ಪ್ರತಿಯೊಬ್ಬ ತಂದೆ ತಾಯಿಯಿಗಳಿಗೆ ತಮ್ಮ ಮಕ್ಕಳು ಶಕ್ತಿಶಾಲಿಯಾಗಿರಬೇಕು ಮತ್ತು ಒಳ್ಳೆಯ ಬುದ್ದಿವಂತರಾಗಬೇಕು ಎಂಬ ಬಯಕೆ ಇದ್ದೇಇರುತ್ತದೆ. ಆದರೆ ಅದಕ್ಕೆ ತಕ್ಕನಾಗಿ ಮಕ್ಕಳಿಗೆ ಆಹಾರಗಳನ್ನು ನೀಡುವ ಅವಶ್ಯಕತೆ ಇರುತ್ತದೆ. ಆದರೆ ಏನೇನು ಆಹಾರ ನೀಡಬೇಕು ಎಂಬುದು ಗೊತ್ತಿರುವುದಿಲ್ಲ. ಆದ್ದರಿಂದ ಈ ಹಣ್ಣುಗಳನ್ನು ತಿನ್ನಿಸಿ ನೋಡಿ.
ಮಕ್ಕಳಿಗೆ ಈ ಹಣ್ಣುಗಳನ್ನು ಸೇವಿಸಲು ಕೊಡುವುದರಿಂದ ದೇಹದ ಅರೋಗ್ಯ ಉತ್ತಮವಾಗಿರುತ್ತದೆ, ಅಷ್ಟೇ ಅಲ್ಲದೆ ಮಕ್ಕಳ ಮೆದುಳಿನ ಅರೋಗ್ಯ ಕೂಡ ಒಳ್ಳೆಯ ರೀತಿಯಲ್ಲಿ ವೃದ್ಧಿಯಾಗುವುದು. ಆರೋಗ್ಯವನ್ನು ವೃದ್ಧಿಸುವಂತ ಹಣ್ಣುಗಳು ಯಾವುವು ಅನ್ನೋದನ್ನ ಮುಂದೆ ನೋಡಿ. ಒಣ ಹಣ್ಣುಗಳು ಅಥವಾ ಡ್ರೇ ಫುಟ್ಸ್ ಹೌದು ಇವುಗಳನ್ನು ಸೇವಿಸುವುದರಿಂದ ಇದರಲ್ಲಿ ಹಲವು ರೀತಿಯ ಆರೋಗ್ಯಕಾರಿ ಅಂಶಗಳಿವೆ ದ್ರಾಕ್ಷಿ ಗೋಡಂಬಿ, ಬಾದಾಮಿ ಪಿಸ್ತಾ ಇತ್ಯಾದಿಗಳು ಆರೋಗ್ಯಕ್ಕೆ ಅತ್ಯಂತ ಪ್ರಮುಖವಾಗಿವೆ.
ಬಾದಾಮಿ ಪ್ರತಿಯೊಬ್ಬರ ಆರೋಗ್ಯಕ್ಕೆ ಉತ್ತಮವಾದ ಆಹಾರ. ಪ್ರತಿದಿನ ರಾತ್ರಿ ಎರಡು ಬಾದಾಮಿಯನ್ನು ನೀರಿನಲ್ಲಿ ನೆನೆಸಿಟ್ಟು, ಬೆಳಗ್ಗೆ ಮಕ್ಕಳಿಗೆ ನೀಡಿ. ಇದರಿಂದ ಮಕ್ಕಳಿಗೆ ಅಗತ್ಯ ಎನರ್ಜಿ ಸಿಗುತ್ತದೆ. ಜೊತೆಗೆ ಅವರ ಮೆದುಳು ಚುರುಕಾಗುತ್ತದೆ. ಇದಲ್ಲದೆ ಬಾದಾಮಿಯನ್ನು ಪುಡಿ ಮಾಡಿ ಹಾಲಿನಲ್ಲಿ ಬೆರೆಸಿಯೂ ನೀಡಬಹುದು. ಬಾದಾಮಿ ಎಣ್ಣೆಯಿಂದ ಮಕ್ಕಳಿಗೆ ಮಸಾಜ್ ಮಾಡಿದರೆ ಮೂಳೆ ಸ್ಟ್ರಾಂಗ್ ಆಗಿ ಬೆಳೆಯುತ್ತವೆ.
ಸಾಮಾನ್ಯವಾಗಿ ಗೋಡಂಬಿಯನ್ನು ತಿನ್ನಲು ಹಲವಾರು ಅಸೆ ಪಡುತ್ತಾರೆ. ಇದರಲ್ಲಿ ಅಡಗಿದೆ ಅಪಾರ ಆರೋಗ್ಯಕಾರಿ ಅಂಶಗಳು ಗೋಡಂಬಿಯಲ್ಲಿ ವಿಟಮಿನ್ ಈ ಹೆಚ್ಚಿನ ಪ್ರಮಾಣದಲ್ಲಿದೆ. ಗೋಡಂಬಿ ತಿನ್ನಿಸಿದರೆ ಮಕ್ಕಳ ತ್ವಚೆಯ ಹೊಳಪು ಹೆಚ್ಚುತ್ತದೆ. ಜೊತೆಗೆ ಮಗು ಸ್ಟ್ರಾಂಗ್ ಆಗುತ್ತದೆ.
ಒಣ ದ್ರಾಕ್ಷಿ ಸೇವನೆಯಿಂದ ಒಳ್ಳೆಯ ಆರೋಗ್ಯವನ್ನು ಪಡೆಯಬಹುದು, ಮಕ್ಕಳ ರಕ್ತ ಸಂಚಲನ ಸುಗಮವಾಗುತ್ತದೆ. ಕಣ್ಣು ಮತ್ತು ಹಲ್ಲಿನ ಆರೋಗ್ಯಕ್ಕೂ ಬೆಸ್ಟ್.
ಪಿಸ್ತಾ ಸೇವನೆ ಆರೋಗ್ಯಕ್ಕೆ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತದೆ. ಇದರಲ್ಲಿ ವಿಟಮಿನ್ ಈ ಹೆಚ್ಚಿನ ಪ್ರಮಾಣದಲ್ಲಿದೆ ಇದೇ ಕಾರಣಕ್ಕೆ ಪಿಸ್ತಾ ಮಕ್ಕಳ ಆರೋಗ್ಯಕ್ಕೆ ಬೇಕು. ಸ್ಕಿನ್ ಕ್ಯಾನ್ಸರ್ ಬಾರದಂತೆ ನೋಡಿಕೊಳ್ಳುತ್ತದೆ. ಮಕ್ಕಳ ಆರೋಗ್ಯದ ಭವಿಷ್ಯಕ್ಕಾಗಿ ಈ ಒಣ ಹಣ್ಣುಗಳು ಹೆಚ್ಚು ಸಹಕಾರಿಯಾಗಿವೆ. ಆದ್ದರಿಂದ ಈ ಹಣ್ಣುಗಳನ್ನು ಮಕ್ಕಳಿಗೆ ತಿನ್ನಿಸುವುದರಿಂದ ಸ್ಟ್ರಾಂಗ್ ಆಗಿ ಮತ್ತು ಆರೋಗ್ಯವಾಗಿ ಬೆಳೆಯುತ್ತಾರೆ.