ಕಿರಿಯರು ಏನಾದರೂ ಅಪ್ಪಿತಪ್ಪಿಯು ಉತ್ತರ ದಿಕ್ಕಿಗೆ ತಲೆ ಮಾಡಿ ಮಲ್ಕೊಂಡ್ರೆ ಮಲಗಿದರೆಂದರೆ ಮುಗಿಯಿತು. ಮನೆಯಲ್ಲಿನ ಹಿರಿಯರು ಬೈಯ್ದುಬಿಡುತ್ತಾರೆ. ಉತ್ತರ ದಿಕ್ಕಿಗೆ ತಲೆ ಮಾಡಿ ಮಲ್ಕೊಂಡ್ರೆ ದೆವ್ವ ಗಿವ್ವ ಬರುವ ಅನ್ನೋ ಮಾತಿದೆ. ಅವರ ನಂಬಿಕೆ ಪ್ರಕಾರ ಉತ್ತರಕ್ಕೆ ತಲೆ ಇಟ್ಟು ಮಲಗುವುದರಿಂದ ದೆವ್ವ ಅಥವ ಭೂತಗಳು ನಮ್ಮದೇಹವನ್ನು ಪ್ರವೇಶಿಸಿ ಕೆಡುಕು ಉಂಟು ಮಾಡುತ್ತದೆ ಎಂಬುದು. ಆದರೆ ಉತ್ತರಕ್ಕೆ ತಲೆಇಟ್ಟು ಮಲಗಬಾರದು ಎಂಬುದಕ್ಕೆ ವೈಜ್ಞಾನಿಕ ಕಾರಣವೂ ಇದೆ.
ಆದರೆ ವಿಜ್ಞಾನದ ಪ್ರಕಾರ ನಮ್ಮ ದೇಹದ ಮ್ಯಾಗ್ನೆಟಿಕ್ ಫೀಲ್ಡ್ ಮತ್ತು ಭೂಮಿಯ ಮ್ಯಾಗ್ನೆಟಿಕ್ ಫೀಲ್ಡ್ ಎರಡೂ ಒಂದಕ್ಕೊಂದು ವಿರೋಧಿಸದಿರಲಿ ಎಂದು ಹೀಗೆ ಮಾಡಬೇಕು. ಉತ್ತರಕ್ಕೆ ತಲೆ ಮಾಡಿಕೊಂಡು ಮಲಗಿದರೆ ನಮ್ಮ ಮ್ಯಾಗ್ನೆಟಿಕ್ ಫೀಲ್ಡ್ ಹಾಗೂ ಭೂಮಿಯ ಮ್ಯಾಗ್ನೆಟಿಕ್ ಫೀಲ್ಡ್ ಎರಡೂ ವಿರುದ್ಧ ದಿಕ್ಕಿನಲ್ಲಿ ಜೋಡಿಸಿದಂತಾಗುತ್ತವೆ, ಆಗ ರಕ್ತದ ಒತ್ತಡಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಿ ಎದೆಬಡಿತ ಹೆಚ್ಚುತ್ತದೆ.
ಅಲ್ಲದೆ, ನಮ್ಮ ದೇಹದಲ್ಲಿ ಕಬ್ಬಿಣದ ಅಂಶ ಸಾಕಷ್ಟಿರುತ್ತದೆ. ಉತ್ತರಕ್ಕೆ ತಲೆ ಮಾಡಿ ಮಲಗಿದರೆ ಅವುಗಳ ಸಾಂದ್ರತೆ ತಲೆಯ ಹತ್ತಿರ ಹೆಚ್ಚತ್ತದೆ ಹಾಗೂ ಆ ಕಾಂತ ಕ್ಷೇತ್ರದಿಂದ ಆಕರ್ಷಣೆಯಾಗುವ ನಮ್ಮ ದೇಹದ ಕಬ್ಬಿಣಾಂಶವು ತಲೆಯಲ್ಲಿ ಶೇಖರಗೊಳ್ಳುತ್ತದೆ. ಇದರಿಂದ ತಲೆನೋವು, ಆಲ್ ಜೈಮರ್ ರೋಗ, ಬುದ್ಧಿಮಾಂದ್ಯತೆ, ಪಾರ್ಕಿನ್ಸನ್ ರೋಗ, ಮೆದುಳಿನ ಕಾರ್ಯ ಕ್ಷಿಣಿಸುತ್ತದೆ, ಮುಂತಾದವುಗಳು ಬರುವ ಸಾಧ್ಯತೆ ಹೆಚ್ಚು.
ವಿಜ್ಞಾನ ಹೇಳುವುದೆಂದರೆ ಮಾನವ ದೇಹಕ್ಕೆ ತನ್ನದೇ ಆದ ಕಾಂತ ಕ್ಷೇತ್ರವಿದೆ. ಯಾವಾಗ ನಾವು ಉತ್ತರಕ್ಕೆ ತಲೆ ಇಟ್ಟು ಮಲಗುತ್ತವೆಯೋ ಆಗ ನಮ್ಮ ದೇಹದಲ್ಲಿನ ಕಾಂತ ಕ್ಷೇತ್ರವು ಸಮತೋಲನವನ್ನು ಕಳೆದುಕೊಳ್ಳುತ್ತದೆ. ಇದರಿಂದ ಮುಂದೆ ರಕ್ತದ ಒತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಕಂಡುಬರುತ್ತದೆ. ಹೀಗಾಗಿ ದೇಹದಲ್ಲಿ ಕಾಂತ ಕ್ಷೇತ್ರದ ಸಮತೋಲನವನ್ನು ಕಾಯ್ದುಕೊಳ್ಳುವುದು ಅತ್ಯಗತ್ಯ.