ನಮ್ಮ ಮನೆಯಲ್ಲೇ ಇರುವ ಹುರುಳಿಕಾಳಿನಲ್ಲಿ ಹಲವಾರು ರೋಗಗಳಿಗೆ ಪರಿಹಾರವಿದೆ ಆದರೆ ಇದು ನಮಗೆ ಗೊತ್ತಿರುವುದಿಲ್ಲ ಆದರೆ ಮುಂದೆ ಓದಿ ನೀವು ತಪ್ಪದೆ ಹುರುಳಿಕಾಳನ್ನು ಬಳಕೆ ಮಾಡುತ್ತೀರಾ.
ನಿಮಗೆ ಕಿಡ್ನಿಯಲ್ಲಿ ಕಲ್ಲು ಇರುವ ಸಮಸ್ಯೆ ಇದ್ದರೆ ನೀವು ತಪ್ಪದೆ ಪ್ರತಿ ನಿತ್ಯ ನೆನೆಸಿ ಬೇಯಿಸಿದ ಹುರುಳಿಕಾಳನ್ನು ಸೇವಿಸಿದರೆ ಕಲ್ಲುಗಳು ಬೇಗ ನಿವಾರಣೆಯಾಗುತ್ತವೆ ಮತ್ತು ನೆನೆಸಿದ ಹುರುಳಿಕಾಳನ್ನು ದಿನಕ್ಕೆ 2 ಬಾರಿ ಖಾಲಿ ಹೊಟ್ಟೆಗೆ ಸೇವಿಸಿದರೆ ದೇಹದ ಕೊಬ್ಬಿನಂಶ ಕಡಿಮೆಯಾಗುತ್ತದೆ.
ಬಿಕ್ಕಳಿಕೆ ಹೆಚ್ಚಿದ್ದರೆ ಹುರುಳಿಕಾಳನ್ನು ಸುಡುವಾಗ ಬರುವ ಹೊಗೆಯನ್ನು ಬಾಯಿಂದ ತೆಗೆದು ಕೊಂಡರೆ ಬಿಕ್ಕಳಿಕೆ ಬೇಗ ನಿಲ್ಲುತ್ತದೆ.
ಕಫ ಹೆಚ್ಚಾಗಿ ಮೂಗು ಕಟ್ಟುವ ಸಮಯೇ ಮತ್ತು ಕೆಮ್ಮು ಇದ್ದರೆ ಹುರುಳಿ ಕಾಳಿನ ಸೂಪ್ ಸೇವಿಸಿ. ಇದರಿಂದ ಕಫ ಬೇಗ ಕರಗುತ್ತದೆ ಮತ್ತು ಕೆಮ್ಮು ಶಮನವಾಗುತ್ತದೆ.
ಹುರುಳಿಕಾಳನ್ನು ರಾತ್ರಿ ನೀರಲಿ ನೆನೆಸಿ ಬೆಳಗ್ಗೆ ಚೆನ್ನಾಗಿ ಬೇಯಿಸಿ ಅದಕ್ಕೆ ಸೈಂಧವ ಉಪ್ಪು, ಕರಿಮೆಣಸಿನ ಪುಡಿ, ಜೀರಿಗೆ ಸೇರಿಸಿ ತಿಂಡಿ ಸಮಯಕ್ಕೆ ಸೇವಿಸಿದರೆ ದೇಹದ ತೂಕ ಮತ್ತು ಬೊಜ್ಜು ಕರಗುತ್ತದೆ.ಹುರುಳಿಕಾಳನ್ನು ನೆನೆಸಿ ಪೇಸ್ಟ್ ಮಾಡಿ ನೋವು ಮತ್ತು ಊತ ಇರುವ ಸಂಧಿಗಳಿಗೆ ಲೇಪ ಮಾಡಿದರೆ ನೋವು ಮತ್ತು ಊತ ಬೇಗ ಕಡಿಮೆಯಾಗುತ್ತವೆ. ರಾತ್ರಿ ನೀರಿನಲ್ಲಿ ನೆನೆಸಿದ ಹುರುಳಿಕಾಳನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ಬೇಯಿಸದೆ ಹಾಗೆ ಸೇವಿಸಿದರೆ ಮಲವಿಸರ್ಜನೆ ಸುಲಭವಾಗುತ್ತದೆ.