ನಾವು ಭಗೀರಥನ ಬಗ್ಗೆ ಕೇಳಿದ್ದೇ ಓದಿದ್ದೇವೆ. ಆದ್ರೆ ಮಂಡ್ಯದಲ್ಲಿ ಆಧುನಿಕ ಭಗೀರಥರೊಬ್ಬರು ಇದ್ದಾರೆ. ಅವರು ಪರಿಸರಕ್ಕಾಗಿ ನಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದಾರೆ. ಹಾಗಾದರೆ ಯಾರು ಆ ಆಧುನಿಕ ಭಗೀರಥ? ಪರಿಸರದ ಬಗ್ಗೆ ಆತನಿಗಿರುವ ಕಾಳಜಿ ಎಂಥದ್ದು? ಇಲ್ಲಿದೆ ವಿವರ.
ಈ ಮಾಡರ್ನ್ ಭಗೀರಥ ಪರಿಸರ ಸಂರಕ್ಷಣೆ ಹಾಗೂ ವನ್ಯ ಜೀವಿಗಳ ಪೋಷಣೆಗೆ ಇವರು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಈ ಪರಿಸರ ಪ್ರೇಮಿಯ ಹೆಸರು ಕಲ್ಮನೆ ಕಾಮೇಗೌಡ. ಮೂಲತ ಮಂಡ್ಯದ ಮಳವಳ್ಳಿ ತಾಲೂಕಿನ ದಾನದೊಡ್ಡಿ ಗ್ರಾಮದವರು. ಕಾಡಿನಲ್ಲಿ ಕುರಿ ಮೇಯಿಸೋದೇ ಇವರ ಕಾಯಕ. ಹುಟ್ಟಿದಾಗಿನಿಂದಲೂ ಪರಿಸರದೊಂದಿಗೆ ತುಂಬಾ ಒಟನಾಡವಿಟ್ಟುಕೊಂಡಿರುವ ಕಲ್ಮನೆ ಪರಿಸರಕ್ಕಾಗಿ ಜೀವನವಿಡೀ ದುಡಿದ ಹಣವನ್ನೇ ಖರ್ಚು ಮಾಡಿದ್ದಾರೆ. ಬೆಟ್ಟದ ತಪ್ಪಲಿನಲ್ಲಿ ನಾಲ್ಕು ಕೆರೆಗಳನ್ನು ನಿರ್ಮಿಸಿರುವ ಇವರು ವನ್ಯ ಜೀವಿಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಜೊತೆಗೆ ಜಲ ಸಂರಕ್ಷಣೆಯನ್ನು ಮಾಡುತ್ತಿದ್ದಾರೆ.
ಇದಷ್ಟೆ ಅಲ್ಲ, ತಾನು ಕುರಿ ಕಾಯುತ್ತಿದ್ದ ಕುಂದೂರು ಬೆಟ್ಟ ಸದಾ ಹಸಿರಾಗಿರಬೇಕೆಂದು ಬೆಟ್ಟ ಸುತ್ತ 2 ಸಾವಿರಕ್ಕೂ ಅಧಿಕ ಗಿಡ ನೆಟ್ಟು ಬೆಳೆಸಿದ್ದಾರೆ. ತಾನು ನೆಟ್ಟ ಆ ಸಸಿಗಳು ಇಂದು ಮರವಾಗಿರುವುದನ್ನು ಕಂಡು ಆನಂದದಿಂದ ಸದಾ ಕಾಡಲ್ಲಿ ಸುತ್ತಾಡುತ್ತಾರೆ. ಜೊತೆಗೆ ಈತ ತನ್ನ ತಿಳುವಳಿಕೆಗೆ ಬಂದ ಕೆಲವು ಉತ್ತಮ ಸಂದೇಶ ಮತ್ತು ಪರಿಸರ ಕಾಳಜಿ ಸಂದೇಶಗಳನ್ನು ಬೆಟ್ಟದ ಬಂಡೆಯ ಮೇಲೆ ಬಣ್ಣದಿಂದ ಬರೆಸೋ ಮೂಲಕ ಜನರಲ್ಲಿ ಪರಿಸರ ಕಳಕಳಿ ಮೂಡಿಸುತ್ತಿದ್ದಾರೆ.
ಒಟ್ಟಾರೆ ಬರೀ ಸ್ವಾರ್ಥವೇ ತುಂಬಿರುವ ಈ ಸಮಾಜದಲ್ಲಿ ಪರಿಸರಕ್ಕಾಗಿ ತಮ್ಮ ಬದುಕನ್ನು ಮುಡಿಪಿಟ್ಟಿರುವ ಈ ಆಧುನಿಕ ಭಗೀರಥನಿಗೆ ನಾವೆಲ್ಲರು ಹ್ಯಾಟ್ಸಪ್ ಹೇಳಲೇಬೇಕು. ಸರ್ಕಾರ ಕೂಡ ಇಂಥವರನ್ನು ಗುರುತಿಸಿ ಇವರ ನಿಸ್ವಾರ್ಥ ಸೇವೆಗೆ ನಮ್ಮದೊಂದು ಸಲಾಂ. ಕೃಪೆ: ಸುವರ್ಣ