WhatsApp Group Join Now

ಶುಂಠಿ ಮತ್ತು ನಿಂಬೆಯನ್ನು ನಮ್ಮ ಹಿರಿಯರ ಕಾಲದಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಔಷಧಿಯಾಗಿ ಬಳಕೆ ಮಾಡುತ್ತ ಬಂದಿದ್ದಾರೆ. ಈ ಶುಂಠಿ ನಿಂಬು ಕಷಾಯವು ಅಪರೂಪವಾದದ್ದೇನಲ್ಲ ನಾವು ದಿನನಿತ್ಯದಲ್ಲಿ ಬಳಸುವ ಸಾಮಾನ್ಯ ಪದಾರ್ಥಗಳಿವು. ಆದರೆ ಅಸಾಮಾನ್ಯ ಗುಣಗಳ ಈ ಪದಾರ್ಥಗಳು ಸಂಯೋಜನೆಗೊಂಡಾಗ ಅಪರಿಮಿತ ಔಷಧೀಯ ಗುಣಗಳನ್ನು ಪ್ರಕಟಿಸುತ್ತವೆ. ನಮ್ಮಲ್ಲಿನ ಅನೇಕ ಸಮಸ್ಯೆಗಳನ್ನು ಬೇರುಸಹಿತ ಗುಣಪಡಿಸುವಂತಹ ಸಾಮರ್ಥ್ಯ ಇದರದ್ದು. ಕೆಲವು ತೊಂದರೆಗಳಿಗೆ ಅನುಸಾರವಾಗಿ ಇದಕ್ಕೆ ಜೇನುತುಪ್ಪವನ್ನು ಸಹ ಹಾಕಲಾಗುತ್ತದೆ. ಸೋಂಕುಗಳ ವಿರುದ್ಧ ಹೋರಾಡುವಲ್ಲಿ ಈ ಕಷಾಯದ ಸೇವನೆ ಸಹಕಾರಿಯಾಗಿದೆ.

ಶುಂಠಿ ನಿಂಬು ಕಷಾಯವು ಆಂಟಿ ಬ್ಯಾಕ್ಟೀರಿಯಲ್, ಆಂಟಿ ಫಂಗಲ್, ಆಂಟಿ ಡಯಾಬಿಟಿಕ್, ಆಂಟಿ ಕ್ಯಾನ್ಸರ್ ಹಾಗೂ ಆಂಟಿ ವೈರಲ್ ಗುಣಗಳನ್ನು ಹೊಂದಿದೆ. ಸುಸ್ತನ್ನು ಕಡಿಮೆ ಮಾಡಲು ಇದು ಪರಿಣಾಮಕಾರಿಯಾಗಿದ್ದು, ಕಷಾಯವನ್ನು ಕುಡಿದ ಸ್ವಲ್ಪೇ ಸಮಯದಲ್ಲಿ ದೇಹಕ್ಕೆ ಆರಾಮವನ್ನು, ಚೈತನ್ಯವನ್ನು, ಉತ್ಸಾಹವನ್ನು ನೀಡುತ್ತದೆ.

ಶುಂಠಿ ನಿಂಬು ಕಷಾಯವು ಆಂಟಿ ಇನ್​ಫ್ಲಮೇಟರಿ ಗುಣವನ್ನು ಹೊಂದಿದ್ದು ದೇಹದಲ್ಲಿನ ನೋವುಗಳನ್ನು, ಉರಿಯೂತವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಪುರಾತನ ಕಾಲದಿಂದಲೂ ಸಹ ಈ ನೋವು ನಿವಾರಣೆಯ ಗುಣಕ್ಕಾಗಿ ಶುಂಠಿಯನ್ನು ಬಳಸುತ್ತ ಬಂದಿದ್ದಾರೆ. ಇತ್ತೀಚಿನ ಸಾಕಷ್ಟು ಸಂಶೋಧನೆಗಳು ಕೂಡ ಇದನ್ನು ಸಾಕ್ಷೀಭೂತವಾಗಿ ಪ್ರತಿಪಾದಿಸುತ್ತವೆ. ಈ ತೊಂದರೆಗಾಗಿ ಕಷಾಯವನ್ನು ತೆಗೆದುಕೊಳ್ಳುವಾಗ ಜೇನುತುಪ್ಪವನ್ನು ಸೇರಿಸಿಕೊಂಡೇ ಕುಡಿಯುವುದು ಉತ್ತಮ. ಯಾಕೆಂದರೆ ಇದು ಜೀರ್ಣಕ್ರಿಯೆಗೆ ಸಹಕರಿಸುತ್ತದೆ. ಚರ್ಮದ ಆರೋಗ್ಯ, ಸೌಂದರ್ಯವರ್ಧನೆಗಾಗಿ ಪ್ರತಿನಿತ್ಯ ಸೇವಿಸುವುದು ಒಳ್ಳೆಯದು. ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಹ ಈ ಕಷಾಯವನ್ನು ಬಳಸಬಹುದಾಗಿದೆ.

ಈ ಕಷಾಯವನ್ನು ಹೇಗೆ ಮಾಡುವುದು ಗೊತ್ತಾ: ಒಂದು ಲೋಟ ನೀರಿಗೆ ಅರ್ಧ ಇಂಚು ಶುಂಠಿ ಹಾಕಿ ಕುದಿಸಬೇಕು. ಆಗ ನೀರಿನ ಬಣ್ಣ ಸ್ವಲ್ಪ ಬದಲಾಗುತ್ತದೆ. ನಂತರ ಒಲೆಯಿಂದ ಇಳಿಸಿ ಸೋಸಿ, ಆರಿಸಿಕೊಂಡು ಅದಕ್ಕೆ ಅರ್ಧ ನಿಂಬುವನ್ನು ಹಿಂಡಿ ಕುಡಿಯಬೇಕು. ಜೇನುತುಪ್ಪ ಸೇರಿಸುವ ಅಗತ್ಯ ಇದ್ದಲ್ಲಿ ಕಷಾಯವು ತಣ್ಣಗಾದ ನಂತರ ಒಂದು ಚಮಚ ಜೇನುತುಪ್ಪ ಸೇರಿಸಿ ಸೇವಿಸಬೇಕು.

WhatsApp Group Join Now

Leave a Reply

Your email address will not be published. Required fields are marked *