ಹೊಟ್ಟೆ ಮೇಲೆ ತಣ್ಣೀರಿನ ಬಟ್ಟೆ ಹಾಕೊಂಡ್ರೆ ಏನೆಲ್ಲಾ ಆಗುತ್ತೆ ಗೊತ್ತಾ, ಆರೋಗ್ಯಕ್ಕೆ ಸಂಬಂಧಿಸದಂತೆ ಹೊಟ್ಟೆ ಮೇಲೆ ತನ್ನೂರು ಬಟ್ಟೆ ಹಾಕಿದ್ರೆ ಎಷ್ಟೆಲ್ಲ ಲಾಭಗಳಿವೆ ಅನ್ನೋದು ಇಲ್ಲಿದೆ ನೋಡಿ.
ತೂಕ ಕಡಿಮೆ ಮಾಡಲು: ಊಟ ಮುಂಚೆ ೧೫ ನಿಮಿಷಗಳ ಕಾಲ ಹೊಟ್ಟೆಗೆ ತಣ್ಣೀರಿನ ಪಟ್ಟಿಯನ್ನು ಹಾಕಿದ್ದಲ್ಲಿ ಹಸಿವು ಕಡಿಮೆಯಾಗುವುದಲ್ಲದೆ ಸೇವಿಸುವ ಆಹಾರದ ಪ್ರಮಾಣವು ಕಡಿಮೆಯಾಗುವುದು. ಇದರಿಂದ ಅಧಿಕ ಕ್ಯಾಲೊರಿ ಸೇವನೆಯು ನಿಯಂತ್ರಣಕ್ಕೆ ಬಂದು ತೂಕವು ಇಳಿಕೆಯಾಗುತ್ತದೆ.
ಜೀರ್ಣ ಶಕ್ತಿ ಹೆಚ್ಚಾಗಲು: ಖಾಲಿ ಹೊಟ್ಟೆಯ ಮೇಲೆ ತಣ್ಣೇರಿನ ಬಟ್ಟೆಯನ್ನು ಹಾಕಿ ಕಟ್ಟಿದಲ್ಲಿ ಜೀರ್ಣಾಂಗಗಳಿಗೆ ರಕ್ತ ಪರಿಚಲನೆ ಅಧಿಕವಾಗಿ ಅವುಗಳ ಕಾರ್ಯಕ್ಷಮತೆ ಹೆಚ್ಚುತ್ತದೆ. ಜೀರ್ಣರಸವು ಅಧಿಕವಾಗಿ ಸ್ರವಿಸಿ ಸೇವಿಸಿದ ಆಹಾರವು ಸಂಪೂರ್ಣವಾಗಿ ಪಚನವಾಗುತ್ತದೆ.
ಹೊಟ್ಟೆಯ ಬೊಜ್ಜು ಕಡಿಮೆ ಮಾಡಲು: ಏನ್ ಮಾಡಿದ್ರು ಹೊಟ್ಟೆ ಕರಗಿಸಲು ಆಗ್ತಾ ಇಲ್ವಾ? ಹಾಗಿದ್ರೆ ಹೊಟ್ಟೆ ಮೇಲೆ ತಣ್ಣೇರಿನ ಬಟ್ಟೆನ ೧ ಗಂಟೆಗಳ ಕಾಲ ಹಾಕಿಡಿ. ಇದರಿಂದ ಅಲ್ಲಿರುವ ಸ್ನಾಯುಗಳು ಸಂಕುಚಿತಗೊಂಡು ಬೊಜ್ಜು ರಕ್ತಗತವಾಗುತ್ತದೆ ಮತ್ತು ಕ್ಯಾಲೊರಿ ಬರ್ನಿಂಗ್ ಅಧಿಕವಾಗಿ ಸಂಗ್ರಹಗೊಂಡ ಬೊಜ್ಜು ಕಡಿಮೆಯಾಗುತ್ತದೆ. ಇದರಿಂದ ಸೊಂಟದ ಮತ್ತು ಹೊಟ್ಟೆಯ ಸುತ್ತಳತೆಯು ಕಡಿಮೆಯಾಗುತ್ತದೆ.
ಮಲಬದ್ಧತೆ ನಿವಾರಣೆಗೆ: ಊಟವಾದ ಎರಡು ಗಂಟೆಗಳ ನಂತರ ಕೆಲ ಹೊಟ್ಟೆಯ ಮೇಲೆ ತಣ್ಣೀರಿನ ಬಟ್ಟೆ ಹಾಕಿದ್ದಲ್ಲಿ ಕರುಳಿನ ಚಾಲನೆ ಅಧಿಕವಾಗಿ ಮಲವಿಸರ್ಜನೆ ಸರಾಗವಾಗಿ ಆಗುತ್ತದೆ. ದಿನವೂ ಇದನ್ನು ಪಾಲಿಸಿದ್ದಲ್ಲಿ ಮಲಬದ್ಧತೆಯಿಂದ ಮುಕ್ತಿಪಡೆಯಬಹುದು.
ನಿದ್ರಾಹೀನತೆಗೆ: ದಿನವೂ ರಾತ್ರಿ ಮಲಗುವ ಮೊದಲು ೨೦ ನಿಮಿಷಗಳ ಕಾಲ ಹೊಟ್ಟೆಯ ಮೇಲೆ ತಣ್ಣೇರಿನ ಪಟ್ಟಿ ಹಾಕಿದ್ದಲ್ಲಿ ದೇಹದ ವಿಶ್ರಾಂತಿ ಕ್ರಿಯೆಯು ಅಧಿಕವಾಗಿ ನಿದ್ರೆಯು ಚೆನ್ನಾಗಿ ಬರುವುದು.
ಕಿಡ್ನಿಯನ್ನು ಉತ್ತೇಜಿಸುವುದು: ಹೊಟ್ಟೆಯ ಮೇಲೆ ತಣ್ಣೀರಿನ ಬಟ್ಟೆ ಹಾಕಿದ್ದಲ್ಲಿ ಮೂತ್ರಕೋಶಗಳಿಗೆ ರಕ್ತ ಸಂಚಾರ ಅಧಿಕವಾಗಿ ಮೂತ್ರ ಹೆಚ್ಚು ಉತ್ಪತ್ತಿಯಾಗುತ್ತದೆ. ಇದರಿಂದ ದೇಹದಲ್ಲಿನ ಕಲ್ಮಶಗಳು ಅಧಿಕವಾಗಿ ಹೊರ ಹಾಕಲ್ಪಡುತ್ತದೆ.