ಸಾಮಾನ್ಯವಾಗಿ ದೇಹದಲ್ಲಿ ಉಷ್ಣತೆ ಹೆಚ್ಚಾದರೆ ಮತ್ತು ಅಥವಾ ಬೇಸಿಗೆಕಾಲದಲ್ಲಿ ಸಾಮಾನ್ಯವಾಗಿ ಮೂಗಿನಲ್ಲಿ ರಕ್ತಸ್ರಾವ ಆಗುತ್ತದೆ. ಈ ಸಮಸ್ಯೆಗೆ ಏನು ಮಾಡಬೇಕು ಅನ್ನೋ ಚಿಂತೆ ಬಿಡಿ ಇದಕ್ಕೆ ಇಲ್ಲಿದೆ ನಿಮ್ಮ ಮನೆಯಲ್ಲಿ ಸರಳ ಮದ್ದು.
ಪ್ರತಿ ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಗೆ ಒಂದು ಏಳನೀರನ್ನು ಕುಡಿದರೆ ಮೂಗಿನಿಂದ ರಕ್ತ ಬರುವುದಿಲ್ಲ. ಮೂಗಿನಲ್ಲಿ ರಕ್ತ ಬರುತ್ತಿದ್ದಾಗ ಹಣೆ ಮೇಲೆ ಐಸ್ ಪ್ಯಾಕ್ ಇಟ್ಟ ಕೂಡಲೇ ರಕ್ತ ನಿಲ್ಲುತ್ತದೆ.
ದಿನ ನಿತ್ಯ ಬೆಟ್ಟದ ನೆಲ್ಲಿಕಾಯಿ ಸೇವಿಸಿದರೂ ಮೂಗಿನಿಂದ ರಕ್ತ ಬರುವುದಿಲ್ಲ. ಅಷ್ಟೇ ಅಲ್ಲದೆ 2 ಅಂಜೂರದ ಹಣ್ಣನ್ನು ರಾತ್ರಿ ನೀರಲ್ಲಿ ನೆನಸಿ ಬೆಳಗ್ಗೆ ಸೇವಿಸಿದರೆ ಪ್ರಯೋಜನವಾಗುತ್ತದೆ.
ನಿಮಗೆ ಮೂಗಿನಿಂದ ರಕ್ತ ಬರುತ್ತಿದ್ದರೆ ಈರುಳ್ಳಿ ರಸವನ್ನು ಹತ್ತಿಯಲ್ಲಿ ಅದ್ದಿ ಮೂಸಿದರೆ ರಕ್ತ ನಿಲ್ಲುತ್ತದೆ. ಹಾಗು ಮೂಗು ಹಾಗೂ ಹಣೆ ಮೇಲೆ ಶ್ರೀಗಂಧದ ಪುಡಿ ಮತ್ತು ರೋಸ್ ವಾಟರ್ ಸೇರಿಸಿ ಕಲಸಿ ಮಾಡಿದ ಪೇಸ್ಟ್ ಅನ್ನು ಪ್ಯಾಕ್ ಮಾಡಿದರೆ ರಕ್ತ ಬರುವುದು ನಿಲ್ಲುತ್ತದೆ .
ನಿಯಮಿತವಾಗಿ ಗುಲ್ಕನ್ ಸೇವಿಸುವುದರಿಂದ ದೇಹದಲ್ಲಿ ಉಸಂತೆಯನ್ನು ಕಡಿಮೆ ಮಾಡಿ ಮೂಗಿನಲ್ಲಿ ರಕ್ತ ಬರುವುದನ್ನು ತಡೆಯುತ್ತದೆ. ಕುರಿಯ ಹಾಲನ್ನು ಪ್ರತಿದಿನ ಕುಡಿಯುವುದರಿಂದ ಕೂಡ ಮೂಗಿನಿಂದ ರಕ್ತ ಬರುವುದನ್ನು ತಡೆಯಬಹುದು.