ಅತಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸುವುದು ಇತ್ತೀಚಿನ ಹೊಸ ಟ್ರೆಂಡ್. ಬೃಹತ್ ಮೊತ್ತವನ್ನು ಹೂಡಿಕೆ ಮಾಡದೇ ಕಡಿಮೆ ಬಂಡವಾಳದಲ್ಲಿ ಬಿಸಿನೆಸ್ ಮಾಡಲು ಹಲವಾರು ಮಾರ್ಗಗಳಿವೆ. ಅಂತಹ ಐಡಿಯಾಗಳಿಗಾಗಿ ನಮ್ಮಲ್ಲಿ ತುಂಬಾ ಜನ ಎದುರು ನೋಡುತ್ತಿರುತ್ತಾರೆ. ಅಂಥವರಿಗೆ ಒಂದೊಳ್ಳೆ ಐಡಿಯಾ ಇಲ್ಲಿದೆ ನೋಡಿ.
ಅಲೋವೆರಾ ಬಗ್ಗೆ ಪ್ರತಿಯೊಬ್ಬರಿಗೂ ಗೊತ್ತೆ ಇದೆ. ಇದೀಗ ಜಗತ್ತಿನಾದ್ಯಂತ ಆಯುವೇದಿಕ್ ಔಷಧಿಗಳು ಹೆಚ್ಚು ಬೇಡಿಕೆ ಹೊಂದಿವೆ. ಅಲೋವೆರಾವನ್ನು ಕೂಡ ಔಷಧಿಯಾಗಿ ಬಳಸಲಾಗುತ್ತದೆ. ಅಲೋವೆರಾಕ್ಕೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಣ್ಣ ಆಯರ್ವೇದ ಕಂಪನಿಯಿಂದ ಹಿಡಿದು ದೊಡ್ಡ ಮಲ್ಟಿ ನ್ಯಾಷನಲ್ ಕಂಪನಿಗಳವರೆಗೆ ಅಲೋವೆರಾ ಉತ್ಪನ್ನಗಳನ್ನು ಮಾರಾಟ ಮಾಡುತ್ತಿವೆ.
ಅಲೋವೆರಾ ಬಿಸಿನೆಸ್ ಹೇಗೆ? :ಹಾಗಿದ್ದರೆ ಅಲೋವೆರಾದಿಂದ ಹಣ ಗಳಿಕೆ ಹೇಗೆ ಮಾಡಬಹುದು ಎಂಬ ಪ್ರಶ್ನೆ. ಇದನ್ನು ಎರಡು ರೀತಿಯಲ್ಲಿ ಮಾಡಬಹುದಾಗಿದ್ದು, ಒಂದು ಅಲೋವೆರಾ ಬೆಳೆದು ಅದನ್ನು ಮಾರಾಟ ಮಾಡಿ ಸುಮಾರು 5 ರಿಂದ 10 ಲಕ್ಷದವರೆಗೆ ವಾರ್ಷಿಕ ಗಳಿಕೆ ಮಾಡಬಹುದು. ಇನ್ನೊಂದು ಅಲೋವೆರಾ ಪ್ರೊಸೆಸಿಂಗ್ ಯುನಿಟ್ ಸ್ಥಾಪಿಸಿ ಜ್ಯೂಸ್ ಮಾಡಿ ಮಾರಾಟ ಮಾಡಿ ಗಳಿಕೆ ಮಾಡಬಹುದು.
ಮೊದಲ ಹಂತ :ಅಲೋವೆರಾ ಬೆಳೆದು ಮಾರಾಟ ಮಾಡಿ ಹಣ ಗಳಿಸುತ್ತೇನೆ ಎನ್ನುವವರಿಗೆ ಆರಂಭದಲ್ಲಿ ರೂ. 50 ಸಾವಿರ ಖರ್ಚು ಬರಬಹುದು. ಒಂದು ಹೆಕ್ಟೇರ್ ಜಾಗದಲ್ಲಿ ಅಲೋವೆರಾ ಬೆಳೆದು ಮೂರು ವರ್ಷಗಳ ಕಾಲ ಫಲ ಪಡೆಯಬಹುದಾಗಿದೆ.
ಸೂಚನೆ: ನಿಮ್ಮ ಭಾಗದ ಕೃಷಿ ಇಲಾಖೆಯನ್ನು ಸಂಪರ್ಕಿಸಿ, ಕೃಷಿ ತಜ್ಞರ ಸಲಹೆ ಪಡೆದು ಅಲೋವೆರಾ ಕೃಷಿಯಲ್ಲಿ ಮುಂದುವರೆಯುವುದು ಉತ್ತಮ.
50 ಸಾವಿರ ಖರ್ಚು :IC 111271, IC111269 ಮತ್ತು AL-1 ಜಾತಿಯ ಅಲೋವೆರಾವನ್ನು ಎಲ್ಲಿ ಬೇಕಾದ್ರೂ ಬೆಳೆಯಬಹುದಾಗಿದ್ದು, ಡಿಯನ್ ಕೌನ್ಸಿಲ್ ಫಾರ್ ಅಗ್ರಿಕಲ್ಚರ್ ರಿಸರ್ಚ್ ಹೇಳುವಂತೆ ಒಂದು ಹೆಕ್ಟೇರ್ ಜಾಗದಲ್ಲಿ ಅಲೋವೆರಾ ಬೆಳೆ ತೆಗೆಯಲು ರೂ. 27,500 ಖರ್ಚಾಗುತ್ತದೆ. ಗೊಬ್ಬರ, ಕೂಲಿ ಎಲ್ಲ ಸೇರಿ ಇದು ರೂ. 50 ಸಾವಿರದವರೆಗೆ ಆಗಬಹುದು.
40-45 ಟನ್ ಅಲೋವೆರಾ ಬೆಳೆಯಬಹುದು ಒಂದು ವರ್ಷದಲ್ಲಿ ಒಂದು ಹೆಕ್ಟೇರ್ ಜಾಗದಲ್ಲಿ ಸುಮಾರು 40-45 ಟನ್ ಅಲೋವೆರಾ ಎಲೆಗಳನ್ನು ಬೆಳೆಯಬಹುದು. ಬೇರೆ ಬೇರೆ ಕಡೆ ಅಲೋವೆರಾ ಎಲೆಗೆ ಬೇರೆ ಬೇರೆ ದರವಿದೆ. ಸುಮಾರು ಒಂದು ಟನ್ ಎಲೆಗೆ ರೂ. 20000 ರೂಪಾಯಿಯಿದೆ.
10 ಲಕ್ಷ ಗಳಿಕೆ :ಒಂದು ಹೆಕ್ಟೇರ್ ಜಾಗದಲ್ಲಿ ಸುಮಾರು 40-45 ಟನ್ ಅಲೋವೆರಾ ಬೆಳೆಯಲು ಸಾದ್ಯವಿರುವುದರಿಂದ ವರ್ಷಕ್ಕೆ ಸುಮಾರು 10 ಲಕ್ಷ ಗಳಿಕೆ ಮಾಡಬಹುದು. ಇನ್ನು 2-3 ವರ್ಷದಲ್ಲಿ ಬೆಳೆ ಹೆಚ್ಚಿರುತ್ತದೆ. ಆದರೆ ಐದನೇ ವರ್ಷದಲ್ಲಿ ಬೆಳೆ ಪ್ರಮಾಣ ಕಡಿಮೆಯಾಗುತ್ತದೆ. ಮೂಲ : ಕನ್ನಡ ಗುಡ್ ರಿಟರ್ನ್.