ಜಾತಿ ಆದಾಯ ಪ್ರಮಾಣ ಪತ್ರಗಳಿಗಾಗಿ ನಿವೂ ಎಲ್ಲಿಯೂ ಸಹ ದಿನಗಟ್ಟಲೆ ಹತ್ತು ದಿನಗಳು ಸಹ ಕಾಯಬೇಕಿಲ್ಲ ಇಲ್ಲಿದೆ ನಿಮಗೆ ಸುಲಭವಾಗಿ ನಿಮ್ಮ ಜಾತಿ ಆದಾಯ ಪ್ರಮಾಣ ಪತ್ರ ನಿಮ್ಮ ಕೈ ಸೇರಲಿದೆ ಅದು ಕೇವಲ ೧೫ ನಿಮಿಷದಲ್ಲಿ ಯಾವ ರೀತಿ ಅನ್ನೋದು ಇಲ್ಲಿದೆ ನೋಡಿ.
ಹೌದು ಕೇವಲ ೨೦ ರಿಗಳನ್ನು ಪಾವತಿಸಿ ಕೇವಲ ೧೦ ರಿಂದ ೧೫ ನಿಮಷದಲ್ಲಿ ನಿಮ್ಮ ಜಾತಿ ಆದಾಯ ಪ್ರಮಾಣ ಪತ್ರ ಸಿಗಲಿದೆ ನಿವೂ ಯಾವ ರೀತಿ ಪಡೆದುಕೊಳ್ಳಬಹು ಅನ್ನೋದು ಇಲ್ಲಿದೆ.
ನಿವೂ ಮೊದಲು ನಾಡ ಕಚೇರಿ ವೆಬ್-ಸೈಟ್ ಗೆ ಭೇಟಿ ನೀಡಿ ಆನ್-ಲೈನ್ ಅರ್ಜಿ ಸ್ವೀಕೃತಿ ವಿಭಾಗದಲ್ಲಿನ ಆನ್-ಲೈನ್ ಅರ್ಜಿ ಆಯ್ಕೆ ಮಾಡಿ. ವೆಬ್-ಸೈಟ್ ಗೆ ಪ್ರವೇಶಿಸುವ ಇದಕ್ಕೂ ಮೊದಲು ನಿಮ್ಮ ಮೊಬೈಲ್ ನಂಬರ್ ನೊಂದಾಯಿಸಿ ಕೊಳ್ಳಬೇಕು ನಂತರ ಅಲ್ಲಿಂದ ನಿವೂ ಮುಂದುವರಿಯಬೇಕು.
ನಿಮ್ಮ ಜಾತಿ ಆದಾಯ ಪ್ರಮಾಣ ಪತ್ರ ಪಡೆಯಲು ನ್ಯೂ ರಿಕ್ವೆಸ್ಟ್ (New Request) ವಿಧಾನ ಆಯ್ಕೆ ಮಾಡಬೇಕು. ನೀವು ಅಲ್ಲಿ ಆದಾಯ ಪತ್ರ ಬೇಕಿದ್ದರೆ Income Certificate ಮೇಲೆ ಮತ್ತು ಜಾತಿ ಪತ್ರ ಬೇಕಿದ್ದರೆ ಕಾಸ್ಟ ಸರ್ಟಿಫಿಕೇಟ್ ಮೇಲೆ ಒತ್ತಿ.
ಇದಾದ ನಂತರ ಭಾಷೆಯ ಆಯ್ಕೆ ತೆರೆದುಕೊಳ್ಳುತ್ತದೆ. ನಿಮಗೆ ಕನ್ನಡದಲ್ಲಿ ಬೇಕಿದ್ದರೆ ಕನ್ನಡ ಮೇಲೆ ಕ್ಲಿಕ್ ಮಾಡಿ. ಕೆಳಗಡೆ ಕೆಂಪು ಅಕ್ಷರಗಳಲ್ಲಿ ನೀಡಿರುವ ಆದಾಯ ಪ್ರಮಾಣಪತ್ರವನ್ನು ಆಯ್ಕೆ ಮಾಡಿ ನಂತರ ನಿಮ್ಮ ವೈಯಕ್ತಿಕ ವಿವರಗಳಾದ ಪಡಿತರ ಸಂಖ್ಯೆ, ಆಧಾರ್ ಸಂಖ್ಯೆ, ವಿಳಾಸ ಇತ್ಯಾದಿಗಳನ್ನು ಭರ್ತಿ ಮಾಡಿ ಮುಂದುವರೆಯಿರಿ.
ಭರ್ತಿ ಮಾಡಿದ ನಂತರ ಲಾಸ್ಟ ನಲ್ಲಿ ಆನ್-ಲೈನ್ ಪೇಮೆಂಟ್ ಪೇಜ್ ತೆರೆಯುತ್ತದೆ. ಆ ಪೇಜ್ ನಲ್ಲಿ ಕೇವಲ ರೂ. 20 ಪಾವತಿ ಮಾಡಿ ನಂತರ ನಿಮ್ಮ ಮೊಬೈಲ್ ಅಥವಾ ಆನ್-ಲೈನ್ ಮೂಲಕ 5-10 ನಿಮಿಷಗಳಲ್ಲಿಯೇ ಜಾತಿ / ಆದಾಯ ಪ್ರಮಾಣ ಪತ್ರ ನಿಮಗೆ ಸಿಗಲಿದೆ.