ನಾಗ ಕೇಸರ ಅಥವ ನಾಗಸಂಪಿಗೆ ಹೂವು ಇದು ನಾಲ್ಕು ದಳಗಳುಳ್ಳ ಸುವರ್ಣ ಬಣ್ಣದ ಸುಗಂಧಭರಿತ ಹೂವೆ ನಾಗಸಂಪಿಗೆ. ಹೂ ಮದ್ಯೆ ಕಂಗೊಳಿಸುವ ಹಾವಿನ ಹೆಡೆಯಾಕಾರದ ಕೇಸರ ಗೊಂಚಲು ಕಾಯಿಯೊಳಗೆ ನಾಲ್ಕು ಬೀಜ ಇರುತ್ತದೆ. ಈ ನಾಗಕೇಸರಿ ಎಲೆಯು ಕೊಳೆಯುವುದಿಲ್ಲ ಹಾಗೂ ಗೆದ್ದಲು ಸಹ ಇಡಿಯುವುದಿಲ್ಲ. ನಾಗಕೇಸರ ಎಲೆಯಿಂದ ಎಣ್ಣೆಯನ್ನು ಸಹ ತೆಗೆಯಬಹುದು. ಕಾಂಡ, ತೊಗಟೆ, ಎಲೆ, ಬೇರು, ಹೂವು ಮತ್ತು ಕೇಸರ ಇದರ ಉಪಯುಕ್ತ ಭಾಗಗಳಾಗಿವೆ.
ಅಜೀರ್ಣ ಭೇದಿಯಾಗುತ್ತಿದ್ದಲ್ಲಿ ನಾಗಕೇಸರ, ಕಾಚು, ಜಾಯಿಕಾಯಿ, ಮಾಪಾಳಕಾಯಿ ಜಾಯಿಕಾಯಿ ಸಮಪ್ರಮಾಣದಲ್ಲಿ ಅರೆದು ಮಾತ್ರೆ ತಯಾರಿಸಿಟ್ಟುಕೊಂಡು ಸೇವಿಸಬೇಕು ಇದನ್ನು ನಾಗಕೇಸರ ವತಿ ಎನ್ನುತ್ತಾರೆ.
ಖದಿರಾದಿ ಚೂರ್ಣ ಎಂದು ಕರೆಯಲ್ಪಡುವ ಕಾಚು ಜಾಯಿಕಾಯಿ ನಾಗಕೇಸರ ದಾಲ್ಚಿನ್ನಿಯನ್ನು ಸಮಭಾಗದಲ್ಲಿ ಅರೆದು ತಯಾರಿಸಿದ ಚೂರ್ಣ ಹೊಟ್ಟೆನೋವಿನಿಂದ ನರಳುವವರಿಗೆ ಒಳ್ಳೆಯದು.
ಮೂಲವ್ಯಾಧಿಯ್ಲಲಿ ರಕ್ತಸ್ರಾವ ಆಗುತ್ತಿದ್ದರೆ ನಾಗಕೇಸರ ಪುಡಿ ಬೆಣ್ಣೆ ಮತ್ತು ಕಲ್ಲುಸಕ್ಕರೆ ಬೆರೆಸಿ ಸೇವಿಸಬೇಕು. ಕಫಯುಕ್ತ ಕೆಮ್ಮಿನಿಂದ ಬಳಲುವವರು ನಾಗಕೇಸರದಿಂದ ತಯಾರಿಸಿದ ಕರ್ಪೂರಾದಿ ಚೂರ್ಣ ಉಪಯೋಗಿಸಬೇಕು.
ನಾಗಸಂಪಿಗೆಯ ಹೂವಿನ ಪೌಡರ್ ಲೇಪಿಸಿಕೊಳ್ಳುವುದರಿಂದ ಅತಿಬೆವರಿನಿಂದ ಉಂಟಾಗುವ ದುರ್ಗಂಧ ಇಲವಾಗುತ್ತದೆ. ಸಂಧಿವಾತದಿಂದ ಬಳಲುವವರಿಗೆ ನಾಗಸಂಪಿಗೆಯ ಬೀಜದಿಂದ ತಯಾರಿಸಿದ ಎಣ್ಣೆಯಿಂದ ಮಸಾಜ್ ಮಾಡಿದಲ್ಲಿ ನೋವು ಶಮನವಾಗುತ್ತದೆ.
ಹಾವು ಕಚ್ಚಿದರೆ ಮತ್ತು ಇಲಿ ಕಚ್ಚಿದಾಗ ನಾಗಸಂಪಿಗೆಯ ಹೂವಿನ ಪುಡಿಯನ್ನು ಮತ್ತು ಎಲೆಯ ಪುಡಿಯನ್ನು ಪ್ರಥಮ ಚಿಕೆತ್ಸೆಗೆ ಬಳಸಬಹುದು. ಅಂಗೈ ಅಂಗಾಲು ಉರಿಯಿದ್ದಲ್ಲಿ ನಾಗಸಂಪಿಗೆಯ ಹೂವನ್ನು ತುಪ್ಪದಲ್ಲಿ ನೆನೆಯಿತ್ತು ಸ್ವಲ್ಪ ಸಮಯ ಬಿಟ್ಟು ಸಕ್ಕ್ರೆ ಬೆರೆಸಿ ಸೇವನೆ ಮಾಡಬೇಕು.
ಸ್ತ್ರೀಯರಲ್ಲಿ ಬಿಳಿಮುಟ್ಟು ಹೋಗುತ್ತಿದ್ದಾಗ ನಾಗಕೇಸರವನ್ನು ತುಪ್ಪದಲ್ಲಿ ನೆನೆಯಿತ್ತು ಸ್ವಲ್ಪ ಸಮಯ ಬಿಟ್ಟು ಸಕ್ಕರೆ ಬೆರೆಸಿ ಸೇವನೆ ಮಾಡಬೇಕು.ಧ್ವನಿ ಒಡೆದಿದ್ದರೆ ನಾಗಕೇಸರ ಮತ್ತು ಕಲ್ಲುಸಕ್ಕರೆ ಎರಡನ್ನು ಬೆರೆಸಿ ಬಾಯಲ್ಲಿಟ್ಟುಕೊಂಡು ರಸ ನುಂಗುತ್ತಿರಬೇಕು. ಸಿಹಿಮೂತ್ರ ರೋಗಿಗಳು ನಾಗಕೇಸರ ಕಷಾಯ ತಯಾರಿಸಿ ಕುಡಿಯಬೇಕು.