ತುಂಬಾ ಹೆಣ್ಣು ಮಕ್ಕಳು ಗಂಡನ ಮನೆಗೆ ಹೋಗುವಾಗ ಕಣ್ಣೀರು ಹಾಕ್ತಾರೆ ಅವಳು ನಮ್ಮನ್ನೆಲ್ಲಾ ಬಿಟ್ಟು ಗಂಡನ ಮನೆಗೆ ಹೋಗ್ತಿದಾಳೆ. ಪಾಪ ಹೇಗೆ ಇರುತ್ತಾಳೋ ಏನೋ ಅಂತ.
ಹೌದು ಒಪ್ಪುವ ಮಾತು ನಾನೂ ಒಪ್ಪುವ ಆದ್ರೇ ಒಬ್ಬ ಹುಡುಗ ಮನೆಯವರನ್ನೆಲ್ಲಾ ಬಿಟ್ಟು ಒಬ್ಬನೇ ದುಡಿತಾನಲ್ಲಾ ಅವ್ನ್ ಹಣೆಬರಹ, SSLC ನೋ,PUC ನೋ ಓದ್ಕೊಂಡ್ ಬೆಂಗಳೂರ್ ಮಂಗಳೂರ್ ಅಂತ ದುಡಿಯೋಕ್ ಹೋದಾಗ ಅವನನ್ನಾ ಏನ್ ಮುದ್ದು ಮಾಡಿ ಊಟ ಹಾಕ್ತಾರಾ
ಊಟ ಇಲ್ದೆ ನಿದ್ದೆ ಇಲ್ದೆ ಯಾರ್ ಯಾರ್ ಹತ್ರನೋ ನಾಯಿಗ್ ಬೈದ ಹಾಗೆ ಬೈಸ್ಕೊಂಡ್ ಒಂದೊಂದ್ ರುಪಾಯಿನೂ ಖರ್ಚು ಮಾಡಕ್ ಯೋಚ್ನೆ ಮಾಡ್ತ ಬೇಜಾರ್ ಆಗುತ್ತೆ ನೋಡೋಣ ಅಂದ್ರೆ,ಟಿವಿ ಇರಲ್ಲ.ಮೊಬೈಲ್ ಇದ್ರೂ ಕರೆನ್ಸಿ ಹಾಕ್ಸ್ಕೊಳ್ಲಕ್ಕು ಹಿಂದೆ ಮುಂದೆ ನೋಡ್ತಾ ಒಬ್ಬನೇ ಜೀವನ ಕಳಿಯೋದ್ ಇದಿಯಲ್ಲಾ ಅದ್ರಷ್ಟು ದೊಡ್ಡ ಮಾನಸಿಕ ಹಿಂಸೆ ಮತ್ತೊಂದಿಲ್ಲ.
ಆ ತಣ್ಣೀರ್ ಸ್ನಾನ ಹೋಟೆಲಿನ ಸೋಡಾ ಹಾಕಿದ ಅನ್ನ ಆ ತಣ್ಣಗಾದ ಸಾಂಬಾರ್ ಇಷ್ಟೆಲ್ಲಾ ಕಷ್ಟ ಪಟ್ಟು ಉಳಿಸಿದ ಕಾಸಲ್ಲಿ ಮನೆ ಮಾಡ್ಬೇಕು.ಅಕ್ಕನ್ದೋ ತಂಗಿದೋ ಮದ್ವೆ ಮಾಡ್ಬೇಕು ಅಂತ ಕನಸು ಕಾಣ್ತ, ಯಾವುದೇ ಕೆಟ್ಟ ಚಟಗಳನ್ನ ಹತ್ತಿರ ಸೇರಿಸಿ ಕೊಳ್ಳದೆ, ಹೊರಗಡೆ ತಾನೂ ದುಡಿದು, ಮನೆಯ ಜವಾಬ್ದಾರಿಗಳನ್ನೆಲ್ಲಾ ಹೊತ್ಕೊಂಡ್ ಜೀವನ ಸಾಗಿಸುವುದು ಇದೆಯಲ್ಲಾ ಇದು ನಿಜವಾದ ತಪಸ್ಸು ಅಲ್ವಾ
ಈ ರೀತಿ ದುಡಿಯುವವರ ಕಷ್ಟ ಕೆಲವರಿಗೆ ಯಾಕ್ ಗೊತ್ತಾಗಲ್ಲ ಅಂದ್ರೆ ಕೆಲವರು ಹೆತ್ತವರ ಮನಸ್ಸಿಗೆ ನೋವಾಗುವುದೆಂದು ಹೇಳಿಕೊಳ್ಳುವುದೇ ಇಲ್ಲ ಹೆಣ್ಣು ಮಕ್ಕಳು ಮನೆಗೆ ಬಂದು ಹೊರಡುವ ಸಮಯದಲ್ಲಿ ಕಣ್ಣೀರು ಹಾಕ್ತಾ ಹೋಗ್ತಾರೆ. ಅಯ್ಯೋ ನನ್ ಮಗಳು ಅಳ್ತಾ ಹೋದ್ಲು ಅಂತಾರೆ ಅದೇ ವಯಸ್ಸಿಗೆ ಬಂದ ಗಂಡು ಮಕ್ಕಳು ಅಳೋಕೆ ಆಗುತ್ತಾ.
ಮನೆಯಿಂದ ಹೊರಟ ಸ್ವಲ್ಪ ಹೊತ್ತಿನ ನಂತರ ಅವನ ಕಣ್ಣುಗಳು ತುಂಬಿ ಬರ್ತಾ ಇರ್ತವೆ ಸಮಾಧಾನ ಮಾಡೋಕೆ ಯಾರೂ ಇರಲ್ಲ ಆ ನೋವು ಆ ಸಂಕಟ ಹೊರಗಡೆ ಒಬ್ಬಂಟಿ ಆಗಿ ಇರುವವರಿಗೇ ಮಾತ್ರ ತಿಳಿದಿರಲು ಸಾಧ್ಯ..ತಮ್ಮ ಬಗೆಯ ಸ್ವಾರ್ಥ ಬಿಟ್ಟು ಮನೆ ಸಂಸಾರದ ಜವಾಬ್ದಾರಿ ಅಂತ ದುಡಿತಾರಲ್ಲಾ ಅದು ನಿಜವಾದ ತಪಸ್ಸು.
ಎಷ್ಟೋ ಜನ ಹುಡುಗರು ಅಪ್ಪ ಅಮ್ಮನ ದುಡ್ಡಲ್ಲಿ ಶೋಕಿ ಮಾಡ್ತಾ ತಿರುಗುವವರ ಮುಂದೆ ಮನೆಯ ಕಷ್ಟಗಳನ್ನೆಲ್ಲಾ ತೀರಿಸಿ ನಾನ್ ನಿನ್ಕಿಂತ ಎತ್ತರಕ್ಕೆ ಬೆಳೆಯುತ್ತೇನೆ ಅಂತ ಅವ್ರಿಗೆ ಅವರೇ ಆತ್ಮ ವಿಶ್ವಾಸ ತುಂಬಿಕೊಂಡು, ನಮ್ ಕಣ್ಣಲ್ಲಿ ಹೆತ್ತವರ ಕಣ್ಣಲ್ಲಿದ್ದ ಕನಸನ್ನ ನೆರವೇರಿಸಬೇಕು ಅಂತ ಹಗಲು ರಾತ್ರಿ ದುಡಿತಾರಲ್ಲಾ ಅದು ತಪಸ್ಸು ಅಂದ್ರ.
ಈ ರೀತಿಯಾಗಿ ದುಡಿಯುವ ಎಲ್ಲಾ ಅಣ್ಣ ತಮ್ಮಂದಿರಿಗೂ ದೊಡ್ಡ ನಮಸ್ಕಾರಗಳು.ಸಂಗ್ರಹ ಮಾಹಿತಿ..