ಭಾರತೀಯರ ಅಥವಾ ಹಿಂದೂ ಧರ್ಮದಲ್ಲಿ ಅನೇಕ ಆಚರಣೆಗಳು ಮೊದಲಿನಿಂದಲೂ ರೂಡಿಯಲ್ಲಿದೆ ಹಾಗು ಪ್ರತಿಯೊಂದು ಆಚರಣೆಗೂ ವೈಜ್ಞಾನಿಕ ಕಾರಣಗಳು ಇದೆ, ಪ್ರಚಲಿತದಲ್ಲಿರುವ ಆಚರಣೆಯಲ್ಲಿ ಪ್ರಮುಖವಾದುದರಲ್ಲಿ ಒಂದು ವಾಸ್ತು ಶಾಸ್ತ್ರ, ಹಿಂದೆ ದೇವಸ್ಥಾನಗಳಿಂದ ಅರಮನೆಗಳ ವರೆಗೂ ಕಟ್ಟುತಿದ್ದದ್ದು ವಾಸ್ತು ಶಾಸ್ತ್ರದ ಆದಾರದ ಮೇಲೆ ಕಾರಣ ಪ್ರತಿಯೊಂದು ದಿಕ್ಕಿಗೂ ಅದರದೇ ಆದ ಶಕ್ತಿಗಳಿದ್ದು ಆ ಶಕ್ತಿಗಳು ಮನೆಯೊಳಗೆ ಹರಿದು ಬರುತ್ತವೆ.
ಇನ್ನು ವಾಸ್ತು ಶಾಸ್ತ್ರ ಹೇಳುವಂತೆ ನೀವು ವಾಸಿಸುವ ಮನೆ ನಿಮ್ಮ ವಯಕ್ತಿಕ ಜೀವನದ ಮೇಲೆ ಪ್ರಭಾವ ಬೀರುತ್ತದೆ, ಹಣಕಾಸಿನ ವ್ಯವಹಾರ, ಮಾಯೆಯಲ್ಲಿ ಶಾಂತಿ ಹಾಗು ಸಂಭಂದಗಳಲ್ಲಿ ಒಡಕು ಇತರ ಕಾರಣಗಳಿಗೆ ಮನೆಯ ವಾಸ್ತು ದೋಷ ಕಾರಣ ವಾಗಿರುತ್ತದೆಯಂತೆ, ಹಾಗಾದರೆ ಇದಕ್ಕೆ ಪರಿಹಾರ ಏನು ಅದಕ್ಕೂ ವಾಸ್ತು ಶಾಸ್ತ್ರದಲ್ಲಿ ಕೆಲವು ಪರಿಹಾರ ಗಳಿದ್ದು ಅದರಲ್ಲಿ ಮುಖ್ಯವಾದದು ಆಮೆ ಮೂರ್ತಿ.
ಆಮೆ ಶ್ರೀ ವಿಷ್ಣುವಿನ ಸ್ವರೂಪ ಎಂದು ಭಾರತೀಯರು ನಂಬಿದರೆ ವಾಸ್ತು ಶಾಸ್ತ್ರ ಹೋಲುವ ರೀತಿಯಲ್ಲ ಚೀನಾದಲ್ಲಿ ಫೆಂಗ್ ಶೂಹಿ ಇದೆ, ಇದು ಕೂಡ ಆಮೆಯು ಮನೆಯಲ್ಲೂ ಧನಾತ್ಮಕ ಶಕ್ತಿಯನ್ನು ಮನೆಯಲ್ಲಿ ಹರಿಸಲು ಸಹಾಯ ಮಾಡುತ್ತದೆ ಎಂದು ಹೇಳುತ್ತದೆ.
ಮನೆಯ ಮುಖ್ಯ ದ್ವಾರದಲ್ಲಿ ಆಮೆಯನ್ನು ಇಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ತಡೆದು, ಮನೆಯಲ್ಲಿ ನಡೆಯುವ ಜಗಳ ವಿಪರೀತಕ್ಕೆ ಹೋಗದಂತೆ ತಡೆಯುತ್ತದೆ.ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಸಹ ಆಮೆಯನ್ನು ಮನೆಯ ಪೂರ್ವ ಭಾಗದಲ್ಲಿ ಇಡುತ್ತಾರೆ, ಹಾಗೆಯೇ ಅಪ್ಪಿ ತಪ್ಪಿಯೂ ಈಶಾನ್ಯ ಭಾಗದಲ್ಲಿ ಮಾತ್ರ ಇಡಬಾರದು ಇಟ್ಟರೆ ಹಣಕಾಸು ತೊಂದರೆ ಶುರುವಾಗುತ್ತದೆ.
ಇನ್ನು ಹಣದ ಒಳ ಹರಿವು ಹೆಚ್ಚಿಸಲು ಸ್ಪಟಿಕದಿಂದ ತಯಾರಿಸಿದ ಆಮೆಯನ್ನು ಮನೆ ಅಥವಾ ನೀವ ಕೆಲಸ ಮಾಡುವ ಸ್ಥಳದಲ್ಲಿ ಇಡಬೇಕು.ಇತ್ತಾಳೆ ಆಮೆಯಿಂದ ಉದ್ಯೋಗ ಪ್ರಾಪ್ತಿಯಾದರೆ ಮಣ್ಣಿನ ಆಮೆಯಿಂದ ಆರೋಗ್ಯ ಸಮಸ್ಯೆ ದೂರವಾಗುತ್ತದೆ.