WhatsApp Group Join Now

ನಾವು ಆರೋಗ್ಯವಾಗಿರಲು ದೇಹದ ಎಲ್ಲಾ ಅಂಗಗಳು ಕ್ಲೀನ್ ಆಗಿರಬೇಕು. ಅದೇರೀತಿ ಬಾಯಿ, ಹಲ್ಲು, ನಾಲಿಗೆ ಕೂಡ ಸ್ವಚ್ಚವಾಗಿರಬೇಕು. ಬಾಯಿಯ ಆರೋಗ್ಯಕ್ಕೆ ಮಾತ್ರವಲ್ಲ, ಶರೀರದ ಆರೋಗ್ಯಕ್ಕೂ ನಾಲಿಗೆಯನ್ನು ಸ್ವಚ್ಛಗೊಳಿಸಿವುದು ಅತ್ಯವಶ್ಯಕ. ದಿನನಿತ್ಯ ಬೆಳಗ್ಗೆ ಹಲ್ಲುಜ್ಜುವ ಅಭ್ಯಾಸವಿದ್ದರೂ,

ಕೆಲವರು ನಾಲಿಗೆ ಸ್ವಚ್ಛಗೊಳಿಸುವಿಕೆಯನ್ನು ಕಡೆಗಣಿಸುತ್ತಾರೆ. ಸಾಮಾನ್ಯವಾಗಿ ನಾಲಿಗೆಯನ್ನು ಕ್ಲೀನ್ ಮಾಡದಿದ್ದರೆ ತೆಳುವಾದ ಬಿಳಿ ಪದರವು ಮೂಡಿರುತ್ತದೆ. ಇಂತಹ ಪದರವೇ ಮುಂದೆ ಅಪಾಯಕಾರಿಯಾಗಲಿದೆ ಎಂದರೆ ನಂಬಲೇಬೇಕು.

ನಾಲಿಗೆಯನ್ನು ಕ್ಲೀನ್ ಮಾಡದೇ, ನಾವೆಷ್ಟು ಬಾರಿ ಹಲ್ಲುಜ್ಜಿದರೂ ಬಾಯಿಯ ದುರ್ಗಂಧ ಹಾಗೇ ಉಳಿದು ಬಿಡುತ್ತದೆ. ಇದರಿಂದ ಬಾಯಿಯಿಂದ ಕೆಟ್ಟ ವಾಸನೆ ಬರುತ್ತಿರುತ್ತದೆ.

ನಾಲಿಗೆಯನ್ನು ಸ್ವಚ್ಛ ಮಾಡದಿರುವುದರಿಂದ ಕೇವಲ ಬಾಯಿ ದುರ್ಗಂಧ ಮಾತ್ರ ಹೊರ ಬರುವುದಿಲ್ಲ. ಬದಲಾಗಿ ನಾವು ಉಸಿರಾಡುವಾಗಲು ಕೆಟ್ಟ ವಾಸನೆಯೊಂದು ಬರುತ್ತಿರುತ್ತದೆ.

ನೀವು ದೀರ್ಘಕಾಲದವರೆಗೆ ನಾಲಿಗೆಯನ್ನು ಸ್ವಚ್ಛಗೊಳಿಸದೇ ನಿರ್ಲಕ್ಷ್ಯವಹಿಸಿದರೆ ಅದು ಹಲ್ಲುಗಳ ಮತ್ತು ಒಸಡುಗಳ ಮೇಲೆ ಉಂಟಾಗುವ ಉರಿಯೂತಕ್ಕೆ ಕಾರಣವಾಗುತ್ತವೆ. ಇದುವೇ ಮುಂದೆ ಹೃದಯಾಘಾತ, ಪಾರ್ಶ್ವವಾಯು, ಗರ್ಭಪಾತದ ಅಪಾಯಕ್ಕೆ ಎಡೆಮಾಡಿಕೊಡುತ್ತದೆ.

ಬಾಯಿಯಲ್ಲಿ ಸಾಮಾನ್ಯವಾಗಿ ಬ್ಯಾಕ್ಟೀರಿಯಾಗಳಿರುತ್ತವೆ. ಅದರಲ್ಲೂ ನಿದ್ದೆಯ ಸಮಯದಲ್ಲಿ ಬಾಯಿಯಲ್ಲಿ ಸುಮಾರು 700ಕ್ಕೂ ಹೆಚ್ಚಿನ ಬ್ಯಾಕ್ಟೀರಿಯಾಗಳು ಕಂಡು ಬರುತ್ತವೆ ಎನ್ನುತ್ತಾರೆ ವೈದ್ಯಕೀಯ ತಜ್ಞರು. ಬೆಳಿಗ್ಗೆ ಎದ್ದು ಬ್ರಶ್ ಮಾಡಿದ ಬಳಿಕ ಇಂತಹ ಬ್ಯಾಕ್ಟೀರಿಯಾಗಳು ಕಡಿಮೆಯಾದರೂ, ನಾಲಿಗೆಯನ್ನು ಕ್ಲೀನ್ ಮಾಡಿದಿದ್ದರೆ ಅವುಗಳಲ್ಲಿ ಹೆಚ್ಚಿನವು ಹಾಗೆಯೇ ಉಳಿದು ಬಿಡುತ್ತವೆ.

ನಾಲಿಗೆ ಸ್ವಚ್ಚ ಮಾಡಲು ಇಲ್ಲಿದೆ ಸುಲಭ ವಿಧಾನ : ನಾಲಿಗೆ ಮೇಲೆ ಸ್ವಲ್ಪ ಉಪ್ಪನ್ನು ಹಾಕಿ ಬ್ರೆಷ್ ನಿಂದ ತಿಕ್ಕಿ. ಒಂದು ವಾರಗಳ ಕಾಲ ಇದನ್ನು ನಿಯಮಿತವಾಗಿ ಮಾಡಿ. ಮೊಸರನ್ನು ನಾಲಿಗೆ ಹಚ್ಚಿ ತಿಕ್ಕುವುದರಿಂದ ನಾಲಿಗೆ ಸ್ವಚ್ಛವಾಗುತ್ತದೆ.

ಅರಿಶಿನಕ್ಕೆ ನಿಂಬೆ ರಸವನ್ನು ಮಿಕ್ಸ್ ಮಾಡಿ ನಾಲಿಗೆ ಮೇಲೆ ಹಾಕಿ ಬೆರಳಿನ ಸಹಾಯದಿಂದ ಮಸಾಜ್ ಮಾಡಿ. ನಂತ್ರ ಬೆಚ್ಚಗಿನ ನೀರಿನಲ್ಲಿ ಬಾಯಿ ಮುಕ್ಕಳಿಸಿ. ಹಾಗೇ ಅರ್ಧ ಲೋಟ ನೀರಿಗೆ ಒಂದು ಚಮಚ ನಿಂಬೆ ರಸವನ್ನು ಬೆರೆಸಿ ಬಾಯಿ ಮುಕ್ಕಳಿಸಿ. ದಿನಕ್ಕೆ 5-6 ಬಾರಿ ಹೀಗೆ ಮಾಡಿ.

WhatsApp Group Join Now

Leave a Reply

Your email address will not be published. Required fields are marked *