ಹೌದು ಸೇಬು ನಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೇದು ಇದು ಜನಸಾಮಾನ್ಯರಲ್ಲಿ ಇರುವ ಮಾತು ಮತ್ತು ತಜ್ಞರು ಹೇಳುವ ಪ್ರಕಾರವು ಸೇಬು ಆರೋಗ್ಯಕ್ಕೆ ಒಳ್ಳೇದು. ಆದ್ರೆ ಸೇಬು ತಿನ್ನುವಾಗ ಅದರಲ್ಲಿರುವ ಸೇಬಿನ ಬೀಜವನ್ನು ಯಾವುದೇಕಾರಣಕ್ಕೂ ಸೇವನೆ ಮಾಡಬೇಡಿ.
ಹೌದು ಸೇಬಿನ ಬೀಜ ತಿನ್ನುವುದು ನಿಮ್ಮ ಜೀವಕ್ಕೇ ಕುತ್ತು ತರಬಹುದು. ಇದರ ಬೀಜದಲ್ಲಿ ಅಂತಹ ವಿಷಕಾರಿ ಅಂಶ ಹೊರ ಸೂಸುವ ಶಕ್ತಿಯಿದೆ ಎಂದು ತಜ್ಞರು ಕಂಡುಕೊಂಡಿದ್ದಾರೆ. ಇದರ ಬೀಜದಲ್ಲಿರುವ ಅಮಿಗ್ ಡಾಲಿನ್ ಎಂಬ ಅಂಶ ಮಾನವ ಜೀರ್ಣ ಪ್ರಕ್ರಿಯೆಯೊಂದಿಗೆ ಸೇರಿದಾಗ ಸೈನೈಡ್ ಬಿಡುಗಡೆ ಮಾಡುವ ಸಾಮರ್ಥ್ಯ ಹೊಂದಿದೆಯಂತೆ.
ಹೀಗಾಗಿ ಈ ಸೈನೈಡ್ ಅಂಶ ನಿಮ್ಮ ದೇಹಕ್ಕೆ ಮಾರಣಾಂತಿಕ ಪರಿಣಾಮ ಅಥವಾ ಸಾವು ತರಬಲ್ಲದು ಎಂದು ತಜ್ಞರು ಕಂಡುಕೊಂಡಿದ್ದಾರೆ. ಸೈನೈಡ್ ಎಷ್ಟು ಅಪಾಯಕಾರಿ ಎಂದು ಗೊತ್ತಲ್ಲ? ಇದು ಆಕ್ಸಿಜನ್ ಪೂರೈಕೆಗೆ ತಡೆಯೊಡ್ಡಿ ನಮ್ಮ ಜೀವಕ್ಕೆ ಅಪಾಯ ತರುತ್ತದೆ.
ನೋಡಿ ನೀವು ಸಹ ಸೇಬು ಸೇವನೆ ಮಾಡುವಾಗ ಆದೊಷ್ಟು ಸೇಬಿನ ಬೀಜವನ್ನು ತೆಗೆದು ಸೇವನೆ. ಮೇಲಿರುವ ವಿಚಾರ ಎಷ್ಟು ಸುಳ್ಳು ಸತ್ಯ ಅನ್ನುವುದಕ್ಕಿಂತ ನಮ್ಮ ಅರೋಗ್ಯ ಮತ್ತು ಜೀವ ನಾವು ಕಾಪಾಡಿಕೊಳ್ಳಬೇಕು. ಹಾಗಾಗಿ ಆದೊಷ್ಟು ಸೇಬಿನ ಬೀಜದಿಂದ ದೂರವಿರಿ.