ಶ್ರೀ ಮಂಜುನಾಥನು ಕಲಿಯುಗದಲ್ಲಿ ನೆಲೆಸಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಯಾರಿಗೆ ಗೊತ್ತಿಲ್ಲ ಹೇಳಿ ಈ ಪುಣ್ಯ ಸ್ಥಳಕ್ಕೆ ಬಂದು ನದಿಯಲ್ಲಿ ಮಿಂದು ಅಮ್ಮನವರ ಹಾಗು ಮಂಜುನಾಥನ ದರ್ಶನ ಪಡೆದವರೇ ಪುಣ್ಯವಂತರು, ಈ ಪುಣ್ಯ ಕ್ಷೇತ್ರದಲ್ಲಿ ಇರುವ ಇನ್ನ ದಾಸೋಹ ಸಹ ಅಷ್ಟೇ ಪ್ರಸಿದ್ದಿ, ಈ ದೇಗುಲಕ್ಕೆ ಬಂದವರು ಊಟ ಮಾಡದೆ ಹಿಂದಿರುಗಿ ಬರುವುದಿಲ್ಲ, ಪುಣ್ಯ ಕ್ಷೇತ್ರದಲ್ಲಿ ನಡೆಯುವ ಈ ಪುಣ್ಯ ಕಾರ್ಯದ ಬಗ್ಗೆ ಕೊಂಚ ಮಾಹಿತಿ ತಿಳಿಸುವ ಪ್ರಯತ್ನ ನಮ್ಮದು.
ಅಂಕಿ ಅಂಶ ನೋಡುವುದಾದರೆ ಹೆಗಡೆ ಅವರ ತಂದೆ 1955 ರಲ್ಲಿ ಅಣ್ಣ ಪೂರ್ಣ ಭೋಜನ ಶಾಲೆ ಕಟ್ಟುವ ನಿರ್ದಾರ ಮಾಡಿದರು ಎನ್ನಲಾಗುತ್ತದೆ. ವಿಶಾಲವಾದ ಭೋಜನ ಶಾಲೆಯಲ್ಲಿ ಒಂದು ದಿನಕ್ಕೆ 25 ರಿಂದ 50 ಸಾವಿರ ಜನರು ಅಣ್ಣ ಪ್ರಸಾದ ಸ್ವೀಕರಿಸುತ್ತಾರೆ, ದೀಪೋತ್ಸವ ಸಂಧರ್ಭದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಇಲ್ಲಿ ಅಡುಗೆ ಮಾಡಲಾಗುತ್ತದೆ.
ಸ್ವಚ್ಛತೆಗೆ ಆಧ್ಯತೆ ಕೊಡುವ ಈ ಪುಣ್ಯ ಕ್ಷೇತ್ರ ಅಡುಗೆಗೆ ಬಳಸುವ ಪ್ರತಿಯೊಂದು ಸಾಮಗ್ರಿಗಳು ಅತ್ಯಾಧುನಿಕ ಯಂತ್ರ ಬಳಸಿ ಅಡುಗೆ ತಯಾರಾಗುತ್ತದೆ.
ದಿನಕ್ಕೆ 5000 ಕೆಜಿ ಯಷ್ಟು ಅಕ್ಕಿ ಬಳಸಿ ಅನ್ನ ಮಾಡುತ್ತಾರೆ ಇನ್ನು 3500 ಕೆಜಿ ತರಕಾರಿಗಳನ್ನು ಸಾಂಬಾರು ಮಾಡಲು ಬಳಸುತ್ತಾರೆ, ದೀಪೋತ್ಸವದ ಸಂದರ್ಭದಲ್ಲಿ ದಿನಕ್ಕೆ 8500 ಕೆಜಿ ಅಕ್ಕಿಯಿಂದ ಅಡುಗೆ ನಡೆಯುತ್ತದೆ. ಹಾಗು ಒಂದು ದಿನಕ್ಕೆ 1200 ತೆಂಗಿನ ಕಾಯಿ ಬಳಸಲಾಗುತ್ತದೆ, ಇಷ್ಟೊಂದು ಪ್ರಮಾಣದ ಕಾಯಿ ಹಾಗು ತರಕಾರಿಯನ್ನ ದೇವಸ್ಥಾನದ ಆಡಳಿತದಲ್ಲಿರುವ ತೋಟದಲ್ಲಿ ಬೆಳೆಯಲಾಗುತ್ತದೆ.