ದೇಶದಲ್ಲಿ ಮಹಿಳೆಯರಿಗಾಗಿ ಹಲವು ಯೋಜನೆಗಳನ್ನು ಸರ್ಕಾರ ಜಾರಿಗೆ ತರುತ್ತಿದೆ ಆದರೆ ಇದರ ಮಾಹಿತಿ ಕೆಲವರಿಗೆ ತಲುಪಿದರೆ ಇನ್ನು ಕೆಲವರಿಗೆ ತಲುಪುವುದಿಲ್ಲ ಹಾಗಾಗಿ ಪ್ರತಿ ಮಹಿಳೆಯರು ಇಂತಹ ವಿಚಾರಗಳನ್ನು ತಿಳಿದುಕೊಳ್ಳುವುದು ಅಗತ್ಯವಿದೆ. ಮಹಿಳೆಯರಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡಿ ಮಹಿಳೆಯರನ್ನು ಸಬಲಗೊಳಿಸಬೇಕು ಎನ್ನುವುದು ಸರ್ಕಾರದ ಉದ್ದೇಶಗಳಾಗಿವೆ ಹಾಗಾಗಿ ಮಹಿಳೆಯರಿಗೆ ಹೆಚ್ಚಿನ ಸಾಲ ಸೌಲಭ್ಯಗಳನ್ನು ನೀಡುವುದರ ಮೂಲಕ ಮಹಿಳೆಯರನ್ನು ಉದ್ಯಮಿಗಳಿಗೆ ಪರಿವರ್ತಿಸಲಾಗುತ್ತಿದೆ. ಆದ್ದರಿಂದ ಮಹಿಳೆಯರಿಗೆ ನೀಡುವ ಸಾಲ ಸೌಲಭ್ಯಗಳ ಯೋಜನೆಗಳ ಮಾಹಿತಿ ಇಲ್ಲಿದೆ ನೋಡಿ.
ಬ್ಯಾಂಕ್ನಲ್ಲಿ ಯಾವೆಲ್ಲ ರೀತಿಯ ಯೋಜನೆಯ ಆಧಾರದ ಮೇಲೆ ಸಾಲ ಸೌಲಭ್ಯವನ್ನು ನೀಡಲಾಗುವುದು, ಎಂದರೆ ಮೊದಲನೆಯದಾಗಿ ಅನ್ನಪೂರ್ಣ ಯೋಜನೆ: ಇದು ಮಹಿಳೆಯರಿಗಾಗಿ ಇರುವ ಯೋಜನೆಯಾಗಿದೆ ಇದರಲ್ಲಿ ಹೋಟೆಲ್ ಮಾಡುವಂತಹ ಅವಕಾಶವಿದೆ. ಈ ಹೋಟೆಲ್ ನಲ್ಲಿ ಊಟವನ್ನು ಪ್ಯಾಕೆಟ್ ರೂಪದಲ್ಲಿ ನೀಡಬೇಕು ಮತ್ತು ಸಂಜೆಯ ಸಮಯದಲ್ಲಿ ಸ್ನ್ಯಾಕ್ಸ್ ತಯಾರಿಸಬಹುದು ಇಂತಹ ಹೋಟೆಲ್ ಮಾಡುವವರಿಗೆ ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು.ಈ ಯೋಜನೆಯ ಮಾಹಿತಿ ಮತ್ತು ಲಾಭಕ್ಕಾಗಿ ನಿಮ್ಮ ಹತ್ತಿರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನಲ್ಲಿ ಸಂಪರ್ಕಿಸಿ.
ಇಪ್ಪತ್ತು ಲಕ್ಷದವರೆಗೆ ದೇನಾ ಶಕ್ತಿ ಯೋಜನೆ: ಇದು ಸಹ ಮಹಿಳೆಯರಿಗೆ ಇರುವ ಯೋಜನೆಯಾಗಿದೆ. ಈ ಯೋಜನೆಯನ್ನು ದೇನಾ ಬ್ಯಾಂಕ್ ನಲ್ಲಿ ನೀಡಲಾಗುತ್ತದೆ. ಈ ಬ್ಯಾಂಕ್ ನಲ್ಲಿ 0.25% ಬಡ್ಡಿಯ ರಿಯಾತಿಯೊಂದಿಗೆ ೨೦ ಲಕ್ಷದ ವರಗೆ ಸಾಲ ನೀಡಲಾಗುತ್ತದೆ. ಮಹಿಳೆಯರು ವಾಣಿಜ್ಯ ಉದ್ಯಮಿಗಳಾಗಲು ಈ ಯೋಜನೆಯನ್ನು ಮಾಡಲಾಗಿದೆ.
ಮಹಿಳಾ ಮುದ್ರಾ ಯೋಜನೆ: ಈ ಯೋಜನೆಯಲ್ಲಿ ಕೇಂದ್ರ ಸರ್ಕಾರ ಮಹಿಳೆಯರಿಗೆ ಮುದ್ರಾ ಯೋಜನೆಯಲ್ಲಿ ಸೌಲಭ್ಯ ನೀಡುತ್ತಿದೆ. ಈ ಯೋಜನೆಯಡಿಯಲ್ಲಿ ಸಣ್ಣ ವಾಣಿಜ್ಯ ಸ್ಥಾಪಿಸಲು, ಬ್ಯೂಟಿ ಪಾರ್ಲರ್ ತೆರೆಯಲು, ಟೈಲರಿಂಗ್ ಯುನಿಟ್, ಟ್ಯೂಶನ್ ಸೆಂಟರ್ ಶುರು ಮಾಡಲು ಸಹಾಯ ಮಾಡುವುದರ ಮೂಲಕ ಮಹಿಳೆಯರನ್ನು ಉದ್ಯಮಿಗಳಾಗಿ ಮಾಡುತ್ತಿದೆ.
ಅಷ್ಟೇ ಅಲ್ಲದೆ ಈ ವರ್ಷ ಮಂಡಿಸಿದ ಬಜೆಟ್ ನಲ್ಲಿ ಮಹಿಳೆಯರ ಸ್ವ ಸಹಾಯ ಗುಂಪುಗಳಿಗೆ ಯಾವುದೇ ಬಡ್ಡಿಯಿಲ್ಲದೆ ಮೂರೂ ಲಕ್ಷದವರೆಗೆ ಸಾಲ ನೀಡುವ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ. ಆದ್ದರಿಂದ ಇಂತಹ ಯೋಜನೆಗಳ ಪ್ರಯೋಜನಗಳನ್ನು ಮಹಿಳೆಯರು ಪಡೆದುಕೊಂಡು ತಮ್ಮ ಸ್ವಂತ ಬಲದ ಮೇಲೆ ಉದ್ಯಮಗಳನ್ನು ಆರಂಭಿಸಿ ಲಾಭವನ್ನು ಗಳಿಸಬಹುದಾಗಿದೆ.
ಈ ರೀತಿಯ ಸಾಲ ಸೌಲಭ್ಯವನ್ನು ಇಂತಿಷ್ಟು ದಿನಾಂಕದೊಳಗೆ ಪಡೆದುಕೊಳ್ಳಬಹುದು ಅನ್ನೋ ಪ್ರಕಟಣೆ ಇರುತ್ತದೆ ಹಾಗಾಗಿ ಈ ವರ್ಷ ನಿಮಗೆ ತಿಳಿಯದೆ ಇದ್ರೆ ಮುಂದಿನ ಬಾರಿಗೆ ಆದ್ರೂ ಪಡೆದುಕೊಳ್ಳುವ ಅವಕಾಶವನ್ನು ಮಾಡಿಕೊಳ್ಳಿ.