ನಾವು ಸಾಮಾನ್ಯವಾಗಿ ಅಜ್ವೈನ್ ಅನ್ನು ಮನೆಯಲ್ಲಿ ತಿನ್ನಲಿಕ್ಕೆ ಬಳಸುತ್ತವೆ. ಯಾಕೆಂದರೆ ನಮಗೆ ಹೊಟ್ಟೆಯ ಸಮಸ್ಯೆ ಮತ್ತು ಅಜೀರ್ಣತೆಯಂತಹ ಸಮಸ್ಯೆ ಕಂಡು ಬಂದರೆ ಇದನ್ನು ಸಾಮಾನ್ಯವಾಗಿ ಬಳಸುತ್ತೇವೆ. ಆದರೆ ಈ ಸಮಸ್ಯೆಯನ್ನು ಹೊರತು ಪಡಿಸಿ ಇನ್ನು ಹಲವಾರು ಸಮಸ್ಯೆಗಳನ್ನು ಹೋಗಲಾಡಿಸುವ ಶಕ್ತಿ ಈ ಅಜ್ವೈನ್ ಗೆ ಇದೆ. ಹಾಗಾದರೆ ಯಾವ ಯಾವ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ ನೋಡೋಣ ಬನ್ನಿ.
ಮಂಡಿ ನೋವಿಗೆ ಮನೆಮದ್ದು: ಅಜ್ವೈನ್ ಮಂದಿ ನೋವಿಗೆ ಪ್ರಮುಖ ಮನೆಮದ್ದಾಗಿದೆ. ಆದ್ದರಿಂದ ಅಜ್ವೈನ್ ಅನ್ನು ಪೇಸ್ಟ್ ಮಾಡಿ ಮಂದಿಯಲ್ಲಿ ನೋವಿರುವ ಭಾಗಕ್ಕೆ ಹಚ್ಚಿದರೆ ನೋವು ಕಡಿಮೆಯಾಗುವುದು.
ಅಸಿಡಿಟಿ ಸಮಸ್ಯೆ ನಿವಾರಿಸುತ್ತದೆ: ನಮಗೆ ಸಾಮಾನ್ಯವಾಗಿ ಕಾಡುವ ಸಮಸ್ಯೆ ಅಸಿಡಿಟಿ, ಆದ್ದರಿಂದ ಪ್ರತಿನಿತ್ಯ ಡಯಟ್‌ನಲ್ಲಿ ಅಜ್ವೈನ್ ಸೇರಿಸಿ ತಿನ್ನುವುದರಿಂದ ಅಸಿಡಿಟಿ ಸಮಸ್ಯೆ ಕಡಿಮೆಯಾಗುವುದು.
ಕೆಮ್ಮು ನಿವಾರಕವಾಗಿದೆ: ನಿಮಗೆ ಕೆಮ್ಮು ಬಂದಾಗ ಒಂದು ಚಮಚ ಅಜ್ವೈನ್ ಅನ್ನು ತೆಗೆದುಕೊಂಡು ನೀರಿಗೆ ಹಾಕಿ ಕುದಿಸಿ ಕುಡಿಯುವುದರಿಂದ ಕೆಮ್ಮು, ನಿವಾರಣೆಯಾಗುತ್ತದೆ.
ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ: ಈ ಕೊಲೆಸ್ಟ್ರಾಲ್ ಅನ್ನೋದು ಸರ್ವೇಸಾಮಾನ್ಯವಾಗಿದೆ. ಆದ್ದರಿಂದ ಈ ಸಮಸ್ಯೆ ನಿವಾರಣೆಗಾಗಿ ಸ್ವಲ್ಪ ಅಜ್ವೈನ್ ಅನ್ನು ಪ್ರತಿದಿನ ತಿನ್ನುವ ಅಭ್ಯಾಸವನ್ನು ಮಾಡಿಕೊಂಡರೆ ನಿಮ್ಮ ದೇಹದಲ್ಲಿ ಅನಗತ್ಯವಾಗಿ ಬೆಳೆಯುವ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುವುದು.
ಗಾಯಕ್ಕೆ ಮನೆಮದ್ದಾಗಿದೆ: ನಿಮಗೆ ಸಣ್ಣದಾಗಿ ಗಾಯಗಳಾಗಿದ್ದರೆ ಅಥವಾ ನಿಮ್ಮ ತ್ವಚೆಗೆ ಸೋಂಕು ಉಂಟಾಗಿದ್ದರೆ ಅಜ್ವೈನ್ ಎಣ್ಣೆಯನ್ನು ಆ ಭಾಗಕ್ಕೆ ಹಚ್ಚಿದರೆ ಗಾಯಗಳು ಮತ್ತು ಸೋಂಕು ನಿವಾರಣೆಯಾಗುತ್ತದೆ.