ಎಲ್ಲ ಋತುಗಳಲ್ಲೂ ದೊರೆಯುವ ಪಪ್ಪಾಯಿ ಹಣ್ಣಿನಲ್ಲಿ ಅಪಾರ ಔಷಧೀಯ ಗುಣಗಳಿವೆ. ನರ ದೌರ್ಬಲ್ಯ ಸೇರಿದಂತೆ ಈ ಎಲ್ಲ ರೋಗಗಳನ್ನು ಹೋಗಲಾಡಿಸುತ್ತೆ ಈ ಪಪ್ಪಾಯ ಹೀಗೆ ಬಳಸಿ
ಔಷಧೀಯ ಗುಣಗಳು : ವಿಟಮಿನ್ ಎ, ಸಿ, ಇ, ಐರನ್ ಹಾಗೂ ಕ್ಯಾಲ್ಸಿಯಂ ಅಂಶ ಹೇರಳವಾಗಿದೆ, ಇದರಲ್ಲಿರುವ ಪಪ್ಪಾಯಿಯನ್ ಎಂಬ ಜೀವಸತ್ವವು ಜೀರ್ಣಕಾರಕವಾಗಿ ಕೆಲಸ ಮಾಡುತ್ತದೆ, ವಯಸ್ಸಾದಂತೆ ಕುಗ್ಗುವ ಜೀರ್ಣಶಕ್ತಿಯನ್ನು ವೃದ್ಧಿಸಲು ಪಪ್ಪಾಯಿ ಸಹಕರಿಸುತ್ತದೆ, ಮೂಳೆ ಸವೆತಕ್ಕೆ, ಹೃದಯ ಕಾಯಿಲೆ ಉಳ್ಳವರಿಗೂ ಪಪ್ಪಾಯಿ ಸೇವನೆ ಶ್ರೇಷ್ಠ, ಮಧುಮೇಹಿಗಳೂ ಈ ಹಣ್ಣನ್ನು ಧಾರಾಳವಾಗಿ ಸೇವಿಸಬಹುದು.
ಪಪ್ಪಾಯಿ ಸೇವನೆಯಿಂದ ಕರುಳಿನಲ್ಲಿ ಸೇರಿಕೊಳ್ಳುವ ಜಂತುಗಳು ನಾಶವಾಗುವುವು, ಇದರ ಎಲೆಗಳಿಂದ ಹಲ್ಲುಜ್ಜಿದರೆ ಹಲ್ಲು ಹಾಗೂ ವಸಡು ನೋವು ನಿವಾರಣೆಯಾಗುವವು, ಪಪ್ಪಾಯಿ ಸೇವನೆಯಿಂದ ಬಾಣಂತಿಯರಿಗೆ ಎದೆಹಾಲು ಹೆಚ್ಚುತ್ತದೆ, ಮಕ್ಕಳಿಗೆ, ಹಾಲುಣಿಸುವ ತಾಯಂದಿರಿಗೆ ಪಪ್ಪಾಯಿಯು ಶಕ್ತಿದಾಯಕ ಆಹಾರ, ಮಲಬದ್ಧತೆಯೂ ನಿವಾರಣೆಯಾಗುವುದು.
ಹಾಲು, ಜೇನುತುಪ್ಪ ಹಾಗೂ ಪರಂಗಿ ಹಣ್ಣನ್ನು ಮಿಶ್ರ ಮಾಡಿ ಸೇವಿಸುವುದರಿಂದ ನರ ದೌರ್ಬಲ್ಯ ದೂರವಾಗುವುದು, ಪಪ್ಪಾಯಿ ಹಣ್ಣಿನ ಹೋಳಿನಿಂದ ಚರ್ಮವನ್ನುಜ್ಜಿದರೆ ಚರ್ಮದ ಮೇಲಿನ ಕಲೆ ಮಾಯವಾಗುತ್ತದೆ. ಮೂಲವ್ಯಾಧಿ, ಯಕೃತ್ತಿನ ದೋಷಗಳಿಗೂ ಪಪ್ಪಾಯಿ ಅತ್ಯುತ್ತಮ ಔಷಧ, ಎಲೆಯಿಂದ ಒಸರುವ ದ್ರವವನ್ನು ಗಾಯಕ್ಕೆ ಹಚ್ಚುವುದರಿಂದ ಗಾಯವು ಬೇಗನೆ ವಾಸಿಯಾಗುತ್ತವೆ.