ಮನುಷ್ಯನಿಗೆ ಕಣ್ಣು ಅನ್ನೋದು ತುಂಬ ಅವಶ್ಯಕ ಕಣ್ಣು ಇಲ್ಲ ಅಂದ್ರೆ ಮನುಷ್ಯ ಯಾರನ್ನು ಮತ್ತು ಏನನ್ನು ನೋಡಲು ಸಾಧ್ಯವಾಗುವುದಿಲ್ಲ ಹಾಗಾಗಿ ಆರೋಗ್ಯಯುತ ಕಣ್ಣುಗಳಿಗೆ ಆರೋಗ್ಯಯುತ ಆಹಾರ ಪದ್ಧತಿ ರೂಢಿಸಿಕೊಳ್ಳಿ. ಕ್ಯಾರೆಟ್, ಹಸಿರು ತರಕಾರಿಗಳು, ಒಣ ಹಣ್ಣುಗಳು, ಮೀನು ಮೊದಲಾದ ಆಹಾರ ಪದಾರ್ಥಗಳು ನಮ್ಮದಾಗಿದ್ದರೆ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.
ಮೀನು: ಈ ಮೀನು ನಿಮ್ಮ ಕಣ್ಣಿನ ಆರೋಗ್ಯಕ್ಕೆ ತುಂಬಾನೇ ಸಹಾಯ ಮಾಡಲಿದೆ ತಜ್ಞರು ಮತ್ತು ಮನೆಯಲ್ಲಿ ಹಿರಿಯರು ಹೇಳುವಂತೆ ಕಣ್ಣಿಗೆ ಮೀನು ಸೇವಿಸುದು ತುಂಬಾನೇ ಒಳ್ಳೇದು ಅಂತ ನಾವು ನೀವು ಕೇಳಿದ್ದೀವಿ ಹಾಗಾಗಿ ನಿಮ್ಮ ಕಣ್ಣಿನ ಆರೋಗ್ಯಕ್ಕೆ ಮೀನು ಸೇವಿಸಿ.
ಒಣ ಹಣ್ಣುಗಳು (ಡ್ರೈ ಪ್ರುಟ್ಸ್): ಹೌದು ನೀವು ಸೇವಿಸಿವ ಒಣ ಹಣ್ಣುಗಳಲ್ಲಿ ಹಲವು ಅಂಶಗಳು ಇದ್ದು ಅವು ನಿಮ್ಮ ಕಣ್ಣುಗಳನ್ನು ಆರೋಗ್ಯವಾಗಿಡಲು ಸಹಕರಿಸುತ್ತವೆ ಹಾಗಾಗಿ ನೀವು ಆದೊಷ್ಟು ಒಣ ಹಣ್ಣುಗಳನ್ನು ಸೇವಿಸುದನ್ನು ರೂಢಿಮಾಡಿಕೊಳ್ಳಿ.
ಹಸಿರು ತರಕಾರಿಗಳು: ಕಣ್ಣುಗಳಿಗೆ ಈ ಹಸಿರು ತರಕಾರಿಗಳು ತುಂಬ ಪ್ರಯೋಜನಕಾರಿಯಾಗಿವೆ ಅದರಲ್ಲೂ ಹಸಿ ತರಕಾರಿ ಸೇವಿಸುವುದರಿಂದ ನಿಮ್ಮ ಕಣ್ಣುಗಳು ಯಾವಾಗಲು ಆರೋಗ್ಯವಾಗಿರುತ್ತವೆ.
ಕ್ಯಾರೆಟ್: ಕ್ಯಾರೆಟ್ ಸಹ ನಿಮ್ಮ ಕಾಣುಗಳನ್ನು ಆರೋಗ್ಯವಾಗಿಡಲು ಸಹಕರಿಸುತ್ತದೆ. ಇದರಲ್ಲಿರುವ ಕೆರೊಟಿನ್ ಅಂಶ ನಿಮ್ಮ ಕಣ್ಣಿಗೆ ತುಂಬ ಒಳಿತು. ಇನ್ನು ಕೆರೊಟಿನ್ ಅಂಶ ಇರುವ ಆಹಾರವನ್ನು ಹೆಚ್ಚು ಸೇವಿಸಬೇಕು. ಇದರಲ್ಲಿರುವ ಬೀಟಾ ಕ್ಯಾರೊಟಿನ್ ಎಂಬುದು ವಿಟಮಿನ್ ಎ ವಿಭಾಗಕ್ಕೆ ಸೇರುತ್ತದೆ. ಈ ಆಹಾರ ನಿಮ್ಮ ಕಣ್ಣಿನ ಆರೋಗ್ಯಕ್ಕೆ ಉತ್ತಮ.
ಮೊಟ್ಟೆ: ಮೊಟ್ಟೆಯಲ್ಲಿರುವ ಜಿಂಕ್, ಆಂಟಿ ಆಕ್ಸಿಡೆಂಟ್ ಅಂಶಗಳು ನಿಮ್ಮ ಕಣ್ಣಿನ ದೃಷ್ಟಿಯನ್ನು ಚೆನ್ನಾಗಿರುವಂತೆ ಕಾಪಾಡುತ್ತದೆ ಹಾಗಾಗಿ ನೀವು ನಿಮ್ಮ ಕಣ್ಣಿನ ಆರೋಗ್ಯಕ್ಕೆ ಮೊಟ್ಟೆ ಸೇವಿಸುವುದು ಉತ್ತಮ.