ಏಲ್ಲಾ ವಿಘ್ನಗಳ ನಿವಾರಕ ಎನ್ನುವ ಗಣೇಶನನ್ನು ಎಲ್ಲರು ಪ್ರೀತಿಯಿಂದ ಪೂಜಿಸುತ್ತಾರೆ ಮತ್ತು ಎಲ್ಲರ ಮುದ್ದಿನ ದೇವರು ಅಂದ್ರೆ ಅದು ನಮ್ಮ ಗಣೇಶ ಇನ್ನು ಗಣೇಶನ ಹಿಂಬದಿಯನ್ನು ಮಾತ್ರ ನೋಡಬಾರದು ಕಾರಣ ಶಾಸ್ತ್ರಗಳಲ್ಲಿ ಗಣೇಶನ ಹಿಂಭಾಗ ನೋಡುವುದನ್ನು ನಿಷೇಧಿಸಲಾಗಿದೆ ಅಂದರೆ ಗಣೇಶನನ್ನು ಹಿಂಭಾಗದಿಂದ ದರ್ಶನ ಮಾಡಬಾರುದು ಎಂದರ್ಥ.
ಗಣೇಶನ ಶರೀರದ ಪ್ರತಿಯೊಂದು ಅಂಗಾಂಗವೂ ತನ್ನದೇ ಆದ ಮೌಲ್ಯ ಮತ್ತು ವೈಶಿಷ್ಟ್ಯಗಳನ್ನು ಹೊಂದಿದೆ. ಆನೆ ತಲೆಯಲ್ಲಿ ನಂಬಿಕೆ ಬುದ್ಧಿವಂತಿಕೆ ಮತ್ತು ವಿವೇಚನೆ ಅಡಗಿದೆ. ದಂತ, ಸಾಮರ್ಥ್ಯವನ್ನು ಸೂಚಿಸುತ್ತದೆ. ಕಿವಿ ವಿವೇಕದ ಸಂಕೇತ. ಸೊಂಡಿಲು ಸತ್ಯ ಮತ್ತು ಮಿಥ್ಯೆಗಳ ನಡುವಣ ವ್ಯತ್ಯಾಸವನ್ನು ಸೂಚಿಸುತ್ತದೆ ಹೀಗೆ ಪ್ರತಿಯೊಂದು ಭಾಗದಲ್ಲಿಯೂ ಜೀವನ ಹಾಗೂ ಬ್ರಹ್ಮಾಂಡದ ಅಂಶಗಳು ಅಡಗಿವೆ. ಆದರೆ ಗಣೇಶನ ಹಿಂಬದಿಯನ್ನು ಮಾತ್ರ ನೋಡಬಾರದು.
ಕಾರಣ ಗಣೇಶನ ಹಿಂಭಾಗದಲ್ಲಿ ದಾರಿದ್ರ್ಯ ನೆಲೆಸಿದೆಯಂತೆ ಗಣೇಶನ ಹಿಂಭಾಗವನ್ನು ದರ್ಶನ ಮಾಡುವ ವ್ಯಕ್ತಿ ಎಂತಹ ಶ್ರೀಮಂತನಾಗಿರಲಿ ಆತನಿಗೆ ಬಡತನ ಬರಲಿದೆಯಂತೆ. ಹಾಗಾಗಿ ಗಣೇಶನ ಹಿಂಭಾಗವನ್ನು ನೋಡುವಂತಿಲ್ಲ. ಗೊತ್ತಿಲ್ಲದೆ ನೋಡಿದಲ್ಲಿ ಗಣೇಶನಿಗೆ ಕ್ಷಮೆ ಕೋರಿ ಪ್ರಾರ್ಥನೆ ಮಾಡಿದ್ರೆ ಎಲ್ಲ ಪಾಪಗಳು ಪರಿಹಾರವಾಗಲಿದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.