ಚಳಿಗಾಲದಲ್ಲಿ ನಿಮ್ಮ ಪಾದಗಳಿಗೆ ಸ್ಪೆಷಲ್ ಕೇರ್ ತೆಗೆದುಕೊಳ್ಳಬೇಕು. ಯಾಕೆಂದರೆ ಇದು ವಿಂಟರ್ ಸೀಸನ್ ಈ ಸಮಯದಲ್ಲಿ ವೆದರ್ ಡ್ರೈ ಆಗಿರುತ್ತದೆ. ಇದರಿಂದ ಸ್ಕಿನ್ನಲ್ಲಿರುವ ಮಾಯಿಶ್ಚರ್ ಹೀರಿಕೊಂಡು ಸ್ಕಿನ್ ಡ್ರೈ ಆಗುತ್ತದೆ, ಜೊತೆಗೆ ಪಾದಗಳು ಸಹ ಒಡೆಯುತ್ತವೆ.
ಈ ಸಮಯದಲ್ಲಿ ಕೆಲವು ಜನ ಸಾಕ್ಸ್ ಧರಿಸಿ ಕಾಲು ಬಿಸಿಯಾಗಿರುವಂತೆ ನೋಡಿಕೊಳ್ಳುತ್ತಾರೆ. ಪೂರ್ತಿದಿನ ಸಾಕ್ಸ್ ಧರಿಸಿದರೆ ಕಾಲಿಗೆ ಉಸಿರಾಡಲು ಸಹ ಸಾಧ್ಯವಾಗೋದಿಲ್ಲ. ಅದಕ್ಕಾಗಿ ಈ ಸಮಯದಲ್ಲಿ ಸ್ಕಿನ್ ಸಾಫ್ಟ್ ಆಗಿರಲು ಹಾಗೂ ಹೀಲ್ಸ್ ಒಡೆದಿರುವುದನ್ನು ನಿವಾರಣೆ ಮಾಡಲು ಪ್ರತಿದಿನ ರಾತ್ರಿ ಮಲಗುವ ಮುನ್ನ ಕಾಲಿಗೆ ಕೊಬ್ಬರಿ ಎಣ್ಣೆ ಹಾಕಿ ಮಲಗಬೇಕು.
ಪ್ರತಿದಿನ ರಾತ್ರಿ ಬಿಸಿಯಾದ ಕೊಬ್ಬರಿ ಎಣ್ಣೆಯಿಂದ ಕಾಲಿಗೆ ಮಸಾಜ್ ಮಾಡಿ. ರಾತ್ರಿ ವೇಳೆ ಬಿಸಿಯಾದ ಎಣ್ಣೆಯಿಂದ ಕಾಲಿಗೆ ಮಸಾಜ್ ಮಾಡಿದರೆ ಕಾಲು ಬಿಸಿಯಾಗುತ್ತದೆ. ಅಲ್ಲದೆ ಕಾಲಿಗೆ ಎಣ್ಣೆಯಿಂದ ಮಸಾಜ್ ಮಾಡಿದರೆ ಬ್ಲಡ್ ಸರ್ಕ್ಯುಲೇಶನ್ ಇಂಪ್ರೂವ್ ಆಗುತ್ತದೆ. ಸಲ್ಲದೆ ಇದರಿಂದ ಟೆಂಪ್ರೇಚರ್ ಹೈ ಆಗಿ ಕಾಲು ರಾತ್ರಿ ಹೊತ್ತು ಬೆಚ್ಚಗಿರುತ್ತದೆ.
ಅಲ್ಲದೆ ರಾತ್ರಿ ಹೊತ್ತು ಕಾಲಿಗೆ ಎಣ್ಣೆ ಹಚ್ಚಿದರೆ ಕಾಲಿನಲ್ಲಿ ಮಾಯಿಶ್ಚರೈಸರ್ ಹಾಗೆಯೆ ಉಳಿದುಕೊಳ್ಳುತ್ತದೆ. ಅಲ್ಲದೆ ಸ್ಕಿನ್ ಡ್ರೈ ಆಗೋದಿಲ್ಲ. ಪ್ರತಿದಿನ ಎಣ್ಣೆಯಿಂದ ಕಾಲಿಗೆ ಮಸಾಜ್ ಮಾಡಿದರೆ ಹಿಮ್ಮಡಿ ಒಡೆಯುವುದಿಲ್ಲ. ಅಲ್ಲದೆ ಡೆಡ್ ಸ್ಕಿನ್ ನಿವಾರಣೆಯಾಗಲು ಸಹಾಯ ಮಾಡುತ್ತದೆ.