ಮೇಷ: ಹೆಚ್ಚು ಧೈರ್ಯಶಾಲಿ, ಬುದ್ಧೀವಂತರಾಗಿರುತ್ತಾರೆ. ಆದರೆ, ತಾವು ಮಾಡಿದ ಕೆಲಸ ತಪ್ಪಾಗುವುದೆಂಬ ಭಯ ಅವರಿಗಿರುತ್ತದೆ. ಇವರು ಯಾರಿಂದಲೂ ತಾವು ಮಾಡಿರುವ ಮತ್ತು ಮಾಡುತ್ತಿರುವ ಕೆಲಸ ತಪ್ಪೆಂದು ಕೇಳಲೂ ಇಷ್ಟ ಪಡುವುದಿಲ್ಲ, ನಾಯಕತ್ವದ ಪಾತ್ರ ಹೆಚ್ಚು ವಹಿಸುವರಾಗಿದ್ದು, ತಾಳ್ಮೆ ಕಡಿಮೆ ಇರುತ್ತದೆ.
ವೃಷಭ: ಹಣ ಕಾಸಿನ ವಿಚಾರದಲ್ಲಿ ಹೆಚ್ಚು ಚತುರರಾಗಿದ್ದು, ಅನಿರೀಕ್ಷಿತವಾದ ಘಟನೆಯಿಂದ ಎನಾದರೂ ಕಳೆದುಕೊಳ್ಳಬೇಕಾದರೆ, ಆತಂಕಕ್ಕೆ ಒಳಗಾಗುತ್ತಾರೆ. ಬಡತನ ಮತ್ತು ತನ್ನ ಕನಸು ನನಸಾಗುವುದಿಲ್ಲವೆಂದು ಹೆದರುತ್ತಾರೆ. ಸದಾ ದೃಢರಾಗಿರಲು ಇಚ್ಛಿಸುತ್ತಾರೆ.
ಮಿಥುನ: ಈ ರಾಶಿಯಲ್ಲಿ ಹುಟ್ಟಿದವರಿಗೆ ಏಕತಾನತೆಯ ಜೀವನ ಇಷ್ಟವಾಗುವುದಿಲ್ಲ. ನಿಧಾನವಾಗಿ ಸಿಲುಕಿದ ಭಾವನೆ ಉಂಟಾಗುತ್ತದೆ. ಅವರು ಹೆಚ್ಚಾಗಿ ಮೌನ ಮತ್ತು ನಿರ್ಲಿಪ್ತತೆಗೆ ಹೆದರುತ್ತಾರೆ. ಇವರು ಹೊಸತನ್ನು ಕಲಿಯಲು, ಹೊಸ ವಿಚಾರದಲ್ಲಿ ಅನುಭವ ಪಡೆಯಲು ಇಚ್ಛಿಸುತ್ತಾರೆ. ಸಂಕಷ್ಟಕ್ಕೆ ಸಿಲುಕಿದಾಗ ಇವರು ಬೇಗ ಖಿನ್ನತೆಗೊಳಗಾಗುತ್ತಾರೆ.
ಕರ್ಕಾಟಕ: ಎಷ್ಟೇ ಸ್ವತಂತ್ರಿಗಳಾದರೂ ಇವರು ಜನರ ಸುತ್ತ ಇರಲು ಬಯಸುತ್ತಾರೆ. ಏಕಾಂಗಿಯಾಗುವರು ಎಂಬ ಭಯ ಇವರಲ್ಲಿದ್ದು, ಬಿಡುವಿನ ಸಮಯದಲ್ಲಿ ಸ್ನೇಹಿತರು ಮತ್ತು ಕುಟುಂಬದವರನ್ನು ಭೇಟಿ ಮಾಡುತ್ತಾರೆ.
ಸಿಂಹ: ಇವರು ಹೆಚ್ಚಾಗಿ ಗಮನ ಸೆಳೆಯುವ ಗುಣದವರಾಗಿದ್ದು, ಯಾವುದಾದರೂ ಒಂದು ವಿಚಾರದಲ್ಲಿ ಜನರ ಮಧ್ಯೆ ಇದ್ದು ಗಮನ ಸೆಳೆಯುತ್ತಿರುತ್ತಾರೆ.
ಕನ್ಯಾ: ಇವರು ಜೀವನದಲ್ಲಿ ಪರಿಪೂರ್ಣರಾಗಿರುತ್ತಾರೆ. ತಿರಸ್ಕಾರವಾಗುವ ಬಗ್ಗೆ ಇವರಿಗೆ ಆತಂಕ ಹೆಚ್ಚು. ತಾನು ಮಾಡಿದ ಕೆಲಸದಿಂದ ತಮ್ಮನ್ನು ವರ್ಣಿಸಿಕೊಳ್ಳುತ್ತಾರೆ. ಅವರು ಬಯಸಿದಂತೆ ಜೀವನ ಸಾಗದಿದ್ದರೆ, ಆತಂಕಕ್ಕೊಳಗಾಗುತ್ತಾರೆ.
ತುಲಾ:ಜೀವನವನ್ನು ಸುಲಭವಾಗಿ ಸಾಗಿಸುವರಾಗಿದ್ದು, ಕಷ್ಟವನ್ನು ಎದರಿಸುವ ಸಂದರ್ಭ ಬಂದರೆ ಧೈರ್ಯವೇ ಇರುವುದಿಲ್ಲ. ಅದರಿಂದ ಕೆಲವು ವಿಷಯವನ್ನು ಸುಲಭವಾಗಿಯೇ ಬಿಟ್ಟು ಕೊಡುತ್ತಾರೆ.
ವೃಶ್ಚಿಕ: ಹೆಚ್ಚು ಭಾವನಾತ್ಮಕ ರಾಶಿಯಾಗಿದ್ದು, ತನ್ನ ನೈಜ ಮುಖವನ್ನು ಬೇರೆಯವರಿಗೆ ತೋರಿಸಲು ಹೆದರುತ್ತಾರೆ. ತನ್ನ ಜೀವನದ ಕಹಿ ಕ್ಷಣವನ್ನು ನೆನೆಪಿಸಿಕೊಳ್ಳಲು ಇಚ್ಛಿಸುವುದೂ ಇಲ್ಲ.
ಧನಸ್ಸು: ಇವರು ಯಾರಿಂದನ್ನೂ ಮಾರ್ಗದರ್ಶನ ಪಡೆಯಲು ಬಯಸುವುದಿಲ್ಲ. ತನ್ನ ಸ್ವಂತ ಹಾದಿಯಲ್ಲಿ ನಡೆಯುವವರಾಗಿರುತ್ತಾರೆ. ಸ್ವತಂತ್ರ ಕಳೆದುಕೊಳ್ಳುವ ಆತಂಕದಲ್ಲಿರುತ್ತಾರೆ.
ಮಕರ: ಸದಾ ಪರಿಪೂರ್ಣರಾಗಿರಲು ಬಯಸೋ ಇವರು ಸಾಧಿಸುವ ಛಲ ಹೊಂದಿರುತ್ತಾರೆ. ಆದರೆ, ಸಾಧಿಸೋ ಯಶಸ್ಸು ಹಾಗೂ ಸಾಧನೆ ಬಗ್ಗೆ ಇವರನ್ನು ಒಂದು ರೀತಿಯ ಭಯ ಕಾಡುತ್ತಿರುತ್ತದೆ.
ಕುಂಭ: ಇವರು ಶ್ರೀಸಾಮಾನ್ಯನಂತೆ ಬದುಕಲು ಇವರಿಗೆ ಇಷ್ಟವಿರೋಲ್ಲ. ತಾನು ತನ್ನು ಸ್ವಂತಿಕೆಯಿಂದ ಜನರು ಗುರುತಿಸಲಿ ಮತ್ತು ದೇಶದಲ್ಲಿ ಬದಲಾವಣೆ ತರಬೇಕೆಂದು ಬಯಸುತ್ತಾರೆ. ಅದರೆ, ಇಂಥ ಅಭಿಪ್ರಾಯ ವ್ಯಕ್ತಪಡಿಸಲು ಹೆದರುತ್ತಾರೆ.
ಮೀನ: ಇವರು ಜೀವನವೆಂದರೆ ಹೆದರುತ್ತಾರೆ. ಎಲ್ಲಿ ತಮ್ಮ ಬುದ್ಧೀವಂತಿಕೆ ಮತ್ತು ಸೃಜನಶೀಲತೆ ಕಡಿಮೆಯಾಗುತ್ತೋ ಎಂಬ ಭಯ ಇವರಿಗಿರುತ್ತದೆ.