ತೆಂಗಿನ ಎಣ್ಣೆ : ತೆಂಗಿನ ಎಣ್ಣೆಯನ್ನು ಮೊದಲು ಬಿಸಿ ಮಾಡಿ ನಂತರ ನಿಮ್ಮ ತ್ವಚೆಗೆ ಹಚ್ಚಿ ಒಂದು ರಾತ್ರಿ ಪುರ ಬಿಡಿ, ನಂತರ ಮುಂಜಾನೆ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ, ಎಣ್ಣೆ ಹಚ್ಚಿದಾಗ ಕಾಟನ್ ಬಟ್ಟೆ ಧರಿಸಿ.
ನಿಂಬೆ ರಸ ಮತ್ತು ತೆಂಗಿನೆಣ್ಣೆ : ನಿಂಬೆ ರಸ ಮತ್ತು ತೆಂಗಿನೆಣ್ಣೆಯನ್ನು ಮಿಶ್ರ ಮಾಡಿ ರಾತ್ರಿಯಲ್ಲಿ ಮೈಗೆ ಹಚ್ಚಿ ಬೆಳಗ್ಗೆ ಸ್ನಾನ ಮಾಡಬೇಕು, ಈ ರೀತಿ ಮಾಡುತ್ತಿದ್ದರೆ ಅಲರ್ಜಿ ಸಮಸ್ಯೆ ನಿವಾರಣೆಯಾಗುವುದು.
ಕಹಿ ಬೇವಿನ ಮಿಶ್ರಣ : ಕಹಿ ಬೇವಿನ ಎಲೆಯನ್ನು ಚೆನ್ನಾಗಿ ಅರೆದು ಮೈಗೆ ಹಚ್ಚಬೇಕು, ಅರ್ಧ ಗಂಟೆ ಬಳಿಕ ತಣ್ಣೀರಿನಲ್ಲಿ ಸ್ನಾನ ಮಾಡಬೇಕು ಅಲರ್ಜಿ ಇದ್ದರೂ, ಇಲ್ಲದಿದ್ದರೂ ಕಹಿ ಬೇವಿನ ಎಲೆಯನ್ನು ಸ್ನಾನ ಮಾಡುವ ನೀರಿಗೆ ಹಾಕುವುದು ಒಳ್ಳೆಯದು.
ಗಸೆಗಸೆ ಮತ್ತು ನಿಂಬೆ ರಸ : ಗಸೆಗಸೆಯನ್ನು ಅರೆದು ಅದಕ್ಕೆ ಸ್ವಲ್ಪ ನಿಂಬೆ ರಸ ಹಾಕಿ ಅದನ್ನು ಅಲರ್ಜಿಯಿಂದ ಉಂಟಾದ ಗಾಯಕ್ಕೆ ಹಚ್ಚಿದರೆ ಅಲರ್ಜಿಯಿಂದ ಉಂಟಾಗಿರುವ ಗಾಯವನ್ನು ಒಣಗುತ್ತದೆ.
ತಣ್ಣೀರು ಸ್ನಾನ : ತಣ್ಣೀರಿನಲ್ಲಿ ಸ್ನಾನ ಮಾಡುವುದು ಅಲರ್ಜಿ ಸಮಸ್ಯೆ ನಿವಾರಣೆಗೆ ಮತ್ತು ಆರೋಗ್ಯಕ್ಕೆ ಒಳ್ಳೆಯದು ತ್ವಚೆ ಅಲರ್ಜಿ ಉಂಟಾಗಿದ್ದರೆ ಬಿಸಿ ನೀರಿನಲ್ಲಿ ಸ್ನಾನ ಮಾಡದಿರುವುದು ಒಳ್ಳೆಯದು, ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ಗಾಯದ ಉರಿ ಹೆಚ್ಚಾಗುತ್ತದೆ.