗಳನ್ನು ಅನುಸರಿಸಿ ಈ ಸಮಸ್ಯೆಗಳಿಗೆ ಹೇಳಿ ಗುಡ್ ಬಾಯ್.
ನೀವು ದೊಡ್ಡ ಮಟ್ಟದ ಅಥವಾ ಭರ್ಜರಿ ಊಟಕ್ಕಿಂತ ಸರಳ ರೀತಿಯ ಊಟ ಮಾಡುವುದು ಒಳ್ಳೆಯದು. ಭಾರೀ ಊಟದಿಂದ ಜೀರ್ಣಾಂಗವ್ಯೂಹಕ್ಕೆ ಹೊರೆ ಎನಿಸುತ್ತದೆ. ಮತ್ತು ಪ್ರತಿ ದಿನ 4-5 ಕಪ್ ಹಣ್ಣು ಮತ್ತು ತರಕಾರಿಗಳನ್ನು ಸೇವಿಸಿ. ಇವುಗಳಲ್ಲಿ ದಟ್ಟ ಹಸಿರು, ಕೆಂಪು ಮತ್ತು ಕಿತ್ತಲೆ ಬಣ್ಣದ ವೈವಿಧ್ಯಮಯ ಹಣ್ಣುಗಳು, ತರಕಾರಿಗಳು, ಅವರೆ ಕಾಳು ಮತ್ತು ಬಟಾಣಿಗಳನ್ನೂ ಸೇರಿಸಿ.
ಘನ ಕೊಬ್ಬುಗಳ ಬದಲಿಗೆ ಎಣ್ಣೆಗಳನ್ನು ಉಪಯೋಗಿಸಿ ಮತ್ತು ಕೊಬ್ಬು ರಹಿತ ಅಥವಾ ಕಡಿಮೆ ಕೊಬ್ಬು ಇರುವ ಹಾಲಿನ ಉತ್ಪನ್ನಗಳನ್ನು ಬಳಸಿ (ಕೆನೆರಹಿತ ಹಾಲು ಮತ್ತು ಕಡಿಮೆ ಕೊಬ್ಬು ಯುಕ್ತ ಹಾಲಿನ ಉತ್ಪನ್ನಗಳು)
ತೆಳು ಮಾಂಸ ಮತ್ತು ಕೋಳಿ ಮಾಂಸದ ಉತ್ಪನ್ನಗಳನ್ನು ಆರಿಸಿಕೊಳ್ಳಿ. ಇವುಗಳನ್ನು ಬೇಕ್ ಮಾಡಿ, ಸುಟ್ಟು ಅಥವಾ ಗ್ರಿಲ್ ಮಾಡಿ ಉಪಯೋಗಿಸಿ. ಕೆಂಪು ಮಾಂಸದ ಬದಲಿಗೆ ಸಮುದ್ರಾಹಾರಗಳನ್ನು ಸೇವಿಸಿ ಅಂದರೆ ಮೀನಿನ ಉತ್ಪನ್ನಗಳನ್ನು ಬಳಸಿ.
ಆಹಾರ ಪದಾರ್ಥಗಳಲ್ಲಿ ಸ್ಯಾಚುರೇಟೆಡ್ ಕೊಬ್ಬು, ಟ್ರಾನ್ಸ್ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಇದೆ ಎಂದು ಖಚಿತಪಡಿಸಿಕೊಳ್ಳಲು, ಆಹಾರ ಪದಾರ್ಥಗಳ ಪ್ಯಾಕ್ ಮೇಲೆ ಅಂಟಿಸಿರುವ ಪಟ್ಟಿಯನ್ನು ಗಮನಿಸಿ. ನಾವು ತಿನ್ನುವ ಹೆಚ್ಚಿನ ಕೊಬ್ಬಿನ ಅಂಶಗಳು ಮೋನೊಸ್ಯಾಚುರೇಟೆಡ್ ಮತ್ತು ಪಾಲಿಸ್ಯಾಚುರೇಟೆಡ್ ಕೊಬ್ಬಿನ ವಿಧದವುಗಳಾಗಿರಬೇಕು. ಕೆಲವು ವಿಧದ ಮೀನುಗಳು, ಬೀಜಗಳು ಮತ್ತು ಸಸ್ಯಜನ್ಯ ಎಣ್ಣೆಗಳಲ್ಲಿ ಈ ಕೊಬ್ಬುಗಳು ಇರುತ್ತವೆ.
ನಿಮ್ಮ ಆಯ್ಕೆಯ ಆಹಾರ ಮತ್ತು ಪಾನೀಯಗಳಲ್ಲಿ ಹೆಚ್ಚುವರಿ ಸಕ್ಕರೆ ಕಡಿಮೆ ಇರಲಿ. ಹೆಚ್ಚುವರಿ ಸಕ್ಕರೆಗಳು ಅಂದರೆ, ಸುಕ್ರೋಸ್, ಗ್ಲೂಕೋಸ್, ಹೈ ಫ್ರುಕ್ಟೋಸ್, ಕಾರ್ನ್ ಸಿರಪ್, ಮೇಪಲ್ ಸಿರಪ್ ಮತ್ತು ಪ್ರಕ್ಟೊಸ್ ಇತ್ಯಾದಿ.
ಆಹಾರದಲ್ಲಿ ನಾರಿನಂಶಗಳನ್ನು ಒದಗಿಸುವಂತಹ ಪದಾರ್ಥಗಳನ್ನೇ ಹೆಚ್ಚಾಗಿ ಬಳಸಿ ಅಂದರೆ, ಹಣ್ಣುಗಳು, ಅವರೆಕಾಳುಗಳು, ತರಕಾರಿಗಳು ಮತ್ತು ಸಿರಿ ಧಾನ್ಯಗಳು.
ಒಂದು ದಿನಕ್ಕೆ ಒಂದು ಚಮಚೆಗಿಂತಲೂ ಕಡಿಮೆ ಉಪ್ಪನ್ನು ಸೇವಿಸಿ. ಉಪ್ಪಿನ ಬಳಕೆಯನ್ನು ಮಿತಗೊಳಿಸುವುದು ಅತ್ಯವಶ್ಯಕ. ಯಾಕೆಂದರೆ, ಆಹಾರದಲ್ಲಿ ಅಧಿಕ ಉಪ್ಪಿನ ಸೇವನೆಯು ರಕ್ತದ ಒತ್ತಡವನ್ನು ಹೆಚ್ಚಿಸುತ್ತದೆ. ಇದರಿಂದ ಹೃದಯದ ರಕ್ತನಾಳಗಳ ಕಾಯಿಲೆಗಳು ಉಂಟಾಗುವ ಮತ್ತು ಹೃದಯಕ್ಕೆ ಹಾನಿಗಳಾಗುವ ಸಾಧ್ಯತೆಗಳಿವೆ.
ವ್ಯಾಯಾಮವು ಬಹಳ ಪ್ರಮುಖವಾದ ಆರೋಗ್ಯಕರ ಹವ್ಯಾಸ. ಹೃದಯದ ಕಾಯಿಲೆಗಳ ಪುನಶ್ಚೇತನ ಮತ್ತು ತಡೆಯುವಿಕೆಯಲ್ಲಿ ಇದರ ಸಕಾರಾತ್ಮಕ ಪರಿಣಾಮವು ಮಹತ್ವಪೂರ್ಣವಾದುದು.