ಹಳ್ಳಿ ಕಡೆಗಳಲ್ಲಿ ಹಿತ್ತಲ ಬೇಲಿಗಳಲ್ಲಿ ತೊಂಡೆ ಕಾಯಿಯನ್ನು ಬೆಳೆಸುತ್ತಾರೆ, ಆದರೆ ಅದರ ಬಳಕೆ ಮಾಡುವುದು ತುಂಬಾ ಕಡಿಮೆ. ಆದರೆ ಇದರ ಬಳಕೆಯಿಂದಾಗುವ ಆರೋಗ್ಯಕಾರಿ ಲಾಭಗಳನ್ನು ತಿಳಿದರೆ ನೀವು ಖಂಡಿತ ತಪ್ಪದೆ ಬಳಕೆ ಮಾಡುತ್ತೀರಾ.
ತೊಂಡೆಕಾಯಿಯ ಆರೋಗ್ಯಕಾರಿ ಗುಣಗಳೆಂದರೆ: ತೊಂಡೆ ಕಾಯಿಯನ್ನು ತಿನ್ನುವುದರಿಂದ ಚರ್ಮದ ಸಮಸ್ಯೆ ನಿವಾರಿಸುತ್ತದೆ.
ತೊಂಡೆಕಾಯಿಯ ಹಸಿ ಹಣ್ಣನ್ನು ದಿನಕ್ಕೆ 2 ರಂತೆ ಸೇವಿಸಿದರೆ ಒಣಗಿರುವ ಚರ್ಮ ಮೃದುವಾಗುತ್ತದೆ ಮತ್ತು ಮಧುಮೇಹವು ಸಹ ಗುಣವಾಗುತ್ತದೆ.
ಒಂದು ಲೋಟ ತೊಂಡೆಕಾಯಿ ಎಲೆಯ ರಸವನ್ನು ಒಂದು ಲೋಟ ಎಳ್ಳೆಣ್ಣೆ ಜತೆ ಕುದಿಸಿ ಆ ಎಣ್ಣೆಯನ್ನು ಚರ್ಮದ ಮೇಲೆ ಹಚ್ಚಿದರೆ ಸೋರಿಯಾಸಿಸ್ನಂತಹ ಚರ್ಮದ ಸಮಸ್ಯೆ ಕಡಿಮೆಯಾಗುತ್ತದೆ.
ದೇಹದಲ್ಲಿ ಹುಳು ಕಚ್ಚಿ ಗಾಯ , ಗಂದೆ ಅಥವಾ ತುರಿಕೆಯಾಗಿದ್ದರೆ, ತೊಂಡೆಕಾಯಿಯ ಎಲೆಗಳನ್ನು ಜಜ್ಜಿ ಹಚ್ಚಿದರೆ ಗಾಯ, ಗಂದೆ, ತುರಿಕೆ ಕಡಿಮೆಯಾಗುತ್ತದೆ .
ತೊಂಡೆಕಾಯಿ ಎಲೆಯ 5 ಚಮಚ ರಸಕ್ಕೆ 1 ಲೋಟ ನೀರು ಹಾಕಿ ಕುದಿಸಿ ಅರ್ಧಕ್ಕೆ ಇಳಿಸಿ. ನಂತರ ಸೇವಿಸಿದರೆ ದೇಹದ ಉಷ್ಣತೆ ಮತ್ತು ಕಣ್ಣುರಿ ಕಡಿಮೆಯಾಗುತ್ತದೆ.
ಅತಿಯಾಗಿ ಭೇದಿಯಾಗುತ್ತಿದ್ದರೆ 2 ಚಮಚ ತೊಂಡೆಕಾಯಿ ಎಲೆಯ ರಸವನ್ನು ಅರ್ಧ ಬಟ್ಟಲು ಮೊಸರಿನ ಜತೆ ದಿನಕ್ಕೆ 2 ಬಾರಿ ಸೇವಿಸಿದರೆ ಭೇದಿ ನಿಲ್ಲುತ್ತದೆ. ತೊಂಡೆ ಹಣ್ಣನ್ನು ಬಾಯಿಗೆ ಹಾಕಿ ಚೆನ್ನಾಗಿ ಜಗಿದರೆ ಬಾಯಿ ಹುಣ್ಣು ಕಡಿಮೆಯಾಗುತ್ತದೆ.