WhatsApp Group Join Now

ಕೆಲವರು ಎಷ್ಟೇ ಪ್ರಯತ್ನಿಸಿದರೂ ಗರ್ಭ ಧರಿಸುತ್ತಿಲ್ಲ ಎಂಬ ಸಮಸ್ಯೆಗೆ ನೀವು ಬಹಳ ಉತ್ತರ ಕಾಣಲು ಬಹಳ ಹರಸಾಹಸ ಮಾಡುವಿರಿ. ನೀವು ಎಷ್ಟೋ ಬಾರೀ ತಮ್ಮಲ್ಲೇ ಏನೋಲೋಪ ಇದೆ ಎಂದು ನೋವನುಭವಿಸುತ್ತಿರುತ್ತಾರೆ.

ಗರ್ಭ ಧರಿಸದೆ ಇರಲು ಹಲವಾರು ಕಾರಣಗಳೇನಿರಬಹುದು? ನೀವು ಹಲವು ಬಾರೀ ಯಾಕೆ ಗರ್ಭಿಣಿಯಾಗುತ್ತಿಲ್ಲ? ಎಂಬುದನ್ನು ಈಗ ತಿಳಿದುಕೊಳ್ಳೋಣ. ಗರ್ಭ ಧರಿಸದೆ ಇರುವುದರ ಹಿಂದೆ ಪುರುಷರು, ಮಹಿಳೆಯರು ಇಬ್ಬರೂ ಕಾರಣರಾಗಬಹುದು.

ಸಾಮಾನ್ಯವಾಗಿ ಮಕ್ಕಳಾಗದಿರಲು ಕಾರಣ ಯಾರು? ಎಂಬ ಪ್ರಶ್ನೆಗಿಂತಯಾರಲ್ಲಿ ಹೆಚ್ಚಾಗಿ ಈ ಸಮಸ್ಯೆ ಕಂಡು ಬರುತ್ತದೆ ಎಂದು ತಿಳಿದುಕೊಳ್ಳಿ. ಮಹಿಳೆಯರು ಶೇ.33, ಪುರುಷರು ಶೇ.33, ಇತರೆ ಕಾರಣಗಳು ಶೇ.34

ಗರ್ಭ ಧರಿಸುವ ಹೆಚ್ಚಿನ ಅವಕಾಶಗಳು ಏನ್ನು ಎಂದು ತಿಳಿದುಕೊಳ್ಳಿ: ಮದುವೆಯಾದ ಐದಾರು ತಿಂಗಳಲ್ಲಿ ಗರ್ಭ ಧರಿಸುವ ಅವಕಾಶ ಹೆಚ್ಚಾಗಿ ಶೇ.50 ವರ್ಷದೊಳಗಾದರೆ ಶೇ.75, ಎರಡು ವರ್ಷಗಳ ಒಳಗೆ ಶೇ.85 ರಿಂದ 90 ಇರುತ್ತದೆ.

ಸಾಮಾನ್ಯವಾಗಿ ಪುರುಷರಲ್ಲಿ ಸಂತಾನಹೀನತೆಗೆ ಕಾರಣಗಳು ಯಾವುವು: ಧೂಮಪಾನ, ಮದ್ಯಪಾನ, ಹೊಂಡಗಳಿಂದ ಕೂಡಿದ ರಸ್ತೆಯಲ್ಲಿ ಹೆಚ್ಚು ವಾಹನ ಸವಾರಿ, ವೃಷಣಗಳಿಗೆ ಉಷ್ಣತೆ ಹೆಚ್ಚಾಗುವ ಉದ್ಯಮಗಳಲ್ಲಿ ಕೆಲಸ ಮಾಡುವುದು.

ವೃಷಣಗಳಿಗೆ ಶಸ್ತ್ರಚಿಕಿತ್ಸೆ, ಹರ್ನಿಯಾ ಚಿಕಿತ್ಸೆ ಆಗಿರುವುದು, ಲೈಂಗಿಕ ಕಾಯಿಲೆಗಳು ಇರುವುದು ಇವೆಲ್ಲವೂ ಪ್ರಮುಖ ಕಾರಣಗಳು.

ಸಾಮಾನ್ಯವಾಗಿ ಮಹಿಳೆಯರಲ್ಲಿ ಕಂಡು ಬರುವ ಕಾರಣಗಳು: ವಯಸ್ಸು 18-36 ವಯಸ್ಸಿನಲ್ಲಿಇರುವವರಿಗೆ ಗರ್ಭ ಧರಿಸಲು ಸೂಕ್ತ ವಯಸ್ಸು. 18ರೊಳಗೆ ಮತ್ತು 34 ಮೀರಿದರಿಗೆ ಅಂಡಾಶಯ ಸಮಸ್ಯೆಗಳು ಹೆಚ್ಚು. ಫೆಲೋಪಿಯನ್ ನಾಳಗಳಲ್ಲಿ ಅಡ್ಡಿ ಇದ್ದರೂ ಗರ್ಭ ಧರಿಸಲು ಸಾಧ್ಯವಿಲ್ಲ. ನಿಯಮಿತವಲ್ಲದ ಮುಟ್ಟ, ಪೆಲ್ವಿಕ್ ಸೋಂಕು, ಟಿ.ಬಿ (ಕ್ಷಯ) ದಂತಹ ಕಾಯಿಲೆಗಳು, ಧೂಮಪಾನ, ಮದ್ಯಪಾನ ಸೇವನೆ, ಅಂಡಾಶಯ ಸಮಸ್ಯೆಗಳು.

ಮೇಲಿನ ಕೆಲವು ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ಪರಿಹರಿಸಲಾಗದ್ದಕ್ಕೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆದರೆ ಪ್ರತಿಫಲ ಸಿಗಬಹುದು. ಏನಂತೀರಾ?

WhatsApp Group Join Now

Leave a Reply

Your email address will not be published. Required fields are marked *