WhatsApp Group Join Now

ಜಿರಳೆಗಳು ಮನೆಯಲ್ಲಿದ್ದರೆ ಇದರಿಂದ ಅನಾರೋಗ್ಯದ ಸಮಸ್ಯೆ ಕೂಡ ಬರಬಹುದು ಹಾಗಾಗಿ ಕೆಲವೊಮ್ಮೆ ಮನೆಯನ್ನು ಎಷ್ಟು ಸ್ವಚ್ಛವಾಗಿ ಇಟ್ಟರು ಕೂಡ ಇವುಗಳು ಮನೆಯಲ್ಲಿ ಹೆಚ್ಚಾಗಿರುತ್ತವೆ ಇದರಿಂದ ಅನೇಕ ಸಾಂಕ್ರಾಮಿಕ ರೋಗಗಳು ಹರಡುತ್ತವೆ ಆದ್ದರಿಂದ ಇವುಗಳ ನಿವಾರಣೆಗೆ ಮನೆಯಲ್ಲಿನ ಪದಾರ್ಥಗಳನ್ನು ಬಳಸಿ ನಿವಾರಣೆ ಮಾಡಿಕೊಳ್ಳಬಹುದು.

ಜಿರಳೆಗಳು ಓಡಾಡುವಂತ ಜಾಗಗಳಲ್ಲಿ ಸಕ್ಕರೆ, ಮೈದಾ, ಬೋರಿಕ್‌ ಪೌಡರ್‌ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ ಚಿಕ್ಕ ಉಂಡೆಗಳನ್ನು ಮಾಡಿ ಇಟ್ರೆ ಇವುಗಳ ವಾಸನೆಗೆ ಜಿರಳೆಗಳು ಮನೆಯಲ್ಲಿ ಸುಳಿಯೋದಿಲ್ಲ.

ಮತ್ತೊಂದು ವಿಧಾನ ಸೌತೆಕಾಯಿಯನ್ನು ಸಿಪ್ಪೆ ಸಮೇತ ರೌಂಡ್ ಆಗಿ ಕತ್ತರಿಸಿ ಮನೆಯ ಮೂಲೆಗಳಲ್ಲಿ ಇಡಿ. ಇದನ್ನು ವಾರದಲ್ಲಿ 2 ಅಥವಾ 3 ಬಾರಿ ಬದಲಾಯಿಸುತ್ತೀರಿ ಹೀಗೆ ಮಾಡುವುದರಿಂದ ಜಿರಳೆಗಳು ಮನೆಯಲ್ಲಿ ಕಾಣಿಸಿ ಕೊಳ್ಳೋದಿಲ್ಲ.

ಪುದೀನ ಎಣ್ಣೆಯನ್ನು ಅಥವಾ ನಿಂಬೆ ಹಣ್ಣಿನ ರಸವನ್ನು ಒಂದು ಲೋಟ ನೀರಿಗೆ ಹಾಕಿ ಮಿಕ್ಸ್‌ ಮಾಡಿ ಸ್ಪ್ರೇ ಬಾಟಲಿಗೆ ಹಾಕಿ ಮನೆಯ ಎಲ್ಲಾ ಕಡೆ ಸ್ಪ್ರೇ ಮಾಡಿದರೆ ಜಿರಳೆಗಳು ಹೊರ ಹೋಗುತ್ತವೆ. ಈ ವಿಧಾನಗಳಿಂದ ಮನೆಯಲ್ಲಿ ಜಿರಳೆ ಇಲ್ಲದಂತೆ ಮಾಡಿಕೊಳ್ಳಬಹುದು.

ಕಾಫಿ ಪೌಡರ್‌ರನ್ನು ಮನೆ ಸಂಧಿಗಳಲ್ಲಿ , ಮೂಲೆಗಳಲ್ಲಿ ಸಿಂಪಡಿಸಿ. ಬೆಳಗ್ಗೆ ಮನೆ ಸ್ವಚ್ಛಮಾಡಿ. ಹೀಗೆ ಮೂರು ನಾಲ್ಕು ದಿನ ಮಾಡಿದರೆ ಜಿರಳೆಗಳು ಬರುವುದಿಲ್ಲ. ಬಿರಿಯಾನಿ ಎಲೆಗಳನ್ನು ಚೆನ್ನಾಗಿ ಪುಡಿ ಮಾಡಿ ಜಿರಳೆ ಹೆಚ್ಚಿರುವ ಜಾಗದಲ್ಲಿ ಹಾಗೂ ಮನೆಯ ಎಲ್ಲಾ ಕಡೆ ಹಾಕುವುದರಿಂದ ಇದರ ವಾಸನೆಗೆ ಜಿರಳೆಗಳು ಬರುವುದಿಲ್ಲ.

WhatsApp Group Join Now

Leave a Reply

Your email address will not be published. Required fields are marked *