WhatsApp Group Join Now

ಈ ಅಮೂಲ್ಯವಾದ ವಸ್ತು ಮುತ್ತು ಕೇವಲ ಸಮುದ್ರದ ಕಪ್ಪೆ ಚಿಪ್ಪಿನಲ್ಲಿ ಮಾತ್ರ ಲಭ್ಯ ಎಂಬ ಕಲ್ಪನೆ ನಮ್ಮಲ್ಲಿದೆ. ಆದರೆ ಅದನ್ನು ನಮ್ಮ ಮನೆಯ ಸಿಹಿ ನೀರಿನಲ್ಲಿ ಸಹ ಉತ್ಪಾದಿಸಬಹುದು. ಮುತ್ತಿನ ಕೃಷಿ ಅಂದರೆ ನೆನಪಾಗೋದು ಜಪಾನ್ ಮತ್ತು ಚೀನಾ. ಈ ಎರಡು ದೇಶಗಳನ್ನು ಹೊರತು ಪಡಿಸಿದರೆ ನೆಕ್ಸ್’ಟ್ ಭಾರತದಲ್ಲೆ ಮುತ್ತಿನ ಕೃಷಿಯ ಲಾಭವನ್ನು ಬೆರಳೆಣಿಕೆಯ ರೈತರು ಪಡೆಯುತ್ತಿದ್ದಾರೆ.

ಹರಿಯಾಣದಲ್ಲಿ ಎಂಜಿನಿಯರಿಂಗ್ ಉದ್ಯೋಗ ಬಿಟ್ಟು ಮುತ್ತಿನ ಕೃಷಿಯಲ್ಲಿ ತೊಡಗಿಕೊಂಡಿರುವ ವಿನೋದ್ ಅತ್ಯಂತ ಲಾಭವನ್ನು ಪಡೆಯುತ್ತಿದ್ದಾರೆ.

ವಿನೋದ್ ಯಾದವ್ ವೃತ್ತಿಯಲ್ಲಿ ಎಂಜಿನಿಯರ್, ಹರಿಯಾಣದ ಗುರುಗ್ರಾಮ್ ಜಿಲ್ಲೆಯ ಜಮಲ್ಪುರ ಗ್ರಾಮದವನು. ಆದರೆ ಈತನ ಕಾಯಕ ಮುತ್ತಿನ ಕೃಷಿ. ಮೀನುಗಾರಿಕೆ ಮಾಡುವ ಆಸೆಯಿಂದ ವಿನೋದ್ ಎಂಜಿನಿಯರ್ ವೃತ್ತಿಯನ್ನು ಕೈ ಬಿಟ್ಟರು..

ತನಗಿದ್ದ ⅕ಎಕರೆ ಜಮೀನಿನಲ್ಲಿ ಮೀನು ಸಾಕಾಣಿಕೆ ಮಾಡಲು ಮುಂದಾದಾರು. 2016 ರಲ್ಲಿ ಜಿಲ್ಲೆಯ ಮೀನುಗಾರಿಕಾ ಇಲಾಖೆಗೆ ಅವರ ಚಿಕ್ಕಪ್ಪ ಸುರೇಶ್ ಕುಮಾರ್ ಅವರೊಂದಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆದರು. ದುರದೃಷ್ಟವಶಾತ್, ತನಗಿದ್ದ ಭೂಮಿಯಲ್ಲಿ ಮೀನು ಸಾಕಾಣಿಕೆ ಮಾಡಲು ಸಾಧ್ಯವಿಲ್ಲ ಎಂಬುದನ್ನು ಅರಿತರು.

ಇದನ್ನು ಗಮನಿಸಿದ ಜಿಲ್ಲಾ ಮೀನುಗಾರಿಕಾ ಅಧಿಕಾರಿ ಧರ್ಮೇಂದ್ರ ಸಿಂಗ್, ಮೀನು ಕೃಷಿ ಬದಲಾಗಿ ಮುತ್ತುಗಳನ್ನು ಬೆಳೆಸುವಂತೆ ಸೂಚಿಸಿದರು. ಇದಕ್ಕೆಂದೆ ಭುವನೇಶ್ವರದ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಫ್ರೆಶ್ವಾಟರ್ ಅಕ್ವಾಕಲ್ಚರ್ಗೆ ಯಾದವ್ ಅವರನ್ನು ಮುತ್ತು ಸಂಸ್ಕೃತಿಯಲ್ಲಿ ಒಂದು ತಿಂಗಳ ತರಬೇತಿ ಕಾರ್ಯಕ್ರಮಕ್ಕಾಗಿ ಕಳುಹಿಸಿದರು.

ವಿನೋದ್, ತರಬೇತಿ ಮುಗಿಸಿಕೊಂಡು ಬಂದು ಮುತ್ತಿನ ಕೃಷಿಯನ್ನು ಆರಂಭಿಸಿದರು. ಈಗ ಮುತ್ತಿನ ಕೃಷಿ ಉದ್ಯಮವು ವರ್ಷಕ್ಕೆ ₹ 4 ಲಕ್ಷಕ್ಕಿಂತ ಹೆಚ್ಚು ಹಣವನ್ನು ಗಳಿಸುವ ಮೂಲಕ ಸಾಕಷ್ಟು ಲಾಭದಾಯಕವೆಂದು ವಿನೋದ್ ಸಾಬೀತುಪಡಿಸಿದ್ದಾರೆ..

ಧರ್ಮೇಂದ್ರ ಸಿಂಗ್ ಪ್ರಕಾರ, ಗುರುಗ್ರಾಮ ೩ ರಾಜ್ಯದ ಮುಂಚಿನ ಜಿಲ್ಲೆಯಾಗಿದೆ. ಅಲ್ಲದೇ ಮುತ್ತು ಕೃಷಿ ಬೆಳೆದು ಉತ್ತಮ ಫಲಿತಾಂಶಗಳನ್ನು ನೋಡಿದೆ. ಇದನ್ನು ಕಂಡ ಇತರ ಜಿಲ್ಲೆಗಳು ಮುತ್ತಿನ ಕೃಷಿಯಲ್ಲಿ ಹೂಡಿಕೆ ಮಾಡುವ ಸಾಧ್ಯತೆ ಇದೆ ಎಂದಿದ್ದಾರೆ.

“ಅಲ್ಲದೆ, ಮೀನುಗಾರಿಕೆ ಇಲಾಖೆಯು ರೈತರಿಗೆ ಮುತ್ತುಗಳನ್ನು ಬೆಳೆಸುವಲ್ಲಿ ಶೇ.50 ರಷ್ಟು ಸಬ್ಸಿಡಿ ನೀಡುತ್ತದೆ” ಎಂದು ಅವರು ಐಎಎನ್ಎಸ್’ಗೆ ತಿಳಿಸಿದ್ದಾರೆ. ಭಾರತದಲ್ಲಿ, ಮುತ್ತು ಕೃಷಿಗೆ ಮೂಲಸೌಕರ್ಯವನ್ನು ಸಿದ್ಧಪಡಿಸಲು ಸುಮಾರು 40,000/- ರೂಪಾಯಿ ಬೇಕಾಗುತ್ತದೆ. ಸಂಗ್ರಹ ದಿ ನ್ಯೂಸಿಸ್ಮ್.

WhatsApp Group Join Now

Leave a Reply

Your email address will not be published. Required fields are marked *