ಹಳ್ಳಿ ಹಾಗು ನಗರದ ಜನರು ಫಿಲ್ಟರ್ ನೀರು ಕುಡಿಯುವ ಅಭ್ಯಾಸ ಮಾಡಿಕೊಂಡಿದ್ದಾರೆ, ಆದ್ರೆ ಇದು ಆರೋಗ್ಯಕ್ಕೆ ಒಳ್ಳೆಯದು ಅನ್ನೋದು ಎಲ್ಲರ ಅಭಿಪ್ರಾಯ ಆದ್ರೆ ಇದು ಅತಿಯಾದರೆ ಅನಾರೋಗ್ಯ ಸಮಸ್ಯೆಗೆ ಕಾರಣವಾಗುತ್ತೆ ಅನ್ನೋದನ್ನ ಹೇಳಲಾಗುತ್ತಿದೆ.
ನೀವು ಶುದ್ಧ ನೀರು, ಆರೋಗ್ಯವಂತರಾಗಿರಬಹುದು ಎಂದು ಸೇವಿಸುವ ನೀರು ಈಗ ಪ್ರಾಣಕ್ಕೆ ಸ್ಲೋ ಪಾಯ್ಸನ್ನಂತೆ ನಿಮ್ಮ ಜೀವಕ್ಕೆ ಮಾರಕವಾಗಿ ಮಾರ್ಪಾಡಾಗುತ್ತಿದೆ. ಈ ಕುರಿತಾಗಿ ಖುದ್ದು ವಿಶ್ವ ಆರೋಗ್ಯ ಸಂಸ್ಥೆಯೇ ಎಚ್ಚರಿಕೆ ನೀಡಿದೆ. ರಿವರ್ಸ್ ಆಸ್ಮೋಯ್ಸಿಸ್/ಆರ್ ಒ ಫಿಲ್ಟರ್ ವಾಟರ್ ನೀರಿನಲ್ಲಿರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುವುದಷ್ಟೇ ಅಲ್ಲದೇ, ನೀರಿನಲ್ಲಿರುವ ಉಪ್ಪಿನಾಂಶ ಹಾಗೂ ಕ್ಯಾಲ್ಸಿಯಂ ಮತ್ತು ಮೆಗ್ನೀಶಿಯಂನಂತಹ ಅಗತ್ಯ ಪೋಷಕಾಂಶಗಳನ್ನೂ ತೆಗೆದು ಹಾಕುತ್ತದೆ.
ಹೀಗಿರುವಾಗಲೇ ಸರ್ಕಾರವೂ ‘ಶುದ್ಧ ಕುಡಿಯುವ ನೀರಿನ ಘಟಕ’ ಎಂಬ ಹೆಸರಿನಲ್ಲಿ RO ಫಿಲ್ಟರ್ ಪ್ಲಾಂಟ್ ಗಳನ್ನು ಸ್ಥಾಪಿಸುತ್ತಿದೆ. ಹೀಗಿರುವಾಗ ಕಡಿಮೆ ಬೆಲೆಗೆ ನೀರು ಸಿಗುತ್ತದೆ ಎಂದು ಅದನ್ನೇ ಕುಡಿದರೆ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಸಿಗದೆ ಅನಾರೋಗ್ಯ ಬಾಧಿಸುವುದರಲ್ಲಿ ಅನುಮಾನವಿಲ್ಲ.
ಈ ಕುರಿತಾಗಿ ಪ್ರತಿಕ್ರಿಯಿಸಿರುವ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ಎ. ಆರ್. ಶಿವಕುಮಾರ್ ‘ವಾಟರ್ ಫಿಲ್ಟರ್ ಉದ್ಯಮ ಮಾಫಿಯಾವಾಗಿ ಮಾರ್ಪಾಡಾಗಿದೆ. ಹೀಗಾಗಿ ಅವರ ಉದ್ಯಮಕ್ಕೆ ಧಕ್ಕೆಯುಂಟು ಮಾಡುವ ಯಾವುದೇ ಅಧ್ಯಯನವನ್ನು ಅವರು ಒಪ್ಪಿಕೊಳ್ಳುವುದಿಲ್ಲ’ ಎಂದಿದ್ದಾರೆ.