ಕಾಡುಬಳೆ ಎಲೆಯನ್ನು ಸುಟ್ಟು ಹುಡಿಮಾಡಬೇಕು, ೧/೪ ಚಮಚದಷ್ಟು ಈ ಹುಡಿಯನ್ನು ಜೇನಿನೊಂದಿಗೆ ಸೇವಿಸಿದರೆ ಬಿಕ್ಕಳಿಕೆ ಪರಿಹಾರವಾಗುತ್ತದೆ.ಬಾಳೆಹಣ್ಣನ್ನು ಮತ್ತು ಹುಣಸೆಹಣ್ಣನ್ನು ನೀರಲ್ಲಿ ಕಿವುಚಿ ಅದನ್ನು ಕುಡಿಯಬೇಕು, ಇದರಿಂದ ಮಲಬದ್ಧತೆ ಗುಣವಾಗುತ್ತದೆ.
ಬಾಳೆಹಣ್ಣಿನಲ್ಲಿ ಆಲದಮರದ ಹಾಲನ್ನು ೧೦-೧೫ ತುಂಡು ಬೆರೆಸಿ ಸೇವಿಸಿದರೆ ಮೂತ್ರದಲ್ಲಿ ಬಿಳುಪು ಹೋಗುವುದು ಗುಣವಾಗುತ್ತದೆ, ೨-೩ ವಾರ ದಿನಕ್ಕೆರಡು ಬಾರಿ ಸೇವನೆ ಅಗತ್ಯ.ಅರಿಸಿನ ಮತ್ತು ತುಪ್ಪ ಬೆರೆಸಿ ಗಾಯ ಅಥವಾ ಕಜ್ಜಿಗೆ ಹಚ್ಚಿ ಅದರ ಮೇಲೆ ಬಾಳೆ ಎಲೆ ಕಟ್ಟಿದರೆ ಗಾಯ ಅಥವಾ ಕಜ್ಜಿ ಬೇಗನೆ ಗುಣವಾಗುತ್ತದೆ.
ರಸಬಾಳೆ ಹಣ್ಣಿನಲ್ಲಿ ಬಟಾಣಿ ಕಾಳಿನಷ್ಟು ಕೆನೆಸುಣ್ಣ ಇರಿಸಿ ನುಂಗಬೇಕು, ಇದರಿಂದ ಭಾಗಂದರ ಗುಣವಾಗುತ್ತದೆ.ಬಾಳೆಯ ಗಡ್ಡೆಯನ್ನು ಅರೆದು ಟೊನ್ಸಿಲ್ ನೋವು ಇರುವಾಗ ಹೊರಗಿನಿಂದ ಲೇಪಿಸಿದರೆ ಟೊನ್ಸಿಲ್ ಗಳ ಊತ ಮತ್ತು ನೋವು ಪರಿಹಾರ.
ಚಿಕನ್ ಪಾಕ್ಸ್ ಇದು ದಢಾರದ ವಿಧ ಬಂದಾಗ ಆರಂಭದಲ್ಲಿ ಬಾಳೆಹಣ್ಣು ತಿನ್ನಲು ಕೊಡುವುದು ಒಳ್ಳೆಯದು.ಬಾಳೆಹಣ್ಣಿನಲ್ಲಿ ಒಂದು ಬಗೆಯ ಪ್ರೊಟೀನ್ ನಿಂದಾಗಿ ಸೆರೊಟಿನ್ ಪ್ರಮಾಣ ಹೆಚ್ಚಾಗುತ್ತದೆ, ಇದರಿಂದಾಗಿ ಬಾಳೆಹಣ್ಣನ್ನು ಸೇವಿಸುವುದರಿಂದ ಖಿನ್ನತೆ ಕಡಿಮೆಯಾಗುತ್ತದೆ.
ಬಾಳೆಯ ದಿಂಡಿನ ರಸವನ್ನು ೧/೪ ಲೋಟದಷ್ಟು ಪ್ರತಿ ಹತ್ತು ನಿಮಿಷಗಳಿಗೆ ಕುಡಿಸುತ್ತಿರಬೇಕು, ಅದೇ ರಸವನ್ನು ಹಾವು ಕಚ್ಚಿದ ಸ್ಥಳಕ್ಕೂ ಹಚ್ಚಬೇಕು, ಕಣ್ಣಿಗೆ ಕಾಡಿಗೆಯಂತೆ ಲೇಪಿಸಬೇಕು ಇದರಿಂದ ಹಾವು ಕಡಿತದಲ್ಲಿ ವಿಷವೇರುವುದಿಲ್ಲ.ಗರ್ಭಿಣಿಯರು ಬೆಳೆಗ್ಗೆಯ ಸಮಯದಲ್ಲಿ ಬಾಳೆಹಣ್ಣು ಸೇವಿಸಿದರೆ ಗರ್ಭಿಣಿಯರ ವಾಂತಿ ಕಡಿಮೆಯಾಗುತ್ತದೆ.