ನಾವು ಅನ್ನ ಮಾಡಿದಾಗ ಅದರಲ್ಲಿ ಬರುವ ಗಂಜಿ ನೀರನ್ನು ಬಿಸಾಡುತ್ತೇವೆ,ಆದರೆ ಅಂದಿನ ಕಾಲದಲ್ಲಿ ಈ ರೀತಿಯ ನೀರನ್ನು ಕುಡಿಯುತ್ತಿದ್ದರಂತೆ ಆದರೆ ಅವಾಗ ಅದರಿಂದಾಗುವ ಮಹತ್ವ ಗೊತ್ತಿರಿಲಿಲ್ಲ ಆದರೆ ಈಗ ಈ ಅಕ್ಕಿ ನೀರಿನಲ್ಲಿ ಹಲವಾರು ರೀತಿಯ ಲಾಭವಿದೆ ಎಂದು ತಿಳಿದು ಬಂದಿದೆ, ಅದೇನು ನೋಡೋಣ ಬನ್ನಿ.
ಅಕ್ಕಿ ನೀರಿನಲ್ಲಿ ಕೂದಲನ್ನು ತೊಳೆಯುವುದರಿಂದ ಕೂದಲು ಸದೃಢವಾಗುತ್ತಂತೆ ಹಾಗು ಕೂದಲಿನ ಗಂಟುಗಳು ಕೂಡ ಬಿಡಿಸಿಕೊಳ್ಳುತ್ತವೆಯಂತೆ, ತಜ್ಞರ ಪ್ರಕಾರ ಅಕ್ಕಿ ನೀರಿನಲ್ಲಿ ಐನೊಸಿತೊಲ್ ಎಂಬ ಅಂಶವಿದೆ. ಇದು ಕೂದಲು ಡ್ಯಾಮೇಜ್ ಆಗುವುದನ್ನು ತಡೆಯುವುದರ ಜೊತೆ ತಲೆ ಕೂದಲನ್ನು ಸದೃಢ ಮಾಡುತ್ತಂತೆ.
ಬಿಸಿಲು,ಆರ್ದ್ರತೆಯ ಕಾರಣ ಕೂದಲು ಡ್ರೈ ಆಗುತ್ತದೆ. ಕೂದಲಿಗೆ ಉತ್ತಮ ಪೋಷಣೆ ನೀಡಿ ಕೂದಲನ್ನು ಹೈಡ್ರೇಟ್ ಮಾಡಲು ಅಕ್ಕಿ ನೀರು ಸಹಕಾರಿಯಾಗಲಿದೆ.ಅಕ್ಕಿ ನೀರು ಶ್ಯಾಂಪುಗಳ ರೀತಿ ಕೇವಲ ಕೆಮಿಕಲ್ ಟ್ರೀಟ್ಮೆಂಟ್ ನೀಡದೇ ನೈಸರ್ಗಿಕವಾಗಿ ಹಾಗೂ ಆರೋಗ್ಯಕರ ರೀತಿಯಲ್ಲಿ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಕೂದಲು ಮತ್ತು ನೆತ್ತಿಯ ಮೇಲೆ ಅಕ್ಕಿ ನೀರನ್ನು ಹಾಕಿ 20 ನಿಮಿಷ ಹಾಗೆ ಬಿಡಿ,ತದನಂತರ ನೀವು ರೆಗ್ಯುಲರ್ ಆಗಿ ಪಾಲಿಸುವ ಹೇರ್ ವಾಶ್ ವಿಧಾನವನ್ನು ಪಾಲಿಸಿ.ಇದರಿಂದ ಕೂದಲು ಆರೋಗ್ಯಪೂರ್ಣವಾಗಿರುತ್ತದೆ ಮತ್ತು ಬಿಳಿ ಕೂದಲಿದ್ದರೆ ಕಪ್ಪಾಗುತ್ತದೆ.