ಅಂತರಾಷ್ಟ್ರೀಯ ಮಟ್ಟದಲ್ಲಿ ಇತ್ತೀಚಿಗೆ ಮಹಿಳೆಯರು ತುಂಬಾನೇ ಹೆಸರು ಮಾಡುತಿದ್ದಾರೆ, ಇದಕ್ಕೆ ಪ್ರತ್ಯಕ್ಷೆ ಸಾಕ್ಷಿ ಎಂದರೆ. ನಮ್ಮ ಹೆಮ್ಮೆಯ ಕನ್ನಡತಿ ಸ್ನೇಹಾ ರಾಕೇಶ್ ಇವರು ಇಯುಇಂಡಿಯಾ 40′ ಜನರ ಪಟ್ಟಿಯಲ್ಲಿ 16 ಮಹಿಳೆಯರು ಮತ್ತು 24 ಪುರುಷ ನವೋದ್ಯಮಿಗಳಲ್ಲಿ ಈ ಒಂದು ಸ್ಥಾನವನ್ನು ಪಡೆದುಕೊಂಡಿದ್ದಾರೆ ಈ ಒಂದು ದೊಡ್ಡ ಸಮಾರಂಭದಲ್ಲಿ ನಮ್ಮ ಭಾರತವನ್ನು ಪ್ರತಿನಿಧಿಸಿ ಮಾತನಾಡಿ ದೇಶದ ಮೊದಲ ಕನ್ನಡದ ಯುವ ಉದ್ಯಮಿಯಾಗಿದ್ದಾರೆ. ಇವರ ಈ ಸಾಧನೆಗೆ ಇದೆ ದೇಶವೇ ಅಭಿನಂದನೆ ಸಲ್ಲಿಸಿದೆ. ಹಾಗದ್ರೆ ಸ್ನೇಹಾ ರಾಕೇಶ್ ಯಾರು ಯಾವ ಊರಿನವನು ಮತ್ತು ಇವರ ಹಿನ್ನೆಲೆ ಏನು ಅನ್ನೋದು ಇಲ್ಲಿದೆ ನೋಡಿ.
ಡಾ.ಸ್ನೇಹಾ ರಾಕೇಶ್. ವೃತ್ತಿ ಶ್ರೇಷ್ಠತೆಗೆ ಕೊಡುವ ಡಾ. ಎಪಿಜೆ ಅಬ್ದುಲ್ ಕಲಾಂ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಇವರ ಸಾಕಷ್ಟು ಸವಾಲುಗಳನ್ನು ಎದುರಿಸಿಯೇ ತಂತ್ರಜ್ಞಾನ ಕ್ಷೇತ್ರದಲ್ಲಿ 2018ರ ಸಾಲಿನ ದೇಶದ ಪ್ರಬಲ ಮಹಿಳೆಯರಲ್ಲಿ 6ನೇ ಸ್ಥಾನ ಪಡೆದುಕೊಂಡು 22ನೇ ವಯಸ್ಸಿನಲ್ಲೇ ಅಕರ್ವಾಕ್ಸ್ ಟೆಕ್ನಾಲಜಿ ಪ್ರವೇಟ್ ಲಿಮಿಟೆಡ್ ಎನ್ನುವ ಐಟಿ ಕಂಪನಿಯನ್ನು ಸ್ಥಾಪಿಸಿದ ಇವರು ಅಪ್ಪಟ ಕನ್ನಡತಿ ಎನ್ನುವುದು ಹೆಮ್ಮೆಯಾಗಿದೆ. ಸ್ವಂತ ಉದ್ಯಮ ಪ್ರಾರಂಭಿಸಬೇಕೆಂಬ ಕನಸು ಕಂಡು ಬಾಲ್ಯದಲ್ಲಿ ವಿವಿಧ ಕಷ್ಟಗಳನ್ನು ಅನುಭವಿಸಿರುವ ಸ್ನೇಹಾ ಅವರ ಮನೋಸ್ಥೈರ್ಯ ಮಾತ್ರ ಯಾವತ್ತೂ ಕುಗ್ಗಿಲ್ಲ, ತಾತನ ಮಾರ್ಗದರ್ಶನದಲ್ಲೇ ಬೆಳೆದವರು. ಹುಟ್ಟೂರು ಹಾಸನದ ಚೆನ್ನರಾಯಪಟ್ಟಣ ತಾಲೂಕಿನ ಹುಲ್ಲೇನಹಳ್ಳಿ. ಸರ್ಕಾರಿ ಶಾಲೆಯಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ.
ಸರ್ಕಾರಿ ಹಾಸ್ಟಲ್ನಲ್ಲಿದ್ದುಕೊಂಡು ಡಿಪ್ಲೊಮಾ ಓದಿದರು. ಬೆಂಗಳೂರಿಗೆ ಬಂದು ಕೆಲಸಕ್ಕೆ ಸೇರಿಕೊಂಡಾಗ ಎಲ್ಲೂ ದೀರ್ಘಕಾಲ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಹಳ್ಳಿಯಿಂದ ಬಂದಿದ್ದರಿಂದ ಸಂವಹನ ಕೌಶಲವೂ ಅಷ್ಟೇನೂ ಉತ್ತಮವಾಗಿರಲಿಲ್ಲ. ಹಾಗೆಂದು ಸುಮ್ಮನೆ ಕೂರದೆ ಉದ್ಯೋಗದ ಜತೆಜತೆಗೆ ಎಜುಕೇಶನ್ ಲೋನ್ ಪಡೆದು ಶ್ರಮವಹಿಸಿ ಇಂಜಿನಿಯರಿಂಗ್ ಪದವಿ ಹಾಗೂ ರಾಮಯ್ಯ ಕಾಲೇಜಿನಲ್ಲಿ ಎಂಎಸ್ಸಿ ಪೂರ್ಣಗೊಳಿಸಿದರು. ವಿದ್ಯಾಭ್ಯಾಸದ ಜತೆಗೇ ಆನ್ಲೈನ್ನಲ್ಲಿ ಫ್ರೀಲಾನ್ಸರ್ಆಗಿ ಪ್ರಾಜೆಕ್ಟ್ ಪ್ರಾರಂಭದಲ್ಲಿ ಆರ್ಥಿಕ ಸಮಸ್ಯೆ ಕಾಡಿತು.
ಈಗ ಇವರೇ ನೂರಾರು ಜನರಿಗೆ ಕೆಲಸ ನೀಡುತ್ತಿದ್ದು ಸ್ನೇಹಾರ ಅಕರ್ವಾಕ್ಸ್ ಕಂಪನಿ ವೆಬ್ ರಿಸರ್ಚ್, ಆಪ್ ಡೆವಲಪ್ವೆುಂಟ್, ಸಾಫ್ಟ್ವೇರ್ ಡೆವಲಪ್ವೆುಂಟ್, ವೆಬ್ ಬೇಸ್ಡ್ ಸಾಫ್ಟ್ವೇರ್ ಡೆವಲಪ್ವೆುಂಟ್, ಪ್ರಾಜೆಕ್ಟ್ ಔಟ್ಸೋರ್ಸ್, ಇನ್ಫಾಮೇಷನ್ ಟೆಕ್ನಾಲಜಿ, ಡಿಜಿಟಲ್ ಮಾರ್ಕೆಟಿಂಗ್ ಸರ್ವೀಸಸ್ ಇತ್ಯಾದಿ ಸೇವೆ ನೀಡುತ್ತದೆ. 017ರಲ್ಲಿ ಸ್ನೇಹಾ ಸಮಗ್ರ ಅಭಿವೃದ್ಧಿ ಟ್ರಸ್ಟ್ ಆರಂಭಿಸಿ ಈ ಮೂಲಕ ಸುಮಾರು 2000 ಯುವಕ-ಯುವತಿಯರಿಗೆ ತರಬೇತಿ ನೀಡಿದ್ದಾರೆ. ನಿರುದ್ಯೋಗಿಗಳಿಗೆ, ಆರ್ಥಿಕವಾಗಿ ಹಿಂದುಳಿದ ಯುವಕರಿಗೆ ಐಟಿ ಕ್ಷೇತ್ರದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಬೇಕಾದ ಕೌಶಲಗಳನ್ನು ತರಬೇತಿ ಮೂಲಕ ಹೇಳಿಕೊಡುತ್ತಿದ್ದಾರೆ. ಇದೇ ತರಬೇತಿ ಬೇರೆಡೆ ಪಡೆಯಲು ಕನಿಷ್ಠ 25ರಿಂದ 30 ಸಾವಿರ ರೂ. ಪಾವತಿಸಬೇಕು. ಆದರೆ ಇಲ್ಲಿ ಉಚಿತವಾಗಿ ತರಬೇತಿ ನೀಡಲಾಗುತ್ತದೆ.
ಇವರ ಈ ಸಾಧನೆಗೆ ಗ್ಲೋಬಲ್ ಅಚೀವರ್ ಮಹಾತ್ಮ ಗಾಂಧಿ ಲೀಡರ್ಷಿಪ್ ಅವಾರ್ಡ್(ಹೌಸ್ ಆಫ್ ಕಾಮನ್ಸ್, ಬ್ರಿಟಿಷ್ ಪಾರ್ಲಿಮೆಂಟ್, ಯುಕೆ), ಇಂಟರ್ನ್ಯಾಷನಲ್ ಅಚೀವರ್ ಅವಾರ್ಡ್ (ಬ್ಯಾಂಕಾಕ್), ಹಿಂದು ರತ್ನ ಅವಾರ್ಡ್ (ದೆಹಲಿ), ನ್ಯಾಚುರಲ್ ರಿಸೋರ್ಸ್ ಆಫ್ ಇಂಡಿಯಾ ಅವಾರ್ಡ್(ಚಂಡೀಗಢ), ಕಾಯಕ ರತ್ನ ಪ್ರಶಸ್ತಿ, ಕೆಂಪೇಗೌಡ ರಾಜ್ಯ ಪ್ರಶಸ್ತಿ, ರಾಷ್ಟ್ರೀಯ ಯುವ ಪುರಸ್ಕಾರ, ವರ್ಷದ ಮಹಿಳಾ ಸಾಧಕಿ(2018) ಅಲ್ಲದೆ ಸಾಕಷ್ಟು ಪುರಸ್ಕಾರಗಳು ಸ್ನೇಹಾ ಅವರಿಗೆ ಸಂದಿವೆ. ಸಂಗ್ರಹ ಮಾಹಿತಿ.