ಕೆಳ ಬೆನ್ನಿನಲ್ಲಿ ರಕ್ತದರಿತ ಕಡಿಮೆಯಾಗುವುದರಿಂದ ಅಲ್ಲಿರುವ ಸ್ನಾಯುಗಳು ಮತ್ತು ಮೂಳೆಗಳು ಬಳಹೀನವಾಗುತ್ತದೆ, ಆದ್ದರಿಂದ ಒಂದೇ ಸ್ಥಳದಲ್ಲಿ ಕುಳಿತುಕೊಂಡು ಕೆಲಸಮಾಡಿದರೆ ಅಥವ ಬಾರವನ್ನು ಎತ್ತಿದಾಗ ಅಥವ ಬಗ್ಗಿ ಕೆಲಸ ಮಾಡಿದಾಗ ಬೆನ್ನು ನೋವು ಬರುತ್ತದೆ.
ಉದ್ದಿನಬೇಳೆ ಬೆನ್ನು ನೋವಿಗೆ ತುಂಬಾ ಬಲವನ್ನು ಕೊಡುತ್ತದೆ, ಉದ್ದಿನಬೇಳೆಯಲ್ಲಿ ಅಧಿಕವಾಗಿರುವ ಮೆಗ್ನೆಶಿಯಂ, ಐರನ್, ಕ್ಯಾಲ್ಸಿಯಂ, ವಿಟಮಿನ್ B-12 ದೇಹಕ್ಕೆ ಒಳ್ಳೆಯ ಆರೋಗ್ಯವನ್ನು ಕೊಡುತ್ತದೆ, ಮತ್ತು ನಮ್ಮ ಮೂಳೆಯನ್ನು ಸಹ ಗತ್ತಿಯಾಗುವಂತೆ ಮಾಡುತ್ತದೆ, ಆದ್ದರಿಂದ ಉದ್ದಿನಬೇಳೆಯನ್ನು ವಾರಕ್ಕೆ ಎರಡು ಬಾರಿಯಾದರು ನಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು ಎಂದು ಆರೋಗ್ಯ ನಿಪುಣರು ಹೇಳುತ್ತಾರೆ.
ಗಸಗಸೆ ಮತ್ತು ಬಿಳಿಯ ಕಲ್ಲುಸಕ್ಕರೆಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು, ಪುಡಿಮಾಡಿ ಕೊಲ್ಲಬೇಕು, ಪ್ರತಿದಿನ ಹಾಲಿನಾಲ್ಲಿ ಈ ಪುಡಿಯನ್ನು ಬೆರಸಿ ಬೆಳಗ್ಗೆ ಹಾಗು ಸಂಜೆ ಬೆಚ್ಚಗಿನ ಹಾಲಿನಲ್ಲಿ ಬೆರಸಿ ಕುಡಿದರೆ ವೇಗವಾಗಿ ಬೆನ್ನು ನೋವು ಕಡಿಮೆಯಾಗುತ್ತದೆ.
ಬೆನ್ನುನೋವಿಗೆ ಹೆಚ್ಚಾಗಿ ಬಳಲುತ್ತಿದ್ದವರು ಬೆಳ್ಳುಳ್ಳಿಯನ್ನು ಚಿಕ್ಕದಾಗಿ ತುಂಡರಿಸಿ ಸಾಸಿವೆ ಮತ್ತು ಎಣ್ಣೆಯಲ್ಲಿ ಹಾಕಿ ಬಾಂಡಲಿಗೆ ಹಾಕಿ ಚೆನ್ನಾಗಿ ಹುರಿಯಿರಿ, ಸ್ವಲ್ಪ ಸಮಯದ ನಂತರ ಅದನ್ನು ನಿಮ್ಮ ಬೆನ್ನಿನ್ನ ಮೇಲೆ ಹಾಕಿ ನಯವಾಗಿ ಮಸಾಜ್ ಮಾಡಬೇಕು, 1 ಗಂಟೆಯ ನಂತರ ಬೆಚ್ಚಗಿನ ನೀರಲ್ಲಿ ಸ್ನಾನವನ್ನು ಮಾಡಬೇಕು ಹೀಗೆ ಮಾಡುವುದರಿಂದ ಬೆನ್ನು ನೋವಿಂದ ಬೇಗ ಪರಿಹಾರ ಸಿಗುತ್ತದೆ.