ದಿನ ಊಟವಾದ ನಂತರ ಎಲೆ ಅಡಿಕೆ ಅಥವಾ ತಾಂಬೂಲ ತಿನ್ನುವುದರಿಂದ ಎಷ್ಟೆಲ್ಲ ಲಾಭಗಳಿವೆ ಅನ್ನೋದು ಇಲ್ಲಿದೆ ನೋಡಿ.
ತಾಂಬೂಲ ಸೇವಿಸುವುದರಿಂದ ಜೊಲ್ಲು ಸ್ರವಿಸುವುದು ಹೆಚ್ಚಾಗಿ ಸೇವಿಸಿದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ಚಳಿಗಾಲದಲ್ಲಿ ತಾಂಬೂಲ ಸೇವನೆಯು ದೇಹವನ್ನು ಬೆಚ್ಚಗಿರಿಸುವುದು.
ಕಫ ನಿವಾರಣೆಗೆ ಮತ್ತು ಕೆಮ್ಮಿನ ಭಾದೆ ಕಡಿಮೆಯಾಗಲು ಒಂದು ವೀಳ್ಯದೆಲೆಯೊಂದಿಗೆ ನಾಲ್ಕೈದು ತುಳಸಿ ಎಲೆ, ಒಂದು ಲವಂಗ, ೧ ಮೆಣಸು ಕಾಳು ಸೇರಿಸಿ ದಿನಕ್ಕೆ ಎರಡರಿಂದ ಮೂರು ಬಾರಿ ತಿಂದಲ್ಲಿ ಗುಣವಾಗುತ್ತದೆ.
ಕಫ ಇರುವವರು ಒಂದು ವೀಳ್ಯದೆಲೆಯೊಂದಿಗೆ ನಾಲ್ಕು ಮೆಣಸು ಕಾಳು ಮತ್ತು ೧ ಹರಳುಪ್ಪು ಬೆರೆಸಿ ಸೇವಿಸಿದ್ದಲ್ಲಿ ಶಮನವಾಗುತ್ತದೆ. ದಂತಕ್ಷಯ ನಿವಾರಣೆಗೆ ವೀಳ್ಯದೆಲೆಯನ್ನು ಅಗಿದು ತಿನ್ನಬೇಕು.
ವೀಳ್ಯದೆಲೆಯನ್ನು ನುಣ್ಣಗೆ ಅರೆದು ಕೊಬ್ಬರಿ ಎಣ್ಣೆಯಲ್ಲಿ ಕಲಸಿ ತಲೆಗೆ ಹಚ್ಚುವುದರಿಂದ ತಲೆ ಹೊತ್ತು ಸುಲಿಯುವುದು ಮತ್ತು ಕೂದಲು ಉದರುವುದು ನಿಂತು ಹೋಗುವುದು.
ಗಾಯವಾಗಿದ್ದಲ್ಲಿ ನಿಂಬೆರಸದಲ್ಲಿ ಒಂದು ವೀಳ್ಯದೆಲೆಯನ್ನು ನುಣ್ಣಗೆ ಅರೆದು ಗಾಯಕ್ಕೆ ಹಚ್ಚಿದ್ದಲ್ಲಿ ಬೇಗನೆ ಗುಣವಾಗುವುದು.
ಮಗುವು ಹೊಟ್ಟೆ ಉಬ್ಬರದಿಂದ ಬಳಲುತ್ತಿದ್ದಲ್ಲಿ ಹರೆಳೆಣ್ಣೆ ಸವರಿದ ವೀಳ್ಯದೆಲೆಯನ್ನು ಬಿಸಿ ಮಾಡಿ ಹೊಟ್ಟೆಗೆ ಶಾಖ ಕೊಟ್ಟಲ್ಲಿ ಉಬ್ಬರ ಮತ್ತು ನೋವು ಕಡಿಮೆಯಾಗುವುದು.