WhatsApp Group Join Now

ಹೌದು ನಾವು ಸಾಮಾನ್ಯವಾಗಿ ಕೇಸರಿ ಬಳಕೆಯ ಬಗ್ಗೆ ತಿಳಿದಿರುತ್ತೇವೆ. ಆದರೆ ಕೇಸರಿ ಬಳಕೆಯಿಂದ ಆಗುವ ಆರೋಗ್ಯಕಾರಿ ಲಾಭಗಳನ್ನು ತಿಳಿದರೆ ನೀವು ಖಂಡಿತ ಆಶ್ಚರ್ಯ ಪಡುತ್ತೀರಾ. ಅದೇನು ಲಾಭಗಳೇನು ತಿಳಿಯೋಣ ಬನ್ನಿ.

ನಾವು ಕೇಸರಿಯನ್ನು ಬಳಸುವುದರಿಂದ ನಮ್ಮ ದೇಹದಲ್ಲಿನ ರಕ್ತವನ್ನು ಶುದ್ದಿ ಮಾಡುವುದಲ್ಲದೆ, ದೇಹದ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ ಹಾಗೂ ಹೊಟ್ಟೆಯಲ್ಲಿ ಹುಣ್ಣಾಗಿದ್ದರೆ ವಾಸಿ ಮಾಡುತ್ತದೆ.

ಪ್ರತಿನಿತ್ಯ ಕೇಸರಿಯ ಬಳಕೆ ಮಾಡುವವರಿಗೆ ಕಣ್ಣಿನಲ್ಲಿ ಪೊರೆ ಬರುವುದಿಲ್ಲಾ ಹಾಗೂ ಸೂರ್ಯನಿಂದ ಬರುವ ಹಾನಿಕಾರಕ ಕಿರಣಗಳಿಂದ ಕಣ್ಣುಗಳನ್ನು ರಕ್ಷಣೆ ಮಾಡುತ್ತದೆ.

ಕೇಸರಿಯಲ್ಲಿ ಕಬ್ಬಿಣದ ಅಂಶ ಸಮೃದ್ಧವಾಗಿರುವುದರಿಂದ ದೇಹದಲ್ಲಿನ ಹಿಮೋಗ್ಲೋಬಿನ್ ಸಂಖ್ಯೆ ಹೆಚ್ಚಿಸುತ್ತದೆ ಮತ್ತು ರಕ್ತಹೀನತೆ ಸಮಸ್ಯೆ ಬಾರದಂತೆ ತಡೆಯುತ್ತದೆ.

ಮಕ್ಕಳಿಗೆ ಗಾಯಗಳಾದಾಗ ಕೇಸರಿಯ ಜೊತೆ ಅರಿಶಿನ ಸೇರಿಸಿ ಪೇಸ್ಟ್ ಮಾಡಿ ಗಾಯಕ್ಕೆ ಹಚ್ಚಿದರೆ ಅಥವಾ ಎಲ್ಲಾ ವರ್ಗದವರಿಗೂ ತುರಿಕೆ ಅಂತಹ ಸಮಸ್ಯೆ ಉಂಟಾದಾಗ ಈ ಪೇಸ್ಟ್ ಹಚ್ಚುವುದರಿಂದ ಬೇಗ ವಾಸಿಯಾಗುತ್ತದೆ.

ಮುಖದ ಚರ್ಮ ವಯಸ್ಸಾದಂತೆ ಕಾಣದೆ ಇರಲು ಹಾಗೂ ಚರ್ಮದ ಕಾಂತಿಯನ್ನು ಹೆಚ್ಚಿಸಲು ಒಂದು ಚಮಚ ಜೇನು ತುಪ್ಪದಲ್ಲಿ ಸ್ವಲ್ಪ ಕೇಸರಿಯನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ ನಂತರ ಈ ಮಿಶ್ರಣವನ್ನು ನಿಮ್ಮ ಮುಖದ ಚರ್ಮಕ್ಕೆ ಹಚ್ಚಿಕೊಳ್ಳಿ.

ಮುಖದಲ್ಲಿ ಮೊಡವೆ ಸಮಸ್ಯೆಗಳು ಕಾಡುತ್ತಿದ್ದವರು ರಾತ್ರಿ ಹಾಲಿನಲ್ಲಿ ಸ್ವಲ್ಪ ಕೇಸರಿಯನ್ನು ಬೆರೆಸಿ ಇಟ್ಟುಬಿಡಿ ನಂತರ ಬೆಳಗ್ಗೆ ನಯವಾದ ಮಿಶ್ರಣ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ.

ಹೆಣ್ಣುಮಕ್ಕಳಿಗೆ ಋತುಚಕ್ರದ ಸಮಯದಲ್ಲಿ ಉಂಟಾಗಬಹುದಾದ ಗರ್ಭಾಶಯ ಮತ್ತು ಕಾಲಿನ ಸೆಳೆತವನ್ನು ಕೇಸರಿ ಕಡಿಮೆ ಮಾಡುತ್ತದೆ.

ಕೇಸರಿಯನ್ನು ಪ್ರತಿನಿತ್ಯ ಬಳಕೆ ಮಾಡುವುದರಿಂದ ಕ್ಯಾನ್ಸರ್ ರೋಗ ಬರದಂತೆ ತಡೆಯುವ ರೋಗನಿರೋಧಕ ಅಂಶವು ಮತ್ತು ಆಂಟಿ ಆಕ್ಸಿಡೆಂಟ್ ನಂತಹ ಲಕ್ಷಣಗಳು ಇದರಲ್ಲಿ ಇದೆ ಎಂದು ಕೆಲವು ಆಧುನಿಕ ಅಧ್ಯಯನಗಳು ಹೇಳಿವೆ.

WhatsApp Group Join Now

Leave a Reply

Your email address will not be published. Required fields are marked *