ಹೌದು ಇತ್ತೀಚಿನ ದಿನಗಳಲ್ಲಿ ನಾವು ಸೇವಿಸುವ ಆಹಾರ ಪದ್ಧತಿ, ದುಶ್ಚಟಗಳು ಇನ್ನು ಮುಂತಾದ ಕಾರಣಗಳನ್ನು ನಮ್ಮ ದೇಹದ ಒಳಗಡೆ ಇರುವ ಅಂಗಗಳು ಅನಾರೋಗ್ಯಕ್ಕೆ ತುತ್ತಾಗುತ್ತಿವೆ. ಅದೇ ರೀತಿ ಲಿವರ್ ಕೂಡ ಅನಾರೋಗ್ಯಕ್ಕೆ ತುತ್ತಾಗುತ್ತಿದೆ. ಆದ್ದರಿಂದ ಇದನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಅತ್ಯಂತ ಪ್ರಮುಖ ಜವಾಬ್ದಾರಿಯಾಗಿದೆ. ಆದ್ದರಿಂದ ವಿಷಕಾರಿ ಅಂಶಗಳಿಂದ ನಿಯಂತ್ರಿಸಿ ನಿಮ್ಮ ಲಿವರ್ ಅನ್ನು ಆರೋಗ್ಯವಾಗಿಡಲು ಇಲ್ಲಿದೆ ನೋಡಿ ಸುಲಭ ವಿಧಾನ.
ಪ್ರತಿದಿನ ಬೆಳಗ್ಗೆ ಸ್ಟ್ರಾಬೆರಿ ರಸ ತೆಗೆದು ಅದಕ್ಕೆ ನೀರು, ಐಸ್ ಸೇರಿಸಿ ಮುಂಜಾನೆ ಕುಡಿಯಿರಿ ಇದರಿಂದ ಲಿವರ ಸ್ವಚ್ಛ ಆಗಲು ಸಹಕಾರಿಯಾಗಿರುತ್ತದೆ. ಅಷ್ಟೇ ಅಲ್ಲದೆ ದೇಹಕ್ಕೂ ಹೆಚ್ಚು ಆರೋಗ್ಯಕಾರಿ ಅಂಶಗಳನ್ನು ನೀಡುವಂತ ಸೇಬು ಹಣ್ಣಿನ ರಸ ಮತ್ತು ಅಡುಗೆಗೆ ಬಳಸುವ ಚಕ್ಕೆಯನ್ನು ನೀರಿನಲ್ಲಿ ಒಂದೆರಡು ಗಂಟೆಗಳ ಕಾಲ ಹಾಕಿಡಿ. ನಂತರ ಅದಕ್ಕೆ ಸ್ವಲ್ಪ ಐಸ್ ಹಾಕಿ ಕುಡಿಯುವುದರಿಂದ ಲಿವರ್ ಸ್ವಚ್ಛಗೊಳ್ಳುವುದರ ಜೊತೆಗೆ ಹೆಚ್ಚಿನ ಎನರ್ಜಿಯನ್ನು ಕೂಡ ಪಡೆಯಬಹುದಾಗಿದೆ.
ಮತ್ತೊಂದು ಸುಲಭ ಮನೆಮದ್ದು ಲಿವರನ್ನು ಸ್ವಚ್ಛ ಮಾಡಬಲ್ಲದು ಅದುವೇ ಎಳೆ ಸೌತೆಕಾಯಿ. ಹೌದು ಎಳೆಸೌತೆಕಾಯಿ ರಸಕ್ಕೆ ನಿಂಬೆರಸ, ಪುದೀನಾ, ಐಸ್ ಹಾಗೂ ನೀರು ಸೇರಿಸಿ ಪ್ರತಿದಿನ ಸೇವಿಸಿದಲ್ಲಿ ಒಳ್ಳೆಯ ಫಲಿತಾಂಶವಿದೆ ಹಾಗು ಹೊಟ್ಟೆಯನ್ನು ಕರಗಿಸಬಹುದು.
ಕಲ್ಲಂಗಡಿ ದೇಹಕ್ಕೆ ತಂಪು ನೀಡುವುದರ ಜತೆಗೆ ದೇಹದ ತೂಕ ಇಳಿಸಲು ಸಹಕಾರಿ, ಹೌದು ಕಲ್ಲಂಗಡಿ ಹಣ್ಣಿನ ರಸ, ಪುದೀನಾ, ಶುಂಠಿ ಹಾಗೂ ನೀರು ಮಿಶ್ರಣ ಮಾಡಿ ಸೇವನೆ ಮಾಡುವುದು ಉತ್ತಮ ಇದು ತೂಕ ಇಳಿಸಲೂ ಕೂಡ ಉಪಯೋಗಕಾರಿ.