ಬಾರ್ಲಿ ನೀರು ಸೇವನೆಯಿಂದ ಸುಲಭವಾಗಿ ನಿಮಗೆ ಬೇಡವಾದ ಕೊಲೆಸ್ಟ್ರಾಲ್ ಹಾಗೂ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.
ಬಾರ್ಲಿಯ ಪ್ರಯೋಜನಗಳು: ಬಾರ್ಲಿಯಲ್ಲಿರುವ ಬೀಟಾ ಗ್ಲುಕನ್ ಅಂಶದಿಂದ ದೇಹದಲ್ಲಿರುವ ಬೇಡದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಬಾರ್ಲಿಯಲ್ಲಿರುವ ಫೈಬರ್ ಅಂಶಗಳು ಕೊಲೆಸ್ಟ್ರಾಲ್ ಮಟ್ಟವನ್ನು ಪರಿಶೀಲನೆ ಮಾಡಿ ಉತ್ತಮ ಆರೋಗ್ಯ ನೀಡುತ್ತದೆ. ಪ್ರತಿನಿತ್ಯ ಬಾರ್ಲಿ ನೀರಿನ ಸೇವನೆ ಮಾಡುವುದರಿಂದ ದೇಹದಲ್ಲಿರುವ ಟಾಕ್ಸಿನ್ಗಳನ್ನು ದೇಹದಿಂದ ಮೂತ್ರದ ಮೂಲಕ ಹೊರಹಾಕುತ್ತದೆ. ಮೂತ್ರಪಿಂಡದ ಸಮಸ್ಯೆಗಳನ್ನು ನಿವಾರಿಸುತ್ತದೆ ಹಾಗೂ ದೇಹದ ಆರೋಗ್ಯವನ್ನು ಕಾಪಾಡುತ್ತದೆ.
ಬಾರ್ಲಿ ನೀರು ತಯಾರಿಸುವ ವಿಧಾನ: ಮೊದಲು ಮೂರು ಲೋಟ ನೀರಿಗೆ ಒಂದು ಲೋಟ ಬಾರ್ಲಿ ಧಾನ್ಯ ಪಾತ್ರೆಯಲ್ಲಿ ಹಾಕಿ ಕುದಿಸಬೇಕು. ಕುದಿಸಿದ ನೀರನ್ನು ಧಾನ್ಯದಿಂದ ಬೇರೆ ಮಾಡಿ, ಕುದಿಸಿದ ನೀರನ್ನು ತಣ್ಣಗಾಗಲು ಬಿಡಿ. ಬರೀ ಬಾರ್ಲಿ ನೀರನ್ನು ನೇರವಾಗಿ ಸೇವಿಸಲು ಆಗದಿದ್ದರೆ, ಅದಕ್ಕೆ ಕಿತ್ತಳೆ, ಜೇನು ಅಥವಾ ನಿಂಬೆ ಹಣ್ಣಿನ ರಸವನ್ನು ಸೇರಿಸಿ ಕುಡಿಯಬಹುದು. ಹಾಗೆಯೇ ಬಾರ್ಲಿ ನೀರಿಗೆ ಸ್ವಲ್ಪ ದಾಲ್ಚಿನ್ನಿ ಅಥವಾ ಶುಂಠಿಯನ್ನು ಸ್ವಾಧಕ್ಕಾಗಿ ಬೆರಸಿ ಕುಡಿಯಬಹುದು. ನಿಮಗೆ ಸಿಹಿ ಬೇಕಾದರೆ ಬಾರ್ಲಿ ನೀರಿಗೆ ಸ್ವಲ್ಪ ಬ್ರೌನ್ ಶುಗರ್ನ್ನು ಸೇರಿಸಿ ಕುಡಿಯಬಹುದು. ಅದು ತೂಕ ಹೆಚ್ಚು ಮಾಡುವುದಿಲ್ಲ. ಬಾರ್ಲಿ ನೀರು ಹೆಚ್ಚು ಕಾಲ ಉಳಿಯಬೇಕು ಎಂದರೆ ಅದನ್ನು ಫ್ರಿಡ್ಜ್ ನಲ್ಲಿಟ್ಟು ಸಂಗ್ರಹಿಸಿ ಇಡಬಹುದು.
ಹೇಗೆ ತೂಕ ಕಡಿಮೆ ಮಾಡುತ್ತದೆ: ಬಾರ್ಲಿ ನೀರು ಉತ್ತಮ ಫೈಬರ್ ಸತ್ವವನ್ನು ಹೊಂದಿರುವುದರಿಂದ ಹೊಟ್ಟೆ ಭಾಗದಲ್ಲಿ ಇರುವ ಕೊಬ್ಬಿನ ಅಂಶವನ್ನು ಕಡಿಮೆ ಮಾಡುತ್ತದೆ. ದೀರ್ಘಕಾಲದ ತನಕ ಹಸಿವಾಗದ ರೀತಿ ಮಾಡಿ ಜಂಕ್ ಅಥವಾ ಕರಿದ ಆಹಾರಗಳಿಂದ ನಿಮ್ಮನ್ನು ದೂರವಿರುವಂತೆ ಮಾಡುತ್ತದೆ. ಫೈಬರ್ ಅಂಶವು ಜೀರ್ಣ ಶಕ್ತಿ ಹೆಚ್ಚಿಸುವುದರ ಜೊತೆಗೆ ಬಾರ್ಲಿ ನೀರನ್ನು ಕುಡಿದರೆ ಕ್ಯಾಲೋರಿ ಅಂಶ ಕಡಿಮೆಯಾಗಿ ಉತ್ತಮ ಆರೋಗ್ಯ ಸಿಗುತ್ತದೆ.
ಆರೋಗ್ಯಕರವಾಗಿ ತೂಕ ಕಡಿಮೆ ಮಾಡಿಕೊಳ್ಳಲು ನಿಮ್ಮ ದಿನನಿತ್ಯದ ವ್ಯಾಯಾಮ ಹಾಗೂ ಡಯಟ್ನೊಂದಿಗೆ ಬಾರ್ಲಿ ನೀರನ್ನು ಸೇವಿಸಲು ಆರಂಭಿಸಿ ಉತ್ತಮ ಆರೋಗ್ಯವನ್ನು ಹೊಂದಿ.