ಹಿಮ್ಮಡಿ ಒಡೆಯುವುದು ತಪ್ಪುತ್ತದೆ : ಚಳಿಗಾಲದಲ್ಲಿ ಚರ್ಮ, ಪಾದದ ಹಿಮ್ಮಡಿ ಒಡೆದು ಅಸಹ್ಯವಾಗಿ ಕಾಣಿಸಿಕೊಳ್ಳುವುದು ಎಲ್ಲರಲ್ಲೂ ಇರುವ ಸಾಮಾನ್ಯ ಸಮಸ್ಯೆಯಾಗಿದೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬಿಸಿ ನೀರಿನಲ್ಲಿ ನಿಮ್ಮ ಪಾದವನ್ನು ಸುಮಾರು ಹದಿನೈದು ನಿಮಿಷಗಳಷ್ಟು ಕಾಲ ಅದ್ದಿಕೊಂಡಿದ್ದರೆ ಸಾಕು.
ಶೀತ ಮತ್ತು ನೆಗಡಿಯ ಹತೋಟಿ : ಶೀತ, ನೆಗಡಿ ಮತ್ತು ಕಫ ಸಮಸ್ಯೆಯಿಂದ ನೀವು ಬಳಲುತ್ತಿದ್ದರೆ ನಿಮ್ಮ ಪಾದಗಳನ್ನು ಹದಿನೈದು ನಿಮಿಷಗಳ ಕಾಲ ಬಿಸಿನೀರಿನಲ್ಲಿ ಹಾಕಿ ಹದ್ದಿಕೊಂಡು ಮೂಗಿನ ಮೂಲಕ ಹಬೆಯನ್ನು ತೆಗೆದುಕೊಳ್ಳುವುದರಿಂದ ಬಹು ಬೇಗ ನಿಮ್ಮ ನಿಮ್ಮ ಕಟ್ಟಿದ ಮೂಗು, ಶೀತ, ನೆಗಡಿ ಸಮಸ್ಯೆಗಳು ಹತೋಟಿಗೆ ಬರುತ್ತವೆ ಕಫ ಸಮಸ್ಯೆಕೂಡ ಕಡಿಮೆಯಾಗುತ್ತದೆ.
ತಲೆನೋವು ಕಡಿಮೆಯಾಗುತ್ತದೆ : ಪಾದಗಳನ್ನ ಬಿಸಿ ನೀರಿನಲ್ಲಿ ಸುಮಾರು ಹದಿನೈದು ನಿಮಿಷಗಳ ಕಾಲ ಅದ್ದಿದಾಗ ಪಾದಕ್ಕೆ ರಕ್ತ ಸಂಚಾರ ಹೆಚ್ಚಾಗುವುದರಿಂದ ಕತ್ತಿನ ಮತ್ತು ಬೆನ್ನಿನ ಸ್ನಾಯುಗಳು ಸಡಿಲವಾಗುತ್ತದೆ ಹಾಗಾಗಿ ಒತ್ತಡದಿಂದ ಉಂಟಾದ ತಲೆನೋವು ದೂರವಾಗುತ್ತದೆ.
ನಿದ್ರಾಹೀನತೆಯನ್ನು ಹೋಗಲಾಡಿಸುತ್ತದೆ : ರಾತ್ರಿ ನೀವು ಮಲಗುವ ಮುಂಚೆ ಹದಿನೈದು ನಿಮಿಷಗಳ ಕಾಲ ನಿಮ್ಮ ಪಾದವನ್ನು ಬಿಸಿನೀರಿನಲ್ಲಿ ಅದ್ದಿಕೊಂಡು ಕುಳಿತುಕೊಳ್ಳುವುದರಿಂದ ನಿಮ್ಮ ಒತ್ತಡ ಕಡಿಮೆಯಾಗಿ ನಿಮ್ಮ ನಿದ್ರಾ ಹೀನತೆಯ ಸಮಸ್ಯೆಗೆ ಪರಿಹಾರ ತಂದುಕೊಟ್ಟು ಮತ್ತು ನಿದ್ರೆಯು ಚನ್ನಾಗಿ ಬರುತ್ತದೆ.
ಒತ್ತಡದ ನಿವಾರಣೆ : ಬಿಸಿ ನೀರಿನಲ್ಲಿ ನಮ್ಮ ಪಾದಗಳನ್ನು ಸುಮಾರು ಹದಿನೈದು ನಿಮಿಷಗಳ ಹೊತ್ತು ಅದ್ದಿಕೊಂಡು ಕುಳಿತುಕೊಳ್ಳುವುದರಿಂದ ದೇಹದಲ್ಲಿ ರಕ್ತ ಪರಿಚಲನೆ ಚುರುಕುಗೊಂಡು ಮಾನಸಿಕ ಮತ್ತು ದೈಹಿಕ ಒತ್ತಡವು ಕಡಿಮೆಯಾಗುತ್ತದೆ.
ಹಿಮ್ಮಡಿ ನೋವಿಗೆ ಪರಿಹಾರ : ನೀವು ಹೆಚ್ಚು ಕೆಲಸಮಾಡಿದಾಗ ನಿಮಗೆ ಹಿಮ್ಮಡಿ ನೋವು ಬರುವುದು ಸಾಮಾನ್ಯ. ಈ ರೀತಿ ಹಿಮ್ಮಡಿ ನೋವು ಬಂದಾಗ ನಿಮ್ಮ ಎರಡು ಪಾದಗಳನ್ನು ಬಿಸಿನೀರಿನಲ್ಲಿ ಅದ್ದಿಕೊಳ್ಳುವುದರಿಂದ ಹಿಮ್ಮ ನೋವು ಬಹು ಬೇಗ ಮಾಯವಾಗುತ್ತದೆ.