WhatsApp Group Join Now

ಮನೆಯಲ್ಲಿ ಅದೃಷ್ಟ ಲಕ್ಷ್ಮಿ ಇದ್ರೆ ಹಣಕಾಸಿನ ತೊಂದರೆನೇ ಇರೋದಿಲ್ಲ, ದೇವರು ಇದಾನೋ ಇಲ್ಲೋ ಗೊತ್ತಿಲ್ಲ ಆದ್ರೆ ಮನುಷ್ಯ ನಂಬಿಕೆಯ ಆಧಾರದ ಮೇಲೆ ದೇವಾಲಯಕ್ಕೆ ಹೋಗುತ್ತಾನೆ. ಹಾಗೆಯೆ ಪ್ರತಿಯೊಂದು ನಂಬಿಕೆಯ ಆಧಾರದಮೇಲೆ ನಡೆಯುತ್ತದೆ, ಪಂಡಿತರು ಹೇಳುವ ಹಾಗೆ ಮನೆಯಲ್ಲಿ ಲವಂಗಗಳನ್ನು ಈ ರೀತಿಯಾಗಿ ಮಾಡಿದರೆ ಮನೆಯಲ್ಲಿ ಹಣಕಾಸು ಯಾವಾಗಲು ಇರುತ್ತದೆ ಎಂಬುದಾಗಿ ಹೇಳಲಾಗುತ್ತದೆ.

ಅಷ್ಟಕ್ಕೂ ಮಾಡಬೇಕಾಗಿರುವುದು ಏನು ಅನ್ನೋದು ಇಲ್ಲಿದೆ ನೋಡಿ ಇದು ಅವರ ಅವರ ನಂಬಿಕೆಗೆ ಬಿಟ್ಟ ವಿಚಾರ. ಸೂರ್ಯೋದಯಕ್ಕೂ ಮುನ್ನ ಎದ್ದು ತಲೆ ಸ್ನಾನ ಮಾಡಿ ಪೂಜೆ ಮಾಡುವ ಮುನ್ನ ಲವಂಗಗಳನ್ನು ತಗೆದುಕೊಂಡು ಒಂದು ಶುಭ್ರವಾದ ಕೆಂಪು ಬಟ್ಟೆಯಲ್ಲಿ ಇಟ್ಟು, ಲಕ್ಷ್ಮಿ ದೇವಿಯ ಮುಂದೆ ಗೋವಿನ ತುಪ್ಪದ ದೀಪವನ್ನು ಹಚ್ಚಿ ಪ್ರಾರ್ಥಿಸಿ.

ನಂತರ ಕೆಂಪು ಬಟ್ಟೆಯಲ್ಲಿ ಕಟ್ಟಿಟ್ಟ ಲವಂಗವನ್ನು ಅದೇವಿಯ ಮೇಲೆ ಹಾಕಿ ಪೂಜೆ ಮಾಡಬೇಕು, ಪೂಜೆ ಮುಗಿದ ಮೇಲೆ ಲವಂಗವನ್ನು ಕಟ್ಟಿಟ್ಟ ಕೆಂಪು ಬಟ್ಟೆಯನ್ನು ನೀವು ಹಣಕಾಸು ಇಡುವ ಸ್ಥಳದಲ್ಲಿ ಇಡಬೇಕು. ಈ ವಿಷಯವನ್ನು ಮನೆಯವರಿಗೆ ಬಿಟ್ರೆ ಬೇರೆ ಯಾರಿಗೂ ತಿಳಿಯದ ರೀತಿಯಲ್ಲಿ ಮಾಡಬೇಕಾಗುತ್ತದೆ.

ಈ ರೀತಿ ಮಾಡಿದರೆ ನೀವು ಮಾಡುವಂತ ಕೆಲಸದಲ್ಲಿ ಹಾಗು ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭವನ್ನು ಪಡೆಯುವುದರ ಜೊತೆಗೆ ಲಕ್ಷ್ಮಿ ದೇವಿ ಸದಾ ಮನೆಯಲ್ಲಿ ನೆಲೆಸಿರುತ್ತಾಳೆ.

WhatsApp Group Join Now

Leave a Reply

Your email address will not be published. Required fields are marked *