ಹೌದು ಕೆಲವರಿಗೆ ಕಣ್ಣಿನ ಕೆಳಭಾಗದಲ್ಲಿ ಕಪ್ಪಾಗಿ ಗೆರೆಗಳು ಅಥವಾ ಸ್ಕಿನ್ ಕಪ್ಪು ಬಣ್ಣವಾಗಿರುತ್ತದೆ. ಇದಕ್ಕೆ ನಾನಾ ಕಾರಣಗಳು ಸಹ ಇವೆ. ಆದ್ರೆ ಈ ರೀತಿಯಾಗಿ ಕಣ್ಣಿನ ಕೆಳಭಾಗದಲ್ಲಿ ಕಪ್ಪಾ ಬಣ್ಣವಾದರೆ ತುಂಬ ಚಿಂತಿಸಬೇಡಿ ಈ ರೀತಿಯಾಗಿ ಮಾಡಿ ನೋಡಿ.
ಹರಳೆಣ್ಣೆ ಮತ್ತು ಬಾದಾಮಿ ಎಣ್ಣೆಯನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿಕೊಳ್ಳಬೇಕು ಮತ್ತು ಬಾಟಲಿಯಲ್ಲಿ ಹಾಕಿಡಬೇಕು. ಈ ಎಣ್ಣೆಯನ್ನು ಕಣ್ಣಿನ ಕೆಳ ಭಾಗಕ್ಕೆ ಹಾಕಿ ಮಸಾಜ್ ಮಾಡಬೇಕು. ಈ ರೀತಿ ಮಾಡುತ್ತಿದ್ದರೆ ಕಣ್ಣಿನ ಕೆಳ ಭಾಗ ಮತ್ತು ಕಪ್ಪು ಕಲೆಗಳು ಮಾಯವಾಗುತ್ತದೆ.
ಹರಳೆಣ್ಣೆ ಮತ್ತು ತೆಂಗಿನೆಣ್ಣೆಯನ್ನು ಸಮ ಪ್ರಮಾಣದಲ್ಲಿ ಮಿಕ್ಸ್ ಮಾಡಿಕೊಳ್ಳಬೇಕು. ಈ ಮಿಶ್ರಣದಿಂದ ಕೂಡ ಕಣ್ಣಿನ ಕೆಳ ಭಾಗಕ್ಕೆ ನಿಧಾನವಾಗಿ ಪ್ರತಿನಿತ್ಯ ಮಸಾಜ್ ಮಾಡುವುದರಿಂದ ಕಪ್ಪು ಕಲೆಗಳು ಮಾಯವಾಗುತ್ತದೆ.
ಕಪ್ಪು ಕಲೆಗಳ ಸಮಸ್ಯೆ ನಿವಾರಣೆ ಮಾಡಲು ಹರಳೆಣ್ಣೆಯ ಜತೆಗೆ ಹಾಲಿನ ಕೆನೆ ಬಳಸಬಹುದು. ಒಂದು ಚಮಚ ಹಾಲಿನ ಕೆನೆಗೆ ಹತ್ತು ಹನಿ ಹರಳೆಣ್ಣೆ ಹಾಕಬೇಕು. ಇದನ್ನು ಹಚ್ಚಿಕೊಳ್ಳುವ ಮೊದಲು ಹಾಲಿನ ಕೆನೆ ಮತ್ತು ಹರಳೆಣ್ಣೆ ಸರಿಯಾಗಿ ಮಿಶ್ರಣ ಮಾಡಿಕೊಳ್ಳಬೇಕು. ಕಪ್ಪು ಕಲೆಗಳು ಇರುವ ಜಾಗಕ್ಕೆ ಇದರಿಂದ ಮಸಾಜ ಮಾಡಬೇಕು. ಸ್ವಲ್ಪ ಹೊತ್ತು ಬಿಟ್ಟು ಬೆಚ್ಚಗಿನ ನೀರಿನಿಂದ ತೊಳೆಯಬೇಕು.
ಹರಳೆಣ್ಣೆ ಮತ್ತು ಹಸಿ ಹಾಲನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಬೇಕು. ಈ ಮಿಶ್ರಣವನ್ನು ಕಪ್ಪು ಕಲೆ ಇರುವ ಜಾಗಕ್ಕೆ ಹಚ್ಚಿಕೊಳ್ಳಬೇಕು. ಹತ್ತು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಬೇಕು. ಪ್ರತಿನಿತ್ಯ ಈ ರೀತಿ ಮಾಡುವುದರಿಂದ ಕಪ್ಪು ಕಲೆ ನಿವಾರಣೆಯಾಗುತ್ತದೆ.