ಕೆಲವರ ಮನೆಯಲ್ಲಿ ಆರ್ಥಿಕ ಸಮಸ್ಯೆ, ಸಾಲಬಾದೆ, ಮನೆಯಲ್ಲಿ ಸದಾ ವೈಮನಸ್ಯ, ಸುಖ ಶಾಂತಿ ನೆಮ್ಮದಿಗಿಂತ ಕಷ್ಟಗಳೇ ಹೆಚ್ಚು, ಹೀಗಿರುವಾಗ ಮನೆಯಲ್ಲಿ ಸೂರ್ಯನಾರಾಯಣ ದೇವನ ಸ್ವರೂಪವನ್ನು ಹೊಂದಿರುವಂತ ತಾಮ್ರದ ಸೂರ್ಯನನ್ನು ಮನೆಯಲ್ಲಿ ಇಟ್ಟರೆ ಒಳ್ಳೆಯದು ಅನ್ನುತ್ತಾರೆ ಪಂಡಿತರು.
ಮನೆಯಲ್ಲಿ ತಾಮ್ರದ ಸೂರ್ಯನನ್ನು ಎಲ್ಲಿ ಇಡಬೇಕು ಹಾಗು ಯಾವ ದಿಕ್ಕಿನಲ್ಲಿ ಇಡಬೇಕು ಗೊತ್ತಾ. ಮನೆಯ ಉತ್ತರ ದಿಕ್ಕಿನಲ್ಲಿ ತಾಮ್ರದ ಸೂರ್ಯನನ್ನ ಇಡುವುದರಿಂದ ನಿಮ್ಮ ಸಾಲಬಾದೆ ಕಡಿಮೆಯಾಗುತ್ತದೆಯಂತೆ, ಹಾಗು ಅಡುಗೆ ಮನೆಯಲ್ಲಿ ಇದನ್ನು ಇಡುವುದರಿಂದ ಅನಾರೋಗ್ಯದ ಸಮಸ್ಯೆ ಕಾಡುವುದಿಲ್ಲ ಅನ್ನೋ ನಂಬಿಕೆ.
ಮನೆಯಲ್ಲಿ ಮಕ್ಕಳ ಕೊನೆಯಲ್ಲಿ ಹಾಗು ಹಾಲ್ ನಲ್ಲಿ ಅಷ್ಟೇ ಅಲ್ಲದೆ ಪ್ರಮುಖ ಸ್ಥಳಗಳಲ್ಲಿ ತಾಮ್ರದ ಸೂರ್ಯನನ್ನು ಇಡುವುದರಿಂದ ಮನೆಯ ವಾತಾವರಣ ಉತ್ತಮವಾಗಿರುತ್ತದೆ, ಹಾಗು ಮನೆಯಲ್ಲಿ ನೆಗೆಟಿವ್ ಎನರ್ಜಿ ನಿವಾರಣೆಯಾಗಿ ಪಾಸಿಟಿವ್ ಎನರ್ಜಿ ತುಂಬಿರುತ್ತದೆ ಎಂಬುದಾಗಿ ಹೇಳಲಾಗುತ್ತದೆ.