ಹೌದು ಎಲ್ಪಿಜಿ ಸಬ್ಸಿಡಿ ಹಣ ನೇರವಾಗಿ ನಿಮ್ಮ ಖಾತೆಗೆ ಬರಲಿದೆ ಆದ್ರೆ ಕೆಲವೊಮ್ಮೆ ನಿಮ್ಮ ಖಾತೆಗೆ ಹಣ ಬಂದಿರುವುದಿಲ್ಲ ಯಾಕೆ ಅಂದ್ರೆ ಬ್ಯಾಂಕ್ ಸಿಬ್ಬಂದಿಗಳ ತಪ್ಪಿನಿಂದ ಕೆಲವೊಮ್ಮೆ ನಿಮ್ಮ ಖಾತೆಗೆ ಹಣ ಬಂದಿರುವುದಿಲ್ಲ ಹಾಗಾಗಿ ನಿಮಗೂ ಇಂತಹ ಸಮಸ್ಯೆ ಆಗಬಾರದು ಹಾಗಾಗಿ ನಿಮ್ಮ ಎಲ್ಪಿಜಿ ಸಬ್ಸಿಡಿ ಹಣ ನಿಮ್ಮ ಖಾತೆಗೆ ಜಮಾ ಆಗಿದೆಯಾ ಅಥವಾ ಇಲ್ವಾ ಅನ್ನೋದು ಹೇಗೆ ಚೆಕ್ ಮಾಡೋದು ಅನ್ನೋದು ಇಲ್ಲಿದೆ.
ನಿಮ್ಮ ಸಬ್ಸಿಡಿ ಹಣ ಚೆಕ್ ಮಾಡಲು ಈ ರೀತಿಯಾಗಿ ಮಾಡಿ: ನಿಮ್ಮ ಮನೆಯಲ್ಲೇ ಕೂತುಕೊಂಡು ನಿಮ್ಮ ಮೊಬೈಲ್ ನಲ್ಲೆ ಚೆಕ್ ಮಾಡಬಹುದು. ನಿಮ್ಮ ಮೊಬೈಲ್ ತೆಗೆದುಕೊಂಡು www.mylpg.in ಎಂದು ಟೈಪ್ ಮಾಡಿ ನಂತರ ಸರ್ಚ್ ಕೊಡಿ, ಆಗ ಅಲ್ಲಿ ಎಲ್ಲ ಗ್ಯಾಸ್ ಕಂಪನಿಗಳ ಹೆಸರುಗಳನ್ನೂ ತೋರಿಸುತ್ತದೆ.
ನಂತರ ನಿಮ್ಮ ಗ್ಯಾಸ್ ಯಾವ ಕಂಪನಿ ಅನ್ನೋದನ್ನ ತಿಳಿದುಕೊಂಡು ಆ ಕಂಪನಿಯ ಮೇಲೆ ಕ್ಲಿಕ್ ಮಾಡಿ. ನಂತರ ನಿಮ್ಮ ಎಲ್ಪಿಜಿ ಐಡಿ ಹಾಕಿ ನಂತರ ನಿಮ್ಮ ನೊಂದಾಯಿತ ಮೊಬೈಲ್ ನಂಬರ್ ಸಿಗುತ್ತದೆ. ಮತ್ತು ನಿಮಗೆ ಯಾವ ವರ್ಷದ ಮಾಹಿತಿ ಬೇಕೋ ಆ ವರ್ಷವನ್ನು ಹಾಕಿ. ಉದಾಹರಣೆಗೆ 2019 ಎಂದು ಹಾಕಬೇಕು.
ನಂತರ ನಿಮ್ಮ ಖಾತೆಗೆ ಜಮಾ ಆಗಿರುವ ಹಣವನ್ನು ತೋರಿಸುತ್ತದೆ ಎಷ್ಟು ನಿಮ್ಮ ಖಾತೆಗೆ ಹಣ ಸಂದಾಯವಾಗಿದೆ ಎಂದು ಮಾಹಿತಿ ಸಿಗಲಿದೆ. ಒಂದು ವೇಳೆ ನಿಮ್ಮ ಖಾತೆಗೆ ಹಣ ಲಭ್ಯವಾಗಿಲ್ಲ ಅಂದ್ರೆ ಈ ನಂಬರ್ ಗೆ ದೂರು ನೀಡಿ 18002333555