ಹೌದು ನಮ್ಮ ದೇಶದಲ್ಲಿ ವಿವಿಧ ಬಗೆಯ ದೇವಸ್ಥಾನಗಳು ಕಂಡುಬರುತ್ತವೆ ಮತ್ತು ಪ್ರತಿಯೊಂದು ದೇವರುಗಳು ತನ್ನದೆಯಾದ ವಿಶೇಷ ಮಹತ್ವ ಹಾಗು ಮಹಿಮೆಯನ್ನು ಹೊಂದಿರುತ್ತವೆ ಹಾಗೆ ಈ ದೇವಸ್ಥಾನ ಸಹ ಒಂದು.
ಈ ದೇವರನ್ನು ಬೇಡಿಕೊಂಡರೆ ಸಂತಾನ ಪ್ರಾಪ್ತಿಯಾಗುತ್ತದೆ. ಪತಿ -ಪತ್ನಿ ಈ ದೇವರ ಬಳಿ ಹೋಗಿ ಪೂಜಿಸಿದರೆ ಸಂತಾನ ಪ್ರಾಪ್ತಿಯಾಗುವಂತೆ ಬೇಡಿಕೊಂಡರೆ, ಬೇಗ ಮಗುವಾಗುತ್ತಂತೆ.
ಇಲ್ಲಿಗೆ ಪ್ರತಿದಿನ ನೂರಾರು ಭಕ್ತರು ಸಂತಾನೇಶ್ವರನ ದರ್ಶನಕ್ಕೆ ಬರುತ್ತಾರೆ. ಸೋಮವಾರ ಈ ಮಂದಿರದಲ್ಲಿ ಸಂತಾನ ಪ್ರಾಪ್ತಿಗಾಗಿ ಬರುವ ಜೋಡಿಗಳ ಸಂಖ್ಯೆ ಅಧಿಕವಾಗಿರುತ್ತದೆ. ಈ ದಿನ ಅಲ್ಲಿ ರುದ್ರಾಭಿಷೇಕ ಮಾಡುವುದು ಅಲ್ಲಿನ ವಿಶೇಷ.
ಶಿವ ಪುರಾಣದಲ್ಲಿಯೂ ಈ ಬಗ್ಗೆ ಉಲ್ಲೇಖವಿದೆ. ಇದರ ಅನುಸಾರ ಕಾಶಿಯ ಸಂತಾನೇಶ್ವರ ಮಹಾದೇವನ ಮುಂದೆ ಯಾವುದೇ ಮಕ್ಕಳಿಲ್ಲದ ದಂಪತಿ ಬಂದು ಜಲಾಭಿಷೇಕ ಮಾಡಿ, ಶಿವನಿಗೆ ಬಿಲ್ವ ಪತ್ರೆ ಸಮರ್ಪಿಸಿದರೆ, ಸಂತಾಸ ಸುಖ ಸಿಗುತ್ತದೆ.
ಮಂದಿರದ ಪರಿಸರದೊಳಗೇ ಅಮೃತೇಶ್ವರ ಮಹಾದೇವನ ಮಂದಿರವಿದೆ. ಈ ದೇವನ ದರ್ಶನ ಪಡೆದರೆ ಜ್ಯೋತಿಷ್ಯದಲ್ಲಿ ಅಲ್ಪಾಯು ಯೋಗವಿದ್ದವರು ಮುಕ್ತಿ ಪಡೆಯಬಹುದೆಂಬ ನಂಬಿಕೆ ಇದೆ. ಜೊತೆಗೆ ಧೀರ್ಘಾಯುಷ್ಯ ಪ್ರಾಪ್ತಿಯಾಗುತ್ತದೆ. ಈ ಮಂದಿರ ಕಾಶಿಯ ಕಾಲಭೈರವದಿಂದ ಚೌಖಂಬಾ ಕಡೆಗೆ ಹೋಗುವ ದಾರಿಯಲ್ಲಿ ಸಿಗುತ್ತದೆ.